ಕನ್ನಡದಲ್ಲಿ ಇತ್ತೀಚೆಗೆ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ., ನೈಜತೆ ಹಾಗೂ ಕಥಾ ಹಂದರವೆ ಇಂತಹ ಸಿನಿಮಾಗಳ ಜೀವಾಳ ಹೀಗಾಗಿ ಇವು ಪ್ರೇಕ್ಷಕರ ಮನಸ್ಸನ್ನ ಹಿಡಿದಿಟ್ಟುಕೊಳ್ಳುತ್ತವೆ. ಇದೇ ಕಾರಣಕ್ಕೆ ಕಟೆಂಟ್ ಓರಿಯಂಟೆಡ್ ಚಿತ್ರಗಳು ಸಿಕ್ಕಾಪಟ್ಟೆ ಯಶಸ್ವಿಗೊಳ್ಳುತ್ತಿವೆ. ಅಂತಹ ಉತ್ತಮ ಕಂಟೆಂಟ್ ಹೊಂದಿರುವ ಮತ್ತೊಂದು ಚಿತ್ರ “ಯಥಾಭವ” ಕೂಡ ತೆರೆಗೆ ಬರೋದಕ್ಕೂ ಮೊದಲೆ ಸದ್ದು ಮಾಡುತ್ತಿದೆ..
ಗೌತಮ್ ಬಸವರಾಜು ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು ಈ ಚಿತ್ರ ಹೆಚ್ಚು ಕುತೂಹಲ ಮೂಡಿಸೋದಕ್ಕೆ ಪ್ರಮುಖ ಕಾರಣ ಅಂದ್ರೆ ಈ ಚಿತ್ರದ ಪೋಸ್ಟರ್.. ಹೌದು ಬೆಂಗಳೂರು ಸುತ್ತಮುತ್ತ ಚಿತ್ರೀಕರಣವಾಗಿರುವ ಈ ಸಿನಿಮಾ. ತನ್ನ ಟೈಟಲ್ ” ಯಥಾಭವ” ಹಾಗೂ ಚಿತ್ರದ ಪೋಸ್ಟರ್‌ನಿಂದ ವಿಭಿನ್ನವಾಗಿದ್ದು ಕುತೂಹಲ ಮೂಡಿಸಿದೆ.
Macht entertainments ಲಾಂಛನದಲ್ಲಿ ಸುಜಾತ ಕುಮಾರಿ ಹಾಗೂ ಅನಿಲ್ ಕುಮರ್ ಬಿ.ಎನ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಉತ್ಸವ್ ಶ್ರೇಯ್ ಸಂಗೀತ ನಿರ್ದೇಶನ, ಹರೀಶ್ ಚೌಧರಿ ಸಂಕಲನ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಸಂಚಿತ್ ಚವನ್ ನೃತ್ಯ ನಿರ್ದೇಶನ ಹಾಗೂ ಸ್ಮಿತ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.
“ಯಥಾಭವ” ಕೋರ್ಟ್ ರೂಮ್ ಡ್ರಾಮ ಕಥಾಹಂದರ ಹೊಂದಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಪವನ್ ಶಂಕರ್ ಈ ಚಿತ್ರದ ನಾಯಕನಾಗಿ ಹಾಗೂ ಸಹನ ಸುಧಾಕರ್ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟ ರಾಕ್ ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಗೌತಮ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಿರಿಯ ನಟ ದತ್ತಣ್ಣ ನ್ಯಾಯಾಧೀಶರ ಪಾತ್ರ ನಿರ್ವಹಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಬಾಲ ರಾಜವಾಡಿ, ಮಾಸ್ಟರ್ ಸುಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.