ದಶಕದಿಂದ ನಡೆಯುತ್ತಿರುವ ಸೌಜನ್ಯಾ ಪ್ರಕರಣ ಇತ್ಯರ್ಥಗೊಳ್ಳಲು ನಡೆಯುತ್ತಿರುವ ಹೋರಾಟಗಳು ಸಂಘಟಿತವಾಗಿಲ್ಲ ಎಂದು ದಕ್ಷಿಣ ಕನ್ನಡದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಬೇಸರ ವ್ಯಕ್ತಪಡಿಸಿದರು.
ಮಂಗಳೂರು ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೋರಾಟಗಳು ಸಂಘಟಿತವಾಗಿ ನಡೆಯುತ್ತಿಲ್ಲ, ನಿಜವಾದ ಸೌಜನ್ಯಾ ಹತ್ಯೆ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಅದಕ್ಕೆ ನಮ್ಮ ಬೆಂಬಲ ಇದೆ. ಇದರ ಬದಲು ಸುಮ್ಮನೆ ಅಪಪ್ರಚಾರ ಮಾಡುವುದು ಸರಿಯಲ್ಲ” ಎಂದು ತಿಳಿಸಿದರು.
“ಸೌಜನ್ಯಾ ಪ್ರಕರಣದ ಬಗ್ಗೆ ಅರಿಯದೆ ಒಬ್ಬರ ಬಗ್ಗೆ ಮಾತನಾಡಬಾರದು. ಅಪಪ್ರಚಾರ ಮಾಡುವವರು ಒಮ್ಮೆ ನಿಜವಾದ ವಿಷಯವನ್ನು ಅರಿತು ಮಾತನಾಡಬೇಕು” ಎಂದು ಪ್ರದೀಪ್ ಕಲ್ಕೂರ ಹೇಳಿದರು
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೆಒಎಫ್ ಪರೀಕ್ಷೆಯಲ್ಲಿ ಅಕ್ರಮ ಆರೋಪ ; ಅಭ್ಯೃಥಿಗಳ ಅಸಮಾಧಾನ
2012ರಲ್ಲಿ ಬೆಳ್ತಂಗಡಿ ತಾಲೂಕು ಕ್ಷೇತ್ರವೊಂದರ ಪಾಂಗಳದಲ್ಲಿ ಸೌಜನ್ಯಾ ಯುವತಿಯ ಅತ್ಯಾಚಾರ ಮತ್ತು ಕೊಲೆಯಾಗಿತ್ತು. ಪ್ರಕರಣ ನಡೆದು 11 ವರ್ಷವಾಗಿದ್ದರೂ ಈವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ರಾವ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಸುದೀರ್ಘ ವಿಚಾರಣೆಯ ಬಳಿಕ ಸಾಕ್ಷ್ಯ ದೊರೆಯದ ಕಾರಣ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿ ಬಿಡುಗಡೆ ಮಾಡಿತ್ತು.
ಸೌಜನ್ಯಾ ಪ್ರಕರಣ ದೇಶದಲ್ಲೇ ಸಂಚಲವನ್ನು ಸೃಷ್ಟಿಸಿದೆ. ಪ್ರತೀ ದಿನವೂ ಪ್ರತಿಭಟನೆಗಳು ನಡೆಯುತ್ತಿವೆ. ಸೌಜನ್ಯಾಳಿಗೆ ನ್ಯಾಯ ದೊರೆಯಬೇಕೆಂದು ಆಗ್ರಹಗಳು ಕೇಳಿ ಬರುತ್ತಿವೆ.