ವೈದ್ಯಲೋಕದಲ್ಲಿ ಕೆಲವೊಂದು ಅಚ್ಚರಿಕರ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ ಕೆಲವೊಂದು ಘಟನೆಗಳು ಯಾತಕ್ಕಾಗಿ ನಡೆಯುತ್ತವೆ? ಅದಕ್ಕಿರುವ ಕಾರಣಗಳೇನು? ಎಂಬ ಬಗ್ಗೆ ಕೆಲವೊಮ್ಮೆ ವೈದ್ಯರಿಗೆ ಸರಿಯಾದ ಮಾಹಿತಿ ಇರೋದಿಲ್ಲ. ಕೆಲವೊಮ್ಮೆ ಅಂತಹ ಅಚ್ಚರಿಕರ ಘಟನೆಗಳಿಗೆ ವೈದ್ಯರು ಇಂತಹದ್ದೇ ಕಾರಣ ಇರಬಹುದು ಎಂದು ಊಹಿಸುತ್ತಾರೆ ಹೊರತು, ಆ ಘನಟೆಗಳಿಗೆ ನಿಖರವಾದ ಕಾರಣ ಏನು ಅಂತ ಹೇಳೋದಿಲ್ಲ. ಈ ರೀತಿಯಾದ ಘಟನೆಗಳು ಕಳೆದ ಒಂದು ದಶಕಗಳಿಂದ ಈ ಜಗತ್ತಿನಲ್ಲಿ ಹೆಚ್ಚಾಗುತ್ತಲೇ ಇದೆ.
ಹೌದು.. ಇದೀಗ ಇಂತಹದ್ದೇ ಒಂದು ಘಟನೆ ಬಿಹಾರದಲ್ಲಿ ನಡೆದಿದೆ. ಮಹಿಳೆಯೊಬ್ಬರು ನಾಲ್ಕು ಕೈ, ನಾಲ್ಕು ಕಾಲು ಮತ್ತು ನಾಲ್ಕು ಕಿವಿ ಹೊಂದಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ಬಿಹಾರದ ಸರನ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಜೂ.12ರಂದು ಈ ವಿಚಿತ್ರ ಮಗುವಿಗೆ ಜನನ ನೀಡಿದ್ದಾಳೆ. ಇಂತಹ ವಿಚಿತ್ರ ಮಗುವನ್ನ ಕಂಡು ಆಸ್ಪತ್ರೆ ಸಿಬ್ಬಂದಿಗಳೇ ಅಚ್ಚರಿ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಸಾಕಷ್ಟು ಮಂದಿ ಬೆಚ್ಚಿ ಬಿದ್ದಿದ್ದಾರೆ. ಇನ್ನು ಈ ನವಜಾತ ಶಿಶು ಜನಿಸಿದ ಕೇವಲ 20 ನಿಮಿಷಗಳ ಅಂತರದಲ್ಲಿ ಮೃತಪಟ್ಟಿದೆ ಎಂಬ ವರದಿಗಳು ಬಂದಿವೆ.
ಪ್ರಿಯಾ ದೇವಿ ಎಂಬ ಮಹಿಳೆ ಈ ವಿಚಿತ್ರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ, ಈ ಮಗುವನ್ನು ನೋಡಲೆಂದು ರಾತ್ರೋ ರಾತ್ರಿ ಆಸ್ಪತ್ರೆ ಮುಂದೆ ಜನಸಾಗರವೇ ಬಂದು ಸೇರಿತ್ತು.
ಇನ್ನು ಈ ವಿಚಿತ್ರ ಪ್ರಕರಣದ ಬಗ್ಗೆ ಆಸ್ಪತ್ರೆಯ ನಿರ್ದೇಶಕ ಡಾ.ಅನಿಲ್ ಕುಮಾರ್ ಪ್ರತಿಕ್ರಿಯೆಯನ್ನ ನೀಡಿದ್ದು, ಅವರ ಪ್ರಕಾರ ಗರ್ಭಾಶಯದಲ್ಲಿ ಒಂದೇ ಅಂಡಾಶಯದಿಂದ ಎರಡು ಶಿಶುಗಳು ಹುಟ್ಟಿದಾಗ ಇಂತಹ ಮಕ್ಕಳು ಜನಿಸುತ್ತಾರಂತೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಒಂದೇ ಸಮಯಕ್ಕೆ ಬೇರ್ಪಟ್ಟರೆ ಅದು ಅವಳಿ ಮಕ್ಕಳು ಜನಿಸಲು ಸಹಕಾರಿಯಾಗುತ್ತೆ. ಹೆರಿಗೆಯ ಸಂದರ್ಭಲ್ಲಿ ಗರ್ಭಿಣಿಯರು ಇದರಿಂದ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಇದೀಗ ಶಸ್ತ್ರ ಚಿಕಿತ್ಸೆ ಮೂಲಕ ಹೆಣ್ಣು ಮಗು ಜನಿಸಿದ್ದರೂ, ಕೇವಲ 20 ನಿಮಿಷದಲ್ಲಿ ಮೃತಪಟ್ಟಿದೆ ಎಂಬ ಮಾಹಿತಿಯನ್ನ ವೈದ್ಯರು ನೀಡಿದ್ದಾರೆ.
ಇನ್ನು ಆಸ್ಪತ್ರೆಯ ನಿರ್ದೇಶಕ ಡಾ.ಅನಿಲ್ ಕುಮಾರ್ ಹೀಗೆ ಆಗಿರುವ ಸಾಧ್ಯೆತೆ ಹೆಚ್ಚಿದೆ ಎಂದು ಹೇಳಿದ್ದು, ಇದಕ್ಕೆ ನಿಖರವಾದ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯಾದ ಶಿಶುವಿನ ಜನನಕ್ಕೆ ಕಾರಣ ಏನು ಅನ್ನೋದು ತಜ್ಙರ ಅಧ್ಯಾಯನದಿಂದ ಮಾತ್ರ ತಿಳಿಯಬೇಕಿದೆ.