• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಟೀಕಾಕಾರರ ಬಾಯಿ ಮುಚ್ಚಿಸಿದ ಶಕ್ತಿ ಯೋಜನೆ..! ಲಾಭದತ್ತ ಸಾರಿಗೆ ನಿಗಮ..

ಕೃಷ್ಣ ಮಣಿ by ಕೃಷ್ಣ ಮಣಿ
August 5, 2023
in ಅಂಕಣ, ಅಭಿಮತ
0
ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ- ಭಾಗ 1
Share on WhatsAppShare on FacebookShare on Telegram

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೆ ಶಕ್ತಿ ಯೋಜನೆ ಸೇರಿದಂತೆ ಒಟ್ಟು 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜೂನ್​ 11ರಂದು ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯ್ತು. ಅದರಂತೆ ರಾಜ್ಯಾದ್ಯಂತ ಸಂಚಾರ ಮಾಡುವ ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಸಂಚಾರ ಮಾಡುತ್ತಿದ್ದಾರೆ. ಇದ್ರಿಂದ ಸಾಕಷ್ಟು ರೀತಿಯಲ್ಲಿ ಲಾಭವೇ ಆಗುತ್ತಿದೆ ಎನ್ನುವುದು ಸರ್ಕಾರದ ಅಂಕಿಅಂಶಗಳಿಂದ ಬಯಲಾಗಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ನಷ್ಟದ ಸುಳಿಗೆ ಸಿಲುಕಿ ಸಾರಿಗೆ ಸಂಸ್ಥೆ ನೌಕರರ ವೇತನ ಪಾವತಿ ಮಾಡದೆ ಪರದಾಡುವಂತಾಗಿದ್ದ ಸಂಸ್ಥೆಗಳು ಲಾಭದತ್ತ ಸಾಗಿದ್ದು, ನಿಗದಿತ ದಿನವೇ ಸಂಪೂರ್ಣ ವೇತನ ಕೂಡ ಬಿಡುಗಡೆ ಆಗಿರುವುದೇ ಅಚ್ಚರಿಯ ಅಂಶವಾಗಿದೆ.

ADVERTISEMENT

ಸಾರಿಗೆ ಸಂಸ್ಥೆಗೆ ಲಾಭದ ಬಗ್ಗೆ ಸಚಿವರು ಹೇಳಿದ್ದೇನು..?

ಕರ್ನಾಟಕ ಸಾರಿಗೆ ಬಸ್​ಗಳಲ್ಲಿ ಕೋಟಿ ಕೋಟಿ ಜನರು ಈಗಾಗಲೇ ಪ್ರಯಾಣ ಮಾಡಿದ್ದಾರೆ. ಅದರಿಂದ 258 ಕೋಟಿ ಹಣ ಬಿಲ್​ ಆಗಿದೆ. ಅದರಲ್ಲಿ ಅರ್ಧದಷ್ಟು ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಹಣಕಾಸು ಇಲಾಖೆ ಕೆಲವೊಂದು ಕ್ಲಾರಿಫಿಕೇಷನ್ ಕೇಳಿದೆ. ಅವರು ಕೇಳಿರುವ ಮಾಹಿತಿಯನ್ನು ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ನೀಡುತ್ತಾರೆ. ಎಲ್ಲಿಯೂ ಯಾವುದೇ ಸಮಸ್ಯೆ ಆಗಿಲ್ಲ, ಎಲ್ಲವೂ ಸರಿಯಾಗೇ ನಡೆಯುತ್ತಿದೆ. ಆದರೆ ವಿರೋಧ ಪಕ್ಷಗಳು ಹೊಸ ಸರ್ಕಾರಕ್ಕೆ ಸಮಯವನ್ನೇ ನೀಡದೆ ಆತುರ ಮಾಡುತ್ತಿದ್ದಾರೆ. ರಾಜ್ಯದ ನಾಲ್ಕೂ‌ ನಿಗಮಗಳಲ್ಲೂ ಸರಿಯಾದ ಸಮಯಕ್ಕೆ ಸಂಬಳ ಆಗಿದೆ, ಆಗುತ್ತಿದೆ. ಆದರೂ ಸಂಬಳ ಸರಿಯಾಗಿ ಕೊಟ್ಟಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ರು.

