ಚುನಾವಣೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಮೋಸ ಹೋದ್ರಾ ಮಾಜಿ ಸಚಿವ.? ಮತದಾರರಿಗೆ ಹಂಚಲು ಪಡೆದಿದ್ದ ಹಣ ಹಂಚದೆ ಆಪ್ತರಿಂದಲೇ ದೋಖಾ!. ಕೃತಜ್ಞತೆ ಸಭೆಯಲ್ಲಿ ಸತ್ಯ ಬಾಯ್ಬಿಟ್ಟ ಕೆ.ಆರ್.ಪೇಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ. ಸೋಲಿನ ಬಳಿಕ ಹಣ ವಾಪಾಸ್ ನೀಡುವಂತೆ ನಾರಾಯಣಗೌಡ ಮನವಿ. ಮತದಾರರಿಗೆ ಹಂಚಿಕೆ ಮಾಡದೆ ಇಟ್ಟುಕೊಂಡಿರುವ ಹಣ ವಾಪಸ್ ಕೊಟ್ಬಿಡಿ ಎಂದು ಅಂಗಲಾಚಿದ ನಾರಾಯಣಗೌಡ.


ಸೋಲಿನ ಬಳಿಕ ನಡೆದ ಕೃತಜ್ಞತಾ ಸಭೆಯಲ್ಲಿ ಹಣ ವಾಪಸ್ ನೀಡುವಂತೆ ನಾರಾಯಣಗೌಡ ಮನವಿ. ನಾನು ಮಾಹಿತಿ ಪಡೆದಿದ್ದೇನೆ, ಹಲವು ಕಡೆಗಳಿಗೆ ನಮ್ಮ ಹಣ ತಲುಪಿಲ್ಲ. ಹಣ ಹಂಚಿಕೆ ಮಾಡದೆ ಇಟ್ಟು ಕೊಂಡಿದ್ರೆ ದಯವಿಟ್ಟು ವಾಪಸ್ ಕೊಡಿ, ಟ್ರಸ್ಟ್ ಸ್ಥಾಪಿಸಿ ಆ ಹಣವನ್ನು ಸಮಾಜಸೇವೆಗೆ ಉಪಯೋಗಿಸೋಣ. ಹಣ ಪಡೆದು ಮೋಸ ಮಾಡಿದ ