~ಡಾ. ಜೆ ಎಸ್ ಪಾಟೀಲ.
ಮುಖರ್ಜಿಯವರು ಈ ಕುರಿತು ಒಮ್ಮೆ ಕಲ್ಕತ್ತಾ ಸಮಾವೇಷದಲ್ಲಿ ಬಂಗಾಳ ವಿಭಜನೆಗೆ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆˌ ಮುಖರ್ಜಿಯವರು ಮೇ ೨, ೧೯೪೭ ರಂದು, ಭಾರತ ಅಖಂಡವಾಗಿದ್ದರೂ ಸಹ ಬಂಗಾಳವನ್ನು ಮಾತ್ರ ವಿಭಜಿಸಲೇಬೇಕೆಂದು ಅಂದಿನ ವೈಸ್ ರಾಯ್ ಲೂಯಿಸ್ ಮೌಂಟ್ ಬ್ಯಾಟನ್‌ಗೆ ರಹಸ್ಯವಾಗಿ ಪತ್ರ ಕೂಡ ಬರೆದಿದ್ದರು. ಬಂಗಾಳ ವಿಭಜನೆಯನ್ನು ತಪ್ಪಿಸಿ ಅಖಂಡ ಹಾಗೂ ಸ್ವತಂತ್ರ ಬಂಗಾಳವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಂದಿನ ಬಂಗಾಳದ ಪ್ರಧಾನಿ ಹುಸೇನ್ ಸುಹ್ರಾವಾರ್ಡಿ ಮತ್ತು ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರಾದ ಸುಭಾಷ್ ಚಂದ್ರ ಬೋಸ್ ಸಹೋದರ ಶರತ್ ಚಂದ್ರ ಬೋಸ್ ಹಾಗು ಕಿರಣ್ ಶಂಕರ್ ರಾಯ್ ಅವರು ಮುಂದಿಟ್ಟ ಯೋಜನೆಯನ್ನು ಶ್ಯಾಮಾಪ್ರಸಾದ್ ಮುಖರ್ಜಿ ತೀವ್ರವಾಗಿ ವಿರೋಧಿಸಿದ್ದರು. ಅದಕ್ಕೆ ಪರ್ಯಾಯವಾಗಿ ದ್ವಿರಾಷ್ಟ್ರ ಸಿದ್ಧಾಂತದ ಪ್ರಕಾರ ಕೋಮು ವಿಭಜನೆಗೆ ಅವರು ಆದ್ಯತೆ ನೀಡಿದರು. ಬಂಗಾಳ ವಿಭಜನೆಯು ಸರಿಯಲ್ಲ ಎನ್ನುವ ಬಗ್ಗೆ ತದನಂತರದಲ್ಲಿ ಮುಖರ್ಜಿಯವರಿಗೆ ಮನವರಿಕೆಯಾಯ್ತು.

೧೯೫೧ ರ ಹೊತ್ತಿಗೆ ಬಂಗಾಳ ವಿಭಜನೆಯನ್ನು ರದ್ದುಗೊಳಿಸುವಂತೆ ಮುಖರ್ಜಿಯವರು ಹೇಳಿಕೆ ನೀಡಿದ್ದರು. ಆದರೆˌ ಕಾಲ ಮಿಂಚಿಹೋಗಿತ್ತು. ಆಗ ಪೂರ್ವ ಬಂಗಾಳವು ಪಾಕಿಸ್ತಾನದ ಭಾಗವಾಗಿತ್ತು. ಮುಖರ್ಜಿಯವರ ಬೇಡಿಕೆಯ ಪೂರೈಕೆ ಅಸಾಧ್ಯವಾಗಿತ್ತು ಹಾಗೂ ಅದಕ್ಕೆ ಯಾವುದೇ ಬೆಲೆ ಉಳಿದಿರಲಿಲ್ಲ. ಈ ಸಿನಿಕತನ ಮತ್ತು ದ್ವಂದ್ವ ವಿಚಾರಗಳಿಂದ ಮುಖರ್ಜಿಯವರಿಗೆ ಯಾವುದೇ ಸಹಾಯವಾಗಲಿಲ್ಲ. ಮುಂದೆ ೧೯೫೨ ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಜನ ಸಂಘ ಪಕ್ಷವು ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಯಲ್ಲಿ ಕಡಿಮೆ ಸ್ಥಾನಗಳನ್ನು ಗೆದ್ದಿತು. ಆನಂತರದ ಕಾಲಘಟ್ಟದಲ್ಲಿ ಹಿಂದುತ್ವ ರಾಜಕಾರಣದ ಹೊರತಾಗಿಯೂ ಬಂಗಾಳ ವಿಭಜನೆಯ ಮುಖ್ಯ ಸಂತ್ರಸ್ಥರು, ಪೂರ್ವ ಬಂಗಾಳದಿಂದ ವಲಸೆ ಬಂದ ಹಿಂದೂಗಳು ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಮಾರ್ಕಿಸ್ಟ್)ಯ ಮತ ಬ್ಯಾಂಕಾಗಿ ಪರಿವರ್ತನೆಯಾದರು. ಅಂದು ಬಂಗಾಳದಲ್ಲಿ ಹಿಂದುತ್ವದ ರಾಜಕಾರಣ ಧೂಳಿಪಟವಾಯ್ತು.
*ಶ್ಯಾಮಾಪ್ರಸಾದ ಮುಖರ್ಜಿ ಒಬ್ಬ ಧಾರ್ಮಿಕ ಮೂಲಭೂತವಾದಿಯಾಗಿದ್ದರು.*
ಪ್ರಸಿದ್ಧ ಶಿಕ್ಷಣ ತಜ್ಞ ಸರ್ ಆಶುತೋಷ್ ಮುಖರ್ಜಿ ಅವರ ಮಗನಾಗಿದ್ದ ಶ್ಯಾಮಾಪ್ರಸಾದ್ ಮುಖರ್ಜಿ ಒಳ್ಳೆಯ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದರೂ ಕೂಡ ಒಬ್ಬ ಬಲಪಂಥೀಯ ಧಾರ್ಮಿಕ ಮೂಲಭೂತವಾದಿಯಾಗಿದ್ದರು. ಮುಖರ್ಜಿಯವರ ಜಾತಿವಾದ ಮತ್ತು ಕೋಮು ಮನಸ್ಥಿತಿಯ ಕಾರಣದಿಂದ ಸ್ವತಂತ್ರ ಪೂರ್ವದ ಕೆಲವು ವರ್ಷಗಳ ಹಿಂದೆ ಬಂಗಾಳ ಪ್ರದೇಶದ ಬರಗಾಲದ ಸಂದರ್ಭದಲ್ಲಿ ಅವರ ನೇತ್ರತ್ವದ ಹಿಂದೂ ಮಹಾಸಭೆಯು ಸರ್ಕಾರಿ ಉಪಹಾರ ಗೃಹಗಳಲ್ಲಿ ಅಲ್ಪಸಂಖ್ಯಾತರು ಮತ್ತು ಕೆಳಜಾತಿಯ ಅಡುಗೆಯವರನ್ನು ನೇಮಿಸಿಕೊಳ್ಳುವುದು ವಿರೋಧಿಸಿತು. ಮೇಲ್ಜಾತಿಯ ಬಡ ಹಿಂದೂಗಳು ಶ್ರೇಷ್ಟತೆಯ ವ್ಯಸನಕ್ಕೆ ಬಲಿಯಾಗಿ ಸರಕಾರಿ ಉಪಹಾರ ಗೃಹಗಳಲ್ಲಿ ಊಟ ಮಾಡುವುದನ್ನು ನಿಲ್ಲಿಸಿದರು. ಬರಗಾಲದ ಆ ಸಂದಿಗ್ಧ ಸಮಯದಲ್ಲಿ ಹಿಂದೂ ಮಹಾಸಭಾದ ಈ ಜಾತಿವಾದಿ ನಿಲುವು ಸುಮಾರು ಮೂರು ಲಕ್ಷ ಬಂಗಾಳಿಗಳು ಹಸಿವಿನಿಂದ ಸಾಯುವಂತೆ ಮಾಡಿತು. ಆದ್ದರಿಂದ ಬಂಗಾಳ ಸರ್ಕಾರವು ಹಿಂದೂ ಮಹಾಸಭಾ ವಿರುದ್ಧ ಕೋಮು ಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮಾಡಿತು.
ಹಿಂದೂ ಮಹಾಸಭಾ ಆ ವಿಪತ್ತಿನ ಸಂದರ್ಭದಲ್ಲಿ ಮಾಡಿದ ಈ ಮಹಾ ಪ್ರಮಾದವನ್ನು ಅಂದಿನ ಪ್ರಸಿದ್ದ ದಿ ಹಿಂದೂ ಪತ್ರಿಕೆಯಲ್ಲಿ ವರದಿಯಾಗಿತ್ತು. ಶ್ಯಾಮಾಪ್ರಸಾದ್ ಮುಖರ್ಜಿಯವರು ಜಾತಿಯತೆˌ ಕೋಮು ಪಕ್ಷಪಾತ ಮತ್ತು ಧರ್ಮಾಂಧತೆಯ ಮಿಶ್ರ ವ್ಯಕ್ತಿತ್ವ ಹೊಂದಿದ್ದರು ಎನ್ನುವುದು ಆಗಿನ ಕಾಲದ ಅನೇಕ ಚಿಂತಕರ ಕಟು ವಿಮರ್ಶೆಯಾಗಿತ್ತು. ಮೇಲ್ಜಾತಿಯ ಶ್ರೇಷ್ಠತೆಯ ವ್ಯಸನ ಅವರನ್ನು ಆ ರೀತಿಯ ಅಲ್ಪತನಕ್ಕೆ ದೂಡಿತ್ತು ಎನ್ನುವ ಟಿಪ್ಪಣಿಗಳು ವ್ಯಕ್ತವಾಗಿದ್ದವು. ಸ್ವಾತಂತ್ರ ಪೂರ್ವದಲ್ಲಿ ವ್ಯಕ್ತವಾದ ಮುಖರ್ಜಿಯವರ ದ್ವಂದ್ವ ನಿಲುವುಗಳು ಸ್ವಾತಂತ್ರಾ ನಂತರವೂ ಮುಂದುವರೆದವು. ಹಿಂದೂ ಕಾನೂನನ್ನು ಸುಧಾರಿಸುವ ಹಾಗೂ ಆಧುನೀಕರಿಸುವ ನೆಹರೂ ಮತ್ತು ಅಂಬೇಡ್ಕರ್ ಅವರ ಪ್ರಯತ್ನಗಳನ್ನು ತಡೆಯಲು ಶ್ಯಾಮಾಪ್ರಸಾದ್ ಮುಖರ್ಜಿಯವರು ಬಹಳಷ್ಟು ಪ್ರಯತ್ನ ಮಾಡಿದರು. ಏಕಪತ್ನಿತ್ವದ ಮತ್ತು ವಿಚ್ಛೇಧನದ ಪರಿಸ್ಕರಣೆ ಮತ್ತು ಮಹಿಳಾ ಪರ ಕ್ರಮಗಳನ್ನು ಮುಖರ್ಜಿ ಬಲವಾಗಿ ವಿರೋಧಿಸಿದರು.

