ನಟ- ನಿರ್ದೇಶಕ ಉಪೇಂದ್ರ ಅವರ ವಿರುದ್ದ ದೂರು ದಾಖಲು ಮಾಡಲಾಗಿದೆ. ನಿನ್ನೆಯಿಂದ ಉಪೇಂದ್ರ ಅವರು ಮಾತನಾಡಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆ ವಿಡಿಯೋ ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ, ಉಪೇಂದ್ರ ಅವರ ಆ ಹೇಳಿಕೆಗೆ ಎಲ್ಲೆಡೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ.
ಉಪೇಂದ್ರ ಅವರು ʼʼಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾʼʼ ಎಂಬ ಹೇಳಿಕೆಯನ್ನ ನೀಡಿದ್ದಾರೆ. ಇದೇ ವೇಳೆ ಉಪೇಂದ್ರ ಅವರ ವಿರುದ್ದ ಆಕ್ರೋಶವನ್ನ ವಿವಿಧ ವರ್ಗದ ಜನತೆ ವ್ಯಕ್ತಪಡಿಸಿ, ಆ ವಿಡಿಯೋ ಕಮೆಂಟ್‌ನಲ್ಲೇ ಉಪೇಂದ್ರ ಅವರ ವಿರುದ್ಧ ಕೆಂಡ ಕಾರಿದ್ದಾರೆ.
ಯಾವಾಗ ಉಪೇಂದ್ರ ಅವರು ತಮ್ಮ ಹೇಳಿಕೆ ಎಂತಹ ವಿವಾದವನ್ನ ಸೃಷ್ಟಿಸಲಿದೆ ಅನ್ನೋದು ಅವರಿಗೆ ಅರ್ಥ ಆಯಿತೋ, ಆಗಲೇ ಫೇಸ್‌ಬುಕ್‌ನಲ್ಲು ಪೋಸ್ಟ್ ಹಾಕಿ ಕ್ಷಮೆ ಕೇಳಿದ್ದಾರೆ. ಇದರ ಜೊತೆಗೆ ವಿಡಿಯೋ ಕೂಡ ಡಿಲೀಟ್ ಮಾಡಿರುವುದಾಗಿ ಮಾಹಿತಿಯನ್ನ ನೀಡಿದ್ದಾರೆ. ಹೀಗಿದ್ದರು ಕೂಡ ಶೋಷಿತ ಸಮುದಾಯದ ಆಕ್ರೋಶ ಕಡಿಮೆಯಾಗಿಲ್ಲ
ಈ ಸುದ್ದಿಯನ್ನೂ ಓದಿ ; ಗಗನಯಾನ ಸಿಬ್ಬಂದಿ ಭೂಮಿಗೆ ಮರಳುವ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೊ ; ವಿಡಿಯೊ
ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್‌ರಿಂದ ದೂರು
ಇನ್ನೂ ಇದೇ ವೇಳೆ ನಟ ಉಪೇಂದ್ರ ಅವರ ವಿರುದ್ದ ಸಿ.ಕೆ ಅಚ್ಚುಕಟ್ಟು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳವುಂತೆ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್ ಮನವಿ ಮಾಡಿದ್ದಾರೆ.