• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ -ಭಾಗ 1

ನಾ ದಿವಾಕರ by ನಾ ದಿವಾಕರ
June 29, 2023
in ಅಂಕಣ, ಅಭಿಮತ
0
ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ -ಭಾಗ 1
Share on WhatsAppShare on FacebookShare on Telegram

ADVERTISEMENT

ಯೋಜನೆಗಳನ್ನು ಜಾರಿಮಾಡುವ ಮುನ್ನ ವೈಜ್ಞಾನಿಕ ಪರಾಮರ್ಶೆ ಮಾಡುವುದು ಅಗತ್ಯ

2023ರ ಚುನಾವಣೆಗಳಲ್ಲಿ ಕರ್ನಾಟಕದ ಮತದಾರರು ನೀಡಿರುವ ಅಭೂತಪೂರ್ವ ತೀರ್ಪು ಒಂದೆಡೆ ರಾಜಕೀಯ ಪಕ್ಷಗಳ ದೌರ್ಬಲ್ಯ, ವೈಫಲ್ಯ ಹಾಗೂ ಸೈದ್ಧಾಂತಿಕ ಕೊರತೆಯನ್ನು ಹೊರಗೆಡಹಿದ್ದರೆ ಮತ್ತೊಂದೆಡೆ ಆಡಳಿತದ ಚುಕ್ಕಾಣಿ ಹಿಡಿಯುವ ಪಕ್ಷದಲ್ಲಿ ಇರಬೇಕಾದ ಬದ್ಧತೆ, ಕ್ಷಮತೆ ಮತ್ತು ಬಾಧ್ಯತೆಗಳ ಇತಿಮಿತಿಗಳನ್ನೂ ಒಮ್ಮೆಲೆ ಹೊರಹಾಕಿಬಿಟ್ಟಿದೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತನ್ನ ಘೋಷಿತ ಉಚಿತ ಕೊಡುಗೆಗಳನ್ನು ಶತಾಯಗತಾಯ ಜಾರಿಗೊಳಿಸಲು ಪ್ರಯತ್ನಿಸಿರುವಂತೆಯೇ, ಕೆಳಸ್ತರದ ಜನಸಾಮಾನ್ಯರಿಗೆ ಉಪಯುಕ್ತವಾಗುವ ಈ             ʼ ಉಚಿತ ಕೊಡುಗೆ ʼಗಳಿಗೆ ಅಡ್ಡಗಾಲು ಹಾಕುವ ಪ್ರವೃತ್ತಿಯೂ ಸಹ ಢಾಳಾಗಿ ಕಾಣುತ್ತಿದೆ. ರಾಜ್ಯದ ವಿರೋಧ ಪಕ್ಷಗಳು ಸರ್ಕಾರದ ಯೋಜನೆಗಳು ವಿಫಲವಾಗುವುದನ್ನೇ ಕಾಯುತ್ತಿರುವಂತೆ ತೋರುತ್ತದೆ. ತನ್ಮೂಲಕ ತಮ್ಮ ರಾಜಕಾರಣ ಕೇವಲ ಅಧಿಕಾರ ಕೇಂದ್ರಿತವೇ ಹೊರತು, ಜನಪರ ಕಾಳಜಿಯ ಸಾಮಾಜಿಕ ಜವಾಬ್ದಾರಿ ಅಲ್ಲ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿವೆ. ಮತ್ತೊಂದೆಡೆ ಇದೇ ವಿರೋಧಿ ಬಣದ ಹಿಂಬಾಲಕ ಸಮಾಜವೂ ಸಹ ಸರ್ಕಾರದ ಜನೋಪಯೋಗಿ ಪ್ರಯತ್ನಗಳನ್ನು ಅಪಹಾಸ್ಯ ಮಾಡುವ ಮೂಲಕ ತನ್ನೊಳಗಿನ ಬೌದ್ಧಿಕ ಮಾಲಿನ್ಯವನ್ನು ಹೊರಹಾಕುತ್ತಿದೆ.