ಆ ಮೂಲಕ ಸನಾತನ ಪುರುಷ ಪ್ರಧಾನ ವ್ಯವಸ್ಥೆಯನ್ನು ಅವರು ಪ್ರತಿಪಾದಿಸಿದ್ದರು. ಮಹಿಳಾ ಪರ ಕಾನೂನುಗಳು ಸನಾತನ ಹಿಂದೂ ಧರ್ಮದ ಸಂಪ್ರದಾಯಗಳ ವಿರುದ್ಧ ಎನ್ನುವುದು ಮುಖರ್ಜಿಯವರ ನಿಲುವಾಗಿತ್ತು. ಸ್ವಾತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರಾ ನಂತರದ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆ ˌ ಧರ್ಮಾಧಾರಿತ ಕಾನೂನು ಮತ್ತು ಲಿಂಗಬೇಧಗಳ ಪ್ರಬಲ ಪ್ರತಿಪಾದಕನಾಗಿದ್ದ ಒಬ್ಬ ವ್ಯಕ್ತಿಯು ಇಂದಿನ ಬಿಜೆಪಿ ಆಡಳಿತದಲ್ಲಿ ಭಾರತಕ್ಕೆ ಒಬ್ಬ ಅಸಂಭವ ಮಾದರಿ ಪುರುಷನಾಗಿ ಬಿಂಬಿತವಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಶ್ಯಾಮಾಪ್ರಸಾದ್ ಮುಖರ್ಜಿ ಮತ್ತು ಸಾವರಕರ್ ಇಬ್ಬರೂ ಬ್ರಿಟಿಷರನ್ನು ಬೆಂಬಲಿಸುತ್ತಿದ್ದರು. ೧೯೪೨ ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯ ಸಮಯದಲ್ಲಿ ಮುಖರ್ಜಿ ಬಂಗಾಳದ ಎರಡನೇ ಅತ್ಯಂತ ಪ್ರಭಾವಿ ಹಣಕಾಸು ಸಚಿವ ಹುದ್ದೆಯಲ್ಲಿದ್ದರು. ಮುಖರ್ಜಿ ಪ್ರತಿನಿಧಿಸುತ್ತಿದ್ದ ಹಿಂದೂ ಮಹಾಸಭಾ ಪಕ್ಷವು ಬ್ರಿಟೀಷ್ ವಸಾಹತುಶಾಹಿ ಸರ್ಕಾರದೊಂದಿಗೆ ಸಹಕರಿಸಲು ನಿರ್ಧರಿಸಿತ್ತು.
ಮುಖರ್ಜಿ ಮತ್ತವರ ಪಕ್ಷದ ದೃಷ್ಟಿಯಲ್ಲಿ, ಅವರ ಮುಖ್ಯ ಹೋರಾಟವು ಬ್ರಿಟೀಷರೊಂದಿಗೆ ಇರುವ ಬದಲಿಗೆ ಭಾರತದ ಮುಸ್ಲಿಮರ ವಿರುದ್ಧವಾಗಿತ್ತು. ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಭಾಗವಹಿಸಲು ಬ್ರಿಟಿಷ್ ಸೈನ್ಯಕ್ಕೆ ಹಿಂದೂ ಸೈನಿಕರನ್ನು ನೇಮಿಸುವ ಕೆಲಸಕ್ಕೆ ಮುಖರ್ಜಿಯವರ ಹಿಂದೂ ಮಹಾಸಭಾ ಪಕ್ಷ ಸಹಾಯ ಮಾಡಿತು. ಮಹಾಸಭಾದ ನಾಯಕ ಸಾವರಕರ್ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಬ್ರೀಟೀಷ್ ಸೈನ್ಯ ಸೇರಲು ಹಿಂದೂಗಳಿಗೆ ಮನವಿ ಮಾಡಿದ ಘಟನೆಯೂ ನಡೆದಿತ್ತು. ಬಲಪಂಥೀಯರಿಗೆ ಬ್ರಿಟೀಷರ ಆಡಳಿತದ ವಿರುದ್ಧ ಹೋರಾಡುವುದಕ್ಕಿಂತ ದೇಶದೊಳಗಿನ ಅಲ್ಪಸಂಖ್ಯಾತರು ಮತ್ತು ದಲಿತ ದಮನಿತರ ವಿರುದ್ಧದ ಹೋರಾಟ ಮುಖ್ಯವಾಗಿತ್ತು. ದೇಶವು ಸ್ವತಂತ್ರಗೊಂಡು ಸಂವಿಧಾನವು ಅಂಗೀಕರಿಸಿದರೆ ದಲಿತ ದಮನಿತರೆಲ್ಲರೂ ಅಭಿವೃದ್ಧಿ ಹೊಂದುವುದು ಈ ಮೂಲಭೂತವಾದಿಗಳಿಗೆ ಬೇಕಿರಲಿಲ್ಲ. ಆ ಕಾರಣದಿಂದಲೇ ಅವರು ಗಾಂಧಿಜಿ ನೇತ್ರತ್ವದ ಸ್ವತಂತ್ರ ಸಂಗ್ರಾಮವನ್ನು ಬೆಂಬಲಿಸದೆ ಬ್ರಿಟೀಷರನ್ನು ಬೆಂಬಲಿಸುತ್ತ ಬಂದರು.
ಬ್ರಿಟೀಷರಿಗೂ ಕೂಡ ಮುಸ್ಲಿಂ ಮೂಲಭೂತವಾದಿಗಳು ಮತ್ತು ಹಿಂದೂ ಮೂಲಭೂತವಾದಿಗಳ ನಡುವಿನ ಕಲಹ ತಾರಕಕ್ಕೇರಿ ಸ್ವತಂತ್ರ ಚಳುವಳಿ ದಿಕ್ಕು ತಪ್ಪುವುದು ಬೇಕಾಗಿತ್ತು. ಶ್ಯಾಮಾಪ್ರಸಾದ್ ಮುಖರ್ಜಿಯವರ ಪಕ್ಷವು ಬಂಗಾಳದಲ್ಲಿ ಬ್ರಿಟಿಷರೊಂದಿಗೆ ಕೈಜೋಡಿಸುತ್ತ, ಬ್ರಿಟೀಷರ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಭಾರತ ಬಿಟ್ಟು ತೊಲಗಿ ಆಂದೋಲನವನ್ನು ವಿರೋಧಿಸಿತು. ಆ ಕಡೆ ಕಾಂಗ್ರೆಸ್ ಬ್ರಿಟೀಷರ ವಿರುದ್ಧ ಭಾರತ ಬಿಟ್ಟು ತೊಲಗಿ ಆಂದೋಲನ ಆರಂಭಿಸಿದ್ದರೆ ಈ ಕಡೆ ಮುಖರ್ಜಿ ಬಂಗಾಳದ ಬ್ರಿಟಿಷ್ ಗವರ್ನರ್ ಜಾನ್ ಹರ್ಬರ್ಟ್‌ಗೆ ಪತ್ರ ಬರೆಯುವ ಮೂಲಕ ಕಾಂಗ್ರೆಸ್ ವಿರುದ್ಧ ಹೋರಾಡುವ ಯೋಜನೆಯನ್ನು ರೂಪಿಸಿದರು. ಆಂತರಿಕ ದಂಗೆಯ ಸಂದೇಶವನ್ನು ರವಾನಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಭಾರತ ಬಿಟ್ಟು ತೊಲಗಿ ಆಂದೋಲನವನ್ನು ವಿಫಲಗೊಳಿಸಲು ಮುಖರ್ಜಿ ನೇತೃತ್ವದ ಹಿಂದೂ ಮಹಾಸಭಾ ಸಾಕಷ್ಟು ಪ್ರಯತ್ನಿತ್ತು ಮತ್ತು ಬ್ರಿಟೀಷರಿಗೆ ತಾವು ಬೆಂಬಲಿಸುವುದಾಗಿ ಮೇಲಿಂದ ಮೇಲೆ ಭರವಸೆ ಕೊಡುತ್ತಲೆ ಬಂದಿತ್ತು.