ಈ ಅಂಕಣವನ್ನು ಓದಿ ; ಕರ್ನಾಟಕ ಮಾಡೆಲ್‌-ಕಾಲದ ಅನಿವಾರ್ಯತೆ- ಭಾಗ 2

ವರ್ಷಾಂತ್ಯಕ್ಕೆ ಸಾಲ ಮುಗಿಯುತ್ತೆ.. ಆ ಬಳಿಕ ಲಾಭ ಶುರು..!

ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ಸಾರಿಗೆ ಸಂಸ್ಥೆಗಳು ಸಾಲದ ಸುಳಿಗೆ ಸಿಲುಕಿವೆ. ಆದರೆ ಇದೇ ರೀತಿ ಶಕ್ತಿ ಯೋಜನೆ ಮುಂದುವರಿದರೆ ಈ ವರ್ಷದ ಅಂತ್ಯಕ್ಕೆ ಸಾರಿಗೆ ನಿಗಮದ ಎಲ್ಲಾ ಸಾಲವೂ ತೀರುತ್ತದೆ. ಮುಂದಿನ ವರ್ಷದ ಆರಂಭದಿಂದ ಸಾರಿಗೆ ನಿಗಮಗಳಿಗೆ ಲಾಭ ಆಗಲಿದೆ. ಒಟ್ಟು ಸಾರಿಗೆ ನಿಗಮದಲ್ಲಿ 4,352 ಕೋಟಿ ರೂಪಾಯಿ ಸಾಲ ಇದೆ. ಸರ್ಕಾರದ ಶಕ್ತಿ ಯೋಜನೆಯಿಂದ ಪ್ರತಿ ತಿಂಗಳು ನಿಗಮಗಳು ಸಾಲ ತೀರಿಸೋಕೆ ಸಾಧ್ಯ ಆಗುತ್ತಿದೆ ಎಂದಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿಗಳು ಕ್ಯಾನ್ಸಲ್ ಆಗುತ್ತೆ ಎನ್ನುವ ವಿರೋಧ ಪಕ್ಷಗಳ ಟೀಕೆಯ ವಿಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದು, ಇನ್ನೂ ಹತ್ತು ವರ್ಷ ಈ ಎಲ್ಲಾ ಗ್ಯಾರಂಟಿಗಳು ಇರುತ್ತವೆ. ಮುಂದಿನ ಸಲವೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.

ಮಂತ್ರಾಲಯದ ರಾಯರ ಮಠಕ್ಕೆ ಕೋಟಿ ಕೋಟಿ ಕಾಣಿಕೆ..!

ರಾಯಚೂರಿನ ಮಂತ್ರಾಲಯ ಮಠಕ್ಕೆ ಕಳೆದ 34 ದಿನಗಳಲ್ಲೇ ಕೋಟಿ ಕೋಟಿ ಕಾಣಿಕೆ ಹಣ ರಾಯರ ಮಠಕ್ಕೆ ಸೇರಿದೆ. ಒಟ್ಟು 3 ಕೋಟಿ 79 ಲಕ್ಷದ 62 ಸಾವಿರದ 469 ರೂಪಾಯಿ ಕಾಣಿಕೆ ಸಂಗ್ರಹ ಆಗಿದೆ. ಅದರ ಜೊತೆಗೆ 99 ಗ್ರಾಂ ಬಂಗಾರ, 1 ಕೆಜಿ 940 ಗ್ರಾಂ ಬೆಳ್ಳಿಯ ಕಾಣಿಕೆ ಲಭ್ಯವಾಗಿದೆ. 34 ದಿನಗಳ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಮಂತ್ರಾಲಯ ಮಠದ ನೂರಾರು ಸಿಬ್ಬಂದಿಗಳು ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕೆಲಸ ಮಾಡಿದ್ದಾರೆ. ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆ ಲೆಕ್ಕವನ್ನು ಮಾಧ್ಯಮಗಳ ಮುಂದಿಟ್ಟಿದ್ದಾರೆ. ಇದು ಕೂಡ ಶಕ್ತಿಯೋಜನೆಯ ಫಲ ಎನ್ನಬಹುದಾಗಿದೆ.

ಧರ್ಮಸ್ಥಳಕ್ಕೂ ಹರಿದು ಬಂದಿತ್ತು ಭಕ್ತ ಸಾಗರ..!

ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ಮಾಡಿದ ಬಳಿಕ ಮಹಿಳೆಯರು ಗುಂಪು ಗುಂಪಾಗಿ ಧರ್ಮಸ್ಥಳದ ಕಡೆಗೆ ಹೊರಟಿದ್ರು. ಧರ್ಮಸ್ಥಳದಲ್ಲಿ ಸಾವಿರಾರು ಮಹಿಳಯರು ಧರ್ಮಸ್ಥಳದಲ್ಲಿ ಭಕ್ತಿ ಪರಾಕಷ್ಟೆ ತಲುಪಿದೆ. ಮಹಿಳೆಯರು ಸಂತೋಷವಾಗಿದ್ದಾರೆ. ಎಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾರೆ ಎಂದು ಸಿಎಂಗೆ ವೀರೇಂದ್ರ ಹೆಗ್ಗಡೆ ಅವರೇ ಪತ್ರ ಬರೆದು ಸಂತಸ ಹಂಚಿಕೊಂಡಿದ್ದರು. ಆದರೆ ಧರ್ಮಸ್ಥಳದಲ್ಲಿ ಎಂದಿಗೂ ಕಾಣಿಕೆ ವಿಚಾರವನ್ನು ಬಹಿರಂಗ ಮಾಡದ ಕಾರಣ ಹುಂಡಿ ಭರ್ತಿ ಆಗ್ತಿರೋದನ್ನು ಪತ್ರದ ಮೂಲಕ ವ್ಯಕ್ತಪಡಿಸಿದ್ದರು. ಒಟ್ಟಾರೆ ಸಾಲದ ಸುಳಿಯಲ್ಲಿ ಸಿಲುಕಿದ್ದ ಸಾರಿಗೆ ಸಂಸ್ಥೆಗಳ ಲಾಭದ ಕಡೆಗೆ ತಿರುಗಿವೆ. ಇನ್ನು ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಇದಕ್ಕೂ ಶಕ್ತಿಯೋಜನೆಯೇ ಕಾರಣ ಎನ್ನಬಹುದು.

ಕೃಷ್ಣಮಣಿ

Tags: cmsiddaramiahDKShivakumarKSRTCRamalinga ReddyShakti Yojana
Previous Post

ಕರ್ನಾಟಕ ಮಾಡೆಲ್‌-ಕಾಲದ ಅನಿವಾರ್ಯತೆ- ಭಾಗ 2

Next Post

ಜಮ್ಮು ಮತ್ತು ಕಾಶ್ಮೀರ | ಉಗ್ರರೊಂದಿಗೆ ಗುಂಡಿನ ಚಕಮಕಿ; ಮೂವರು ಸೇನಾ ಯೋಧರು ಹುತಾತ್ಮ

Related Posts

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ
Top Story

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

by ನಾ ದಿವಾಕರ
August 27, 2026
0

ನೂರು ತುಂಬಿದ ಭಾರತ ಹೇಗಿರಲಿದೆ ಎಂಬ ಜಿಜ್ಞಾಸೆ ಮತ್ತು ಹೇಗಿರಬೇಕು ಎಂಬ ದೃಢ ನಿರ್ಧಾರ ವರ್ತಮಾನದ ಸಾಮಾಜಿಕ-ರಾಜಕೀಯ ಸಂಕಥನಗಳಲ್ಲಿ ಧ್ವನಿಸಲೇಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ಈ ಎರಡೂ ಪ್ರಶ್ನೆಗಳನ್ನು...

Read moreDetails
ಯಶಸ್ಸಿನ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದೆಯೇ ಇಂದಿನ ಪೀಳಿಗೆ..?

ಯಶಸ್ಸಿನ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದೆಯೇ ಇಂದಿನ ಪೀಳಿಗೆ..?

August 26, 2026
ಎದೆ ಕಲಕುವ ಭಾವಸ್ಪರ್ಷಾನುಭವ- ಒಥೆಲೊ

ಎದೆ ಕಲಕುವ ಭಾವಸ್ಪರ್ಷಾನುಭವ- ಒಥೆಲೊ

August 25, 2026
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -5

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -5

August 23, 2026
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

August 22, 2026
Next Post
ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ | ಉಗ್ರರೊಂದಿಗೆ ಗುಂಡಿನ ಚಕಮಕಿ; ಮೂವರು ಸೇನಾ ಯೋಧರು ಹುತಾತ್ಮ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada