ಪ್ರಧಾನಿ ಮೋದಿ ಮೇ 28ರಂದು ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಸಮಯದಲ್ಲಿ ಬ್ರಿಟೀಷರು ಪಂಡಿತ್ ನೆಹರೂಗೆ ಹಸ್ತಾಂತರಿಸಿದ್ದ ಸೆಂಗೋಲ್ನ್ನು ಪ್ರದರ್ಶಿಸುವ ಬಗ್ಗೆಯೂ ಅಮಿತ್ ಶಾ ಹೇಳಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಕಿಡಿಕಾರಿದ್ದು ಬ್ರಿಟೀಷರು ಅಧಿಕಾರ ಹಸ್ತಾಂತರ ರೂಪದಲ್ಲಿ ಈ ರಾಜದಂಡ ನೀಡಿದ್ದರು ಎಂಬುದಕ್ಕೆ ಇತಿಹಾಸದಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದ್ದಾರೆ.
ಈ ರಾಜದಂಡವನ್ನು ತಮಿಳುನಾಡು ರಾಜಕೀಯಕ್ಕಾಗಿ ಬಳಕೆ ಮಾಡಲಾಗ್ತಿದೆ. ರಾಜಕೀಯ ಲಾಭಕ್ಕಾಗಿ ಪ್ರಧಾನಿ ಮೋದಿ ಮತ್ತವರ ಬೆಂಬಲಿಗರು ಇತಿಹಾಸವನ್ನೇ ತಿರುಚಿದ್ದಾರೆ. ಕಾಂಗ್ರೆಸ್‌ನ ಕಾರ್ಯಗಳನ್ನು ಮುಚ್ಚಿಟ್ಟು ಬಿಜೆಪಿಯು ತಾನು ಕ್ರೆಡಿಟ್ ತೆಗೆದುಕೊಳ್ಳುವ ಕಾರ್ಯ ಮಾಡ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸಂಸತ್ ಭವನ ಉದ್ಘಾಟನೆಗೆ ಪ್ರಧಾನಿ ಮೋದಿ ಏಕೆ ಅವಕಾಶ ನೀಡ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ.
ಈ ರಾಜದಂಡವನ್ನು ಮದ್ರಾಸ್ ಪ್ರಾಂತ್ಯದ ಧಾರ್ಮಿಕ ಸಂಸ್ಥೆಯಿಂದ ಕಲ್ಪಿಸಲ್ಪಟ್ಟ ಮತ್ತು ಮದ್ರಾಸ್ ನಗರದಲ್ಲಿ (ಈಗಿನ ಚೆನ್ನೈ) ರಚಿಸಲಾದ ಭವ್ಯವಾದ ರಾಜದಂಡವನ್ನು ಆಗಸ್ಟ್ 1947 ರಲ್ಲಿ ಜವಾಹರಲಾಲ್ ನೆಹರು ಅವರಿಗೆ ನೀಡಲಾಯಿತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.