ಮುಂಬೈ: ಹಿಂದಿ, ತಮಿಳು, ತೆಲುಗು ಮೊದಲಾದ ಭಾಷಾ ಚಿತ್ರಗಳಲ್ಲಿ ನಟಿಸಿ ದೇಶದ ಸಿನಿಪ್ರಿಯರ ಗಮನ ಸೆಳೆದಿರುವ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು, ತಾವು ಎದುರಿಸಿದ ಆಘಾತಕಾರಿ ಸನ್ನಿವೇಶವನ್ನು ಬಹಿರಂಗಪಡಿಸಿದ್ದಾರೆ.
ವೇದಿಕೆಯೊಂದರಲ್ಲಿ ಮಹಿಳೆಯೊಬ್ಬರು ತನ್ನ ನಿತಂಬವನ್ನು ಅಮುಕಿದ್ದರು ಎಂದು ದುಲ್ಕರ್ ಸಲ್ಮಾನ್ ಹೇಳಿರುವುದು ಇಂಟರ್ನೆಟ್ ಬಳಕೆದಾರರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
BeerBiceps ಎಂಬ ಯೂಟ್ಯೂಬ್ ಚಾನೆಲ್ ಜೊತೆ ನಡೆದ ಸಂದರ್ಶನದಲ್ಲಿ ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಪುತ್ರ ತಮಗೆದುರಾದ ಕಹಿ ಘಟನೆಯನ್ನು ವಿವರಿಸಿದ್ದಾರೆ.
ದುಲ್ಕರ್ ಸಲ್ಮಾನ್ರಿಗೆ ಕೇರಳದ ಹೊರಗೆ ಮಹಿಳಾ ಅಭಿಮಾನಿಯರು ಜಾಸ್ತಿ ಇದ್ದು, ಓ ಕಾದಲ್ ಕನ್ಮಣಿ, ಸೀತಾ ರಾಮಮ್ ಮೊದಲಾದ ಚಿತ್ರಗಳ ಬಳಿಕ ಅವರ ಮಹಿಳಾ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ.
ಮಹಿಳಾ ಅಭಿಮಾನಿಗಳ ಬಗ್ಗೆ ಸಂದರ್ಶಕ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮಹಿಳಾ ಅಭಿಮಾನಿಯೊಬ್ಬರು ತನ್ನ ಅನುಮತಿ ಇಲ್ಲದೆ, ನನ್ನ ದೇಹವನ್ನು ಅನುಚಿತವಾಗಿ ಸ್ಪರ್ಷಿಸಿರುವುದರ ಬಗ್ಗೆ ವಿವರಿಸಿದ್ದಾರೆ.
ಮಹಿಳೆಯರು ನನ್ನೊಂದಿಗೆ ಫೋಟೋ ತೆಗೆದು, ಬಳಿಕ ಕೆಲವೊಂದು ಬಾರಿ ಏಕಾಏಕಿ ನನ್ನ ಕೆನ್ನೆಗೆ ಮುತ್ತಿಡುತ್ತಾರೆ. ಅವರು ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನೊಂದು ಬಾರಿ ಹಿರಿಯ ಮಹಿಳೆಯೊಬ್ಬರು ನನ್ನ ನಿತಂಬವನ್ನು ಅನುಚಿತವಾಗಿ ಸ್ಪರ್ಷಿಸಿದ್ದರು. ಅದೊಂದು ವಿಚಿತ್ರ ಹಾಗೂ ವಿಲಕ್ಷಣ ಸನ್ನಿವೇಶವಾಗಿತ್ತು. ಅದು ಯಾವ ಉದ್ದೇಶದ ಸ್ಪರ್ಷ ಎಂದು ನನಗೆ ಗೊತ್ತಿಲ್ಲ. ಆದರೆ, ಮಹಿಳೆ ಎಷ್ಟು ಗಟ್ಟಿಯಾಗಿ ಒತ್ತಿದ್ದರೆಂದರೆ, ನನಗೆ ಅದರಿಂದ ನೋವಾಗಿತ್ತು. ವೇದಿಕೆಯ ಮೇಲೆ ಬಹಳ ಮಂದಿ ಇದ್ದರು. ಕೊನೆಗೆ ನಾನು ಈ ಕಡೆಗೆ ಬರುವಂತೆ ಆ ಮಹಿಳೆಗೆ ಹೇಳಿಕೊಂಡೆ ಎಂದು ದುಲ್ಕರ್ ಸಲ್ಮಾನ್ ಹೇಳಿದ್ದಾರೆ.
ದುಲ್ಕರ್ ಸಲ್ಮಾನ್ ಅವರ ಸಂದರ್ಶನದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೇ ಘಟನೆ ನಟಿಯೊಂದಿಗೆ ನಡೆದಿದ್ದರೆ ಪ್ರತಿಕ್ರಿಯೆಗಳು ಹೇಗಿರುತ್ತಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ. ಪುರುಷರ ದೇಹಗಳು ಒಪ್ಪಿಗೆ ಇಲ್ಲದೆ ಮುಟ್ಟುವಂತಿಲ್ಲ ಎನ್ನುವುದನ್ನು ಕೆಲವು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದೂ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.