ಪ್ರತಿಯೊಂದು ಮನೆಗೂ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಕರ್ನಾಟಕ ಸರ್ಕಾರದ ಯೋಜನೆ ಈ ಅಪಹಾಸ್ಯ/ಲೇವಡಿಗಳ ನಡುವೆಯೇ ಜನಸಾಮಾನ್ಯರಿಂದ ಅನುಮೋದನೆಯನ್ನೂ ಪಡೆಯುತ್ತಿದೆ. ವಾಣಿಜ್ಯ ಬಳಕೆ ಹೊರತುಪಡಿಸಿ ಪ್ರತಿ ಮನೆಗೆ 200 ಯೂನಿಟ್​ಗಳವರೆಗೆ ಉಚಿತ ವಿದ್ಯುತ್​ ನೀಡುವುದು ಗೃಹಜ್ಯೋತಿ ಯೋಜನೆಯ ಉದ್ದೇಶವಾಗಿದೆ. ಆದರೆ, ರಾಜ್ಯದ ಬಹುತೇಕ ಮನೆಗಳಲ್ಲಿ 200 ಯೂನಿಟ್​ ವಿದ್ಯುತ್​ ಬಳಸದೆ ಇರುವುದರಿಂದ ಪ್ರತಿ ತಿಂಗಳು ಪ್ರತಿ ಕುಟುಂಬಗಳು ಬಳಸುವ ಸರಾಸರಿ ವಿದ್ಯುತ್​ ಯೂನಿಟ್​ ಮೇಲೆ ಹೆಚ್ಚುವರಿಯಾಗಿ ಶೇ. 10 ರಷ್ಟು ವಿದ್ಯುತ್ ಬಳಕೆ ಮಾತ್ರ ಅವಕಾಶ​ ನೀಡಲಾಗುತ್ತದೆ. ಅದಕ್ಕಿಂತ ಮಿತಿ ಮೀರಿದರೆ ಹೆಚ್ಚುವರಿ ವಿದ್ಯುತ್​ ಬಳಕೆಯ ಬಿಲ್​ ಕಟ್ಟಬೇಕು. ಅಲ್ಲದೆ, 200 ಯೂನಿಟ್​ಗಿಂತ ಹೆಚ್ಚು ಬಳಸಿದರೆ ಪೂರ್ತಿ ಬಿಲ್​ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಇಂಧನ ಇಲಾಖೆ ಹೇಳಿದೆ. ರಾಜ್ಯದಲ್ಲಿ 2.16 ಕೋಟಿ ಜನರು ಗೃಹಜ್ಯೋತಿ ಯೋಜನೆ ಫಲಾನುಭವಿಗಳಿದ್ದು, ಅದರಲ್ಲಿ 2.14 ಕೋಟಿ ಜನರು ಅರ್ಹರಿದ್ದಾರೆ.

ಗೃಹಲಕ್ಷ್ಮಿಯ ಫಲಾನುಭವಿಗಳು

ಈ ಯೋಜನೆಯ ಫಲಾನುಭವಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು.  ಮೊದಲನೆಯದಾಗಿ  ಈ ಯೋಜನೆಯಿಂದ ರಾಜ್ಯದ ಬೊಕ್ಕಸ ಬರಿದಾಗುತ್ತದೆ ಕಾಂಗ್ರೆಸ್‌ ತನ್ನ ರಾಜಕೀಯ ಲಾಭಕ್ಕಾಗಿ ಉಚಿತ ವಿದ್ಯುತ್‌ ನೀಡುತ್ತಿದೆ, ಇದರಿಂದ ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಮತ್ತು ಪ್ರಸರಣವನ್ನು ನಿರ್ವಹಿಸುವ ಕರ್ನಾಟಕ ವಿದ್ಯುತ್‌ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)  ಮತ್ತು ಕರ್ನಾಟಕ ವಿದ್ಯುಚ್ಚಕ್ತಿ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಈ ಎರಡೂ ಸಂಸ್ಥೆಗಳು  ಅಪಾರ ನಷ್ಟ ಅನುಭವಿಸುತ್ತದೆ ಎಂದು ಹುಯಿಲೆಬ್ಬಿಸುವ ಹಿತವಲಯದ ಮಧ್ಯಮ ವರ್ಗಗಳು ತಮ್ಮ ವಿದ್ಯುತ್‌ ಖಾತೆಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಅತಿ ಹೆಚ್ಚು ವಿದ್ಯುತ್‌ ದುರ್ಬಳಕೆ ಮಾಡುವ ಈ ವರ್ಗಗಳು ಈಗ ದಿನನಿತ್ಯ ಬಳಕೆಯಾದ ಯೂನಿಟ್‌ಗಳನ್ನು ಲೆಕ್ಕಹಾಕಲಾರಂಭಿಸಿವೆ. ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಸುಗಮ ಅನುಕೂಲತೆಗಳನ್ನು ಹೊಂದಿರುವ ಈ ವರ್ಗಕ್ಕೆ ಫಲಾನುಭವಿಗಳಾಗುವ ಉತ್ಸುಕತೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಎರಡನೆಯದಾಗಿ 200 ಯೂನಿಟ್‌ ಮೇಲೆ ಬಳಕೆ ಮಾಡುವ ಐಷಾರಾಮಿ ಮಧ್ಯಮ ವರ್ಗಗಳಲ್ಲಿ ಸಹಜವಾಗಿಯೇ ಬಡಜನತೆಯ ಬಗ್ಗೆ ಇರುವ ತಾತ್ಸಾರದ ಮನೋಭಾವಕ್ಕೆ ಗೃಹಲಕ್ಷ್ಮಿ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ಈ ವರ್ಗದ ಜನತೆ ವ್ಯರ್ಥವಾಗಿ ಬಳಸುವ ವಿದ್ಯುತ್‌ ಉಳಿತಾಯ ಮಾಡಿದರೆ ಬಹುಶಃ ರಾಜ್ಯದ ಸಮಸ್ತ ಜನತೆಗೂ ಉಚಿತ ವಿದ್ಯುತ್‌ ನೀಡಬಹುದು.‌

ಇನ್ನು ಮೂರನೆಯ ವರ್ಗವಾಗಿ ಈ ಯೋಜನೆಗೆ ಸಂಪೂರ್ಣ ಅರ್ಹರಾದ ನೈಜ ಫಲಾನುಭವಿಗಳತ್ತ  ನಾವು ಗಮನಹರಿಸಬೇಕಿದೆ. ತಿಂಗಳಿಗೆ ನೂರು ಯೂನಿಟ್‌ಗಿಂತಲೂ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಗೃಹಬಳಕೆ ವಿದ್ಯುತ್‌ ಗ್ರಾಹಕರು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಇಹೆಚ್‌, ಹವಾನಿಯಂತ್ರಣ, ಗೀಜರ್‌ ಮತ್ತಿತರ ವಿದ್ಯುತ್‌ ಉಪಕರಣಗಳನ್ನು ಬಳಸದೆ ಇರುವ ದುಡಿಯುವ ವರ್ಗಗಳ ಲಕ್ಷಾಂತರ ಕುಟುಂಬಗಳಿಗೆ ಈ ಯೋಜನೆ ಒಂದು ವರದಾನವಾಗಿ ಕಾಣುತ್ತದೆ. ಹಾಗೆಯೇ ಮನೆಗೆ ಒಂದೇ ದೀಪ ಇರುವಂತಹ ಗುಡಿಸಲುಗಳೂ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ, ಬುಡಕಟ್ಟು ಸಮುದಾಯಗಳಲ್ಲಿ ಹೇರಳವಾಗಿವೆ. 2017ರ ಅಧಿಕೃತ ಮಾಹಿತಿಯ ಅನುಸಾರ ರಾಜ್ಯದ 29 ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವೇ ಇರಲಿಲ್ಲ. (ಇವತ್ತಿನ ಪರಿಸ್ಥಿತಿ ಭಿನ್ನವಾಗಿದೆಯೇ ಪರಿಶೀಲಿಸಬೇಕಿದೆ). ಈ ಶ್ರಮಿಕ ಜನತೆಗೆ ಗೃಹಲಕ್ಷ್ಮಿ ಯೋಜನೆ ಹೆಚ್ಚು ಉಪಯುಕ್ತವಾಗುತ್ತದೆ. ಆದರೆ ಆಧಾರ್‌ ಮತ್ತು ವಿದ್ಯುತ್‌ ಖಾತೆಯನ್ನು ಲಿಂಕ್‌ ಮಾಡುವ ಪ್ರಕ್ರಿಯೆಯಲ್ಲಿ ಹೆಚ್ಚು ಪರದಾಡುವ ಜನತೆಯೂ ಇವರೇ ಆಗಿರುತ್ತಾರೆ. ಸೇವಾಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತವರನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಉಚಿತ ಸೌಲಭ್ಯಗಳ ಸವಾಲುಗಳು