ಮುಖರ್ಜಿಯವರ ಈ ನಿಲುವು ಸಂಪೂರ್ಣ ಸ್ವಾತಂತ್ರ ಹೋರಾಟದ ಮತ್ತು ಭಾರತೀಯರ ಸ್ವರಾಜ್ಯ ಕನಸಿಗೆ ವಿರುದ್ಧವಾಗಿತ್ತು. ಎರಡನೇ ಜಾಗತಿಕ ಯುದ್ಧದಲ್ಲಿ ಭಾರತದ ಭಾಗವಹಿಸುವಿಕೆಯನ್ನು ವಿರೋಧಿಸಿ ಎಂಟು ಪ್ರಾಂತೀಯ ಕಾಂಗ್ರೆಸ್ ಸಚಿವಾಲಯಗಳ ರಾಜೀನಾಮೆಯನ್ನು ೧೯೩೯ ರಲ್ಲಿ ಮಹಮದ್ ಅಲಿ ಜಿನ್ನಾ ಸ್ವಾಗತಿಸಿದ್ದರು. ಆ ಘಟನೆಯನ್ನು ಜಿನ್ನಾ ವಿಮೋಚನಾ ದಿನವೆಂದು ಘೋಷಿಸಿದರು. ಜಿನ್ನಾರ ಈ ವಿಘಟನಕಾರಿ ನಿಲುವನ್ನು ಮುಸ್ಲಿಂ ಲೀಗ್‌ನ ಕಾರ್ಯಕಾರಿ ಸಮಿತಿಯ ಬಂಗಾಳಿ ಸದಸ್ಯರಾಗಿದ್ದ ಅಬ್ದುರ್ ರಹಮಾನ್ ಸಿದ್ದೀಕ್ ವಿರೋಧಿಸಿ ಮುಸ್ಲಿಂ ಲೀಗ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರು. ಜಿನ್ನಾರ ಈ ನಿಲುವು ಭಾರತೀಯ ರಾಷ್ಟ್ರೀಯ ಪ್ರತಿಷ್ಠೆಗೆ ಮಾಡಿದ ಅವಮಾನ ಮತ್ತು ಬ್ರಿಟಿಷ್ ವಸಾಹತುಶಾಹಿಯ ಚಮಚಾಗಿರಿ ಎಂದು ಸಿದ್ದೀಕ್ ಅವರು ಬಣ್ಣಿಸಿದ್ದರು. ಈ ರೀತಿಯ ಸಂದಿಗ್ಧ ಸನ್ನಿವೇಶದಲ್ಲಿ ಶ್ಯಾಮಾಪ್ರಸಾದ್ ಮುಖರ್ಜಿ ಅವರು ಬ್ರಿಟೀಷರ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನಿಸಿದರೆ ಹೊರತು ಭಾರತದ ಸ್ವಾತಂತ್ರ ಚಳುವಳಿಗೆ ಬೆಂಬಲಿಸಲಿಲ್ಲ.
ಆರಂಭದಲ್ಲಿ ತರುಣ ಅಟಲ್ ಬಿಹಾರಿ ವಾಜಪೇಯಿಯವರು ಕೂಡ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಸಿ ಬಂಧನಕ್ಕೊಳಗಾಗಿದ್ದರು. ಅದದಿಂದ ಭಯಭೀತರಾಗಿದ್ದ ವಾಜಪೇಯಿ ಬ್ರಿಟೀಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಬಿಡುಗಡೆಗೊಂಡರು. ಈ ಕುರಿತು ವಾಜಪೇಯಿ ಪ್ರಧಾನಿಯಾಗಿದ್ದಾಗ ಇಂದಿನ ಬಿಜೆಪಿ ಸದಸ್ಯ ಸುಬ್ರಮಣ್ಯಂ ಸ್ವಾಮಿ ವಾಜಪೇಯಿ ಮೇಲೆ ಗುರುತರ ಆರೋಪ ಮಾಡಿ ಪತ್ರಿಕೆಗಳಿಗೆ ದಾಖಲೆ ಬಿಡುಗಡೆ ಮಾಡಿದ್ದರು. ಸ್ವಾಮಿ ಹೇಳಿಕೆ ಆಧರಿಸಿ ಅಂದು ಆಂಗ್ಲ ನಿಯತಕಾಲಿಕ ಔಟ್ ಲುಕ್ ಆಗ್ರಾದ ಬಟೇಪುರ ನಿವಾಸಿ ಮತ್ತು ವಾಜಪೇಯಿಯೊಂದಿಗೆ ಚಲೆಜಾವ್ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆಗೊಳಗಾಗಿದ್ದ ವ್ಯಕ್ತಿಯೊಬ್ಬರ ಸಂದರ್ಶನ ಪ್ರಕಟಿಸಿತ್ತು. ಈ ಪ್ರಕರಣ ಸಂಸತ್ತಿನಲ್ಲಿ ಕೋಲಾಹಲ ಸ್ರಷ್ಟಿಸಿತ್ತು. ಹೀಗಿದ್ದಾಗ್ಯೂ ಹಿಂದೂ ಮಹಾಸಭಾˌ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮತ್ತು ಅದರ ಸ್ಥಾಪಕರು ದೇಶಭಕ್ತರು ಮತ್ತು ರಾಷ್ಟ್ರೀಯವಾದಿಗಳೆಂದು ಸ್ವಯಂಘೋಷಿಸಿಕೊಂಡು ಅಧುನಿಕ ಭಾರತದಲ್ಲೂ ಅನೇಕ ಅವಾಂತರಗಳು ಸೃಷ್ಠಿಸುವ ಕಾರ್ಯ ನಿಲ್ಲಿಸಿಲ್ಲ.
ನಮ್ಮ ಯುವ ಜನತೆಗೆ ಭಾರತ ನೈಜ ಸ್ವಾತಂತ್ರ ಸಂಗ್ರಾಮದ ಕಥೆಗಳಿಂದ ವಿಮುಖಗೊಳಿಸಿ ಸುಳ್ಳು ಇತಿಹಾಸವನ್ನು ಸಂಘ ಪರಿವಾರ ಸೃಷ್ಠಿಸುತ್ತಿದೆ. ಭಾರತದ ಸ್ವಾತಂತ್ರ ಹೋರಾಟದಲ್ಲಿ ಮೂಲಭೂತವಾದಿ ಸಂಘಟನೆಗಳಾದ ಹಿಂದೂ ಮಹಾಸಭಾˌ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅವುಗಳ ನಾಯಕರು ಭಾಗವಹಿಸಿರಲಿಲ್ಲ ಮತ್ತು ಅವರು ಸಂದರ್ಭಗಳಿಗನುಸಾರವಾಗಿ ಬ್ರಿಟೀಷರನ್ನು ಬೆಂಬಲಿಸಿದ್ದರು ಎನ್ನುವುದಕ್ಕೆ ಅನೇಕ ದೃಷ್ಟಾಂತಗಳು ನಮ್ಮೆದುರಿಗಿವೆ. ಆ ಕಾರಣದಿಂದ ಇಂದು ಈ ದೇಶದ ಸ್ವಾತಂತ್ರ ಹೋರಾಟಗಾರರುˌ ಪ್ರಗತಿಪರರುˌ ಚಿಂತಕರುˌ ಹಾಗೂ ಬುದ್ದಿಜೀವಿಗಳಿಗೆ ಸಂಘ ಪರಿವಾರದ ಜನರು ದೇಶಭಕ್ತಿಯ ಪಾಠ ಮಾಡುತ್ತ ದೇಶದಲ್ಲಿ ತ್ವೇಷಮಯ ವಾತಾವರಣವನ್ನು ನಿರ್ಮಿಸುತ್ತಿರುವ ಸಂಗತಿ ಹಾಗು ಸಂಘ ಪರಿವಾರದವರು ನಕಲಿ ರಾಷ್ಟ್ರವಾದಿಗಳೆನ್ನುವ ಸಂಗತಿ ನಾವು ಯುವ ಜನತೆಗೆ ತಿಳಿಸುವ ಕೆಲಸ












