ದೆಹಲಿ : ಒಲಿಂಪಿಕ್ ಪದಕ ವಿಜೇತ ಸಾಕ್ಷಿ ಮಲ್ಲಿಕ್ ಇಂದು ಕುಸ್ತಿಪಟುಗಳ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಶನಿವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಎರಡು ದಿನಗಳ ಬಳಿಕ ಸಾಕ್ಷಿ ಮಲ್ಲಿಕ್ ಉತ್ತರ ರೈಲ್ವೆಯಲ್ಲಿ ತಮ್ಮ ಸೇವೆಗೆ ಮರಳಿದ್ದಾರೆ.

ದೆಹಲಿಯಲ್ಲಿ ಅಮಿತ್ ಶಾ ನಿವಾಸದಲ್ಲಿ ಶನಿವಾರ ತಡರಾತ್ರಿ ಈ ಸಭೆ ನಡೆದಿದ್ದು ಡಬ್ಲುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಬಂಧನಕ್ಕೆ ಕುಸ್ತಿಪಟುಗಳು ಆಗ್ರಹಿಸಿದ್ದು ರಾತ್ರಿಯವರೆಗೂ ಸಭೆ ಮುಂದುವರಿದಿತ್ತು.
ಆದರೆ ಕುಸ್ತಿಪಟುಗಳ ಎಲ್ಲಾ ಬೇಡಿಕೆಗಳನ್ನು ಒಪ್ಪಲು ಅಮಿತ್ ಶಾ ಒಪ್ಪದ ಕಾರಣ ಈ ಸಂಧಾನ ಸಭೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾಕ್ಷಿ ಮಲ್ಲಿಕ್ ಪತಿ ಸತ್ಯವ್ರತ್ ಕಡಿಯಾನ್ ಹೇಳಿದ್ದರು.