ಅರ್ಹ-ನೈಜ ಫಲಾನುಭವಿಗಳಾಗಬೇಕಾದ ಲಕ್ಷಾಂತರ ಜನತೆಗೆ ಉಚಿತ ವಿದ್ಯುತ್‌ ಸೌಲಭ್ಯವು ಸಮರ್ಪಕವಾಗಿ ತಲುಪುವಂತೆ ಜಾಗ್ರತೆ ವಹಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂಬ ಆತುರದ ನಿರ್ಧಾರಕ್ಕೆ ಬರಬಾರದಿತ್ತು. ಈಗಾಗಲೇ ಅಕ್ಕಿ ಸರಬರಾಜು ನಿಲ್ಲಿಸುವ ಮೂಲಕ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ನಾಳೆ ವಿದ್ಯುತ್‌ ಪ್ರಸರಣ ಮತ್ತು ಉತ್ಪಾದನೆಯಲ್ಲೂ ಎಂತಹ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ಹೇಳಲಾಗುವುದಿಲ್ಲ. ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸಿದ್ಧರಾಮಯ್ಯ ಸರ್ಕಾರ ಒಂದು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿ, ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್‌ ಪ್ರಮಾಣ, ಬಳಕೆಯ ಪ್ರಮಾಣ ಮತ್ತು ಪ್ರಸರಣದ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಬೇಕಿತ್ತು. ಹಾಗೆಯೇ ಈ ಯೋಜನೆಯಿಂದ ಕೆಇಆರ್‌ಸಿ ಸಂಸ್ಥೆಗೆ ಉಂಟಾಗುವ ಆರ್ಥಿಕ ಹೊರೆ ಮತ್ತು ತಾಂತ್ರಿಕ-ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆಯೂ ಗಂಭೀರ ಆಲೋಚನೆ ಮಾಡಬೇಕಿತ್ತು. ಆನಂತರವೇ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬಹುದಿತ್ತು. ಹಾಗೆ ಮಾಡಿದ್ದಲ್ಲಿ ವಾಮಮಾರ್ಗಗಳ ಮೂಲಕ ಫಲಾನುಭವಿಗಳಾಗುವ ಹಿತವಲಯದವರನ್ನು ಈ ಯೋಜನೆಯ ಚೌಕಟ್ಟಿನಿಂದ ಹೊರಗಿಡಬಹುದಿತ್ತು.

. 2022 ರ ಆರ್ಥಿಕ ವರ್ಷದಲ್ಲಿ ಕರ್ನಾಟಕದಾದ್ಯಂತ ಸ್ಥಾಪಿತ ವಿದ್ಯುತ್ ಸಾಮರ್ಥ್ಯವು ಸುಮಾರು 31 ಗಿಗಾವ್ಯಾಟ್ ಆಗಿತ್ತು. ಕರ್ನಾಟಕದಲ್ಲಿ ಶೇ.51ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ, ಶೇ.34ರಷ್ಟು ಉಷ್ಣ ಶಕ್ತಿಯಿಂದ, ಶೇ.12ರಷ್ಟು ಜಲವಿದ್ಯುತ್ ಮೂಲಗಳಿಂದ ಮತ್ತು ಶೇ.3ರಷ್ಟು ಪರಮಾಣು ಶಕ್ತಿಯಿಂದ ಬರುತ್ತದೆ. ಬೇಸಿಗೆಯಲ್ಲಿ ಗರಿಷ್ಠ ಬೇಡಿಕೆ 14,818 ಮೆಗಾವ್ಯಾಟ್ (ಮಾರ್ಚ್ 18, 2022) ಮತ್ತು ಗರಿಷ್ಠ 285 ಮಿಲಿಯನ್ ಯೂನಿಟ್ (ಮಾರ್ಚ್ 17, 2022) ಅನ್ನು ಸಹ ಉಷ್ಣ ವಿದ್ಯುತ್ ಮೇಲೆ ಕನಿಷ್ಠ ಅವಲಂಬನೆಯೊಂದಿಗೆ ನಿರ್ವಹಿಸಲಾಗುತ್ತದೆ. ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ, ಕರ್ನಾಟಕದಲ್ಲಿ 2.14 ಕೋಟಿ ವಿದ್ಯುತ್ ಗ್ರಾಹಕರಿದ್ದು, ಪ್ರತಿ ಮನೆಗೆ ಸರಾಸರಿ 53-54 ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ದೇಶದಲ್ಲಿ ಸರಾಸರಿ ವಿದ್ಯುತ್‌ ಗೃಹಬಳಕೆಯಲ್ಲಿ ಕರ್ನಾಟಕದ ಇತರ ಎಲ್ಲ ರಾಜ್ಯಗಳಿಗಿಂತಲೂ ಕನಿಷ್ಠ ಮಟ್ಟದಲ್ಲಿದೆ. ಅಂದರೆ ಕಡಿಮೆ ವಿದ್ಯುತ್‌ ಬಳಸುವವರ ಸಂಖ್ಯೆ ಹೆಚ್ಚಾಗಿದೆ ಎಂದೇ ಅರ್ಥ.

ಕೆಇಆರ್‌ಸಿ ಇತ್ತೀಚೆಗೆ ವಿದ್ಯುತ್‌ ದರಗಳನ್ನು ಹೆಚ್ಚಳ ಮಾಡಿದ್ದು ಪ್ರತಿ ಯೂನಿಟ್‌ಗೆ 1.49 ರೂಗಳನ್ನು ವಿಧಿಸಲಾಗುತ್ತದೆ.  ಗೃಹಬಳಕೆ ವಿದ್ಯುತ್‌ ಶುಲ್ಕವನ್ನು ಈ ವರ್ಷ ಏಪ್ರಿಲ್‌ನಿಂದಲೇ ಹೆಚ್ಚಿಸಲಾಗಿದ್ದು ಈ ಮುನ್ನ  50 ಯೂನಿಟ್‌ವರೆಗೆ 4.15 ರೂ, 50 ರಿಂದ 100  ಯೂನಿಟ್‌ವರೆಗೆ 4.75 ರೂ ಮತ್ತು100 ಯೂನಿಟ್‌ ಮೇಲ್ಪಟ್ಟು 7.00 ರೂಗಳನ್ನು ವಿಧಿಸಲಾಗುತ್ತಿತ್ತು. ಈಗ ಪರಿಷ್ಕೃತ ದರಗಳ ಅನುಸಾರ ಎರಡು ಹಂತಗಳ ಶುಲ್ಕ ವಿಧಿಸಲಾಗಿದ್ದು 100 ಯೂನಿಟ್‌ವರೆಗೆ 4.75 ರೂ,  100 ಯೂನಿಟ್‌ಗೂ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ಗೆ 7.15 ರೂ ಶುಲ್ಕ ನಿಗದಿಪಡಿಸಲಾಗಿದೆ. ಗೃಹಬಳಕೆ ವಿದ್ಯುತ್‌ ಸಂಪರ್ಕಕ್ಕೆ ಪ್ರತಿ ಕಿಲೋವ್ಯಾಟ್‌ಗೆ ಇದ್ದ ನಿಗದಿತ ಶುಲ್ಕವನ್ನು ಹೆಚ್ಚಿಸಲಾಗಿದ್ದು 50 ಕಿ.ವ್ಯಾ ವರೆಗೆ 110 ರೂ, 50 ಕಿ. ವ್ಯಾ ಮೇಲ್ಪಟ್ಟು 210 ರೂ ನಿಗದಿಪಡಿಸಲಾಗಿದೆ. ವಾಣಿಜ್ಯ ಬಳಕೆಯ ವಿದ್ಯುತ್‌ ಸಂಪರ್ಕಗಳಿಗೆ  101 ರಿಂದ 200 ಯೂನಿಟ್ ಬಳಸುವವರು ಪ್ರತಿ ಯೂನಿಟ್ ಗೆ ₹ 175 ಮತ್ತು ವಿದ್ಯುತ್ ಶುಲ್ಕ ₹ 7.15 ಪಾವತಿಸುತ್ತಾರೆ. ಈ ವರ್ಷ ಸ್ಲ್ಯಾಬ್ ಗಳ ಪರಿಷ್ಕರಣೆಯ ನಂತರ, 0 – 100 ಯೂನಿಟ್ ಬಳಸುವವರು ಪ್ರತಿ ಯೂನಿಟ್ ಗೆ ₹ 110 ಮತ್ತು ವಿದ್ಯುತ್ ಶುಲ್ಕವನ್ನು ₹ 4.75 ಪಾವತಿಸಬೇಕಾಗುತ್ತದೆ.

ಮುಂದುವರೆಯುತ್ತದೆ ,,,,,

Tags: Congress PartyDKShivakumarGruhaJyothiSchemeಬಿಜೆಪಿಸಿದ್ದರಾಮಯ್ಯ
Previous Post

ಬಿಬಿಎಂಪಿ ಮುಖ್ಯ ಅಭಿಯಂತರ ವರ್ಗಾವಣೆಗೆ ಸಿಎಂ ಸೂಚನೆ; ಅಧಿಕೃತ ಆದೇಶ ಪ್ರಕಟ

Next Post

ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ- ಭಾಗ 2

Related Posts

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
Top Story

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 12, 2026
0

ಕಲಬುರಗಿ: ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕಲ್ಯಾಣ...

Read moreDetails
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

January 12, 2026
ಪ್ರಧಾನಿ ಮೋದಿ ಕನಸಿನ ರೇರ್‌ ಅರ್ಥ್‌ ಮ್ಯಾಗ್ನೆಟ್ಸ್‌ ಯೋಜನೆಗೆ ಶರವೇಗ: ಹೆಚ್.ಡಿ. ಕುಮಾರಸ್ವಾಮಿ

ಪ್ರಧಾನಿ ಮೋದಿ ಕನಸಿನ ರೇರ್‌ ಅರ್ಥ್‌ ಮ್ಯಾಗ್ನೆಟ್ಸ್‌ ಯೋಜನೆಗೆ ಶರವೇಗ: ಹೆಚ್.ಡಿ. ಕುಮಾರಸ್ವಾಮಿ

January 12, 2026
ಬಹುನಿರೀಕ್ಷಿತ ಚಿತ್ರ ‘ರಾಜಾ ಸಾಬ್’ ಚಿತ್ರದ  ವಿತರಣಾ ಹಕ್ಕನ್ನು ಪಡೆದುಕೊಂಡ ಹೊಂಬಾಳೆ ಫಿಲಂಸ್ ..

ಬಹುನಿರೀಕ್ಷಿತ ಚಿತ್ರ ‘ರಾಜಾ ಸಾಬ್’ ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡ ಹೊಂಬಾಳೆ ಫಿಲಂಸ್ ..

January 8, 2026
‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’, ಕೊಟ್ಟ ಮಾತಿನಂತೆ ನಡೆಯಬೇಕು. ಡಿ.ಕೆ. ಶಿವಕುಮಾರ್

‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’, ಕೊಟ್ಟ ಮಾತಿನಂತೆ ನಡೆಯಬೇಕು. ಡಿ.ಕೆ. ಶಿವಕುಮಾರ್

January 8, 2026
Next Post
ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ -ಭಾಗ 1

ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ- ಭಾಗ 2

Please login to join discussion

Recent News

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ
Top Story

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

by ಪ್ರತಿಧ್ವನಿ
January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!
Top Story

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

by ಪ್ರತಿಧ್ವನಿ
January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
Top Story

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ
Top Story

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

by ಪ್ರತಿಧ್ವನಿ
January 12, 2026
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್
Top Story

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
January 12, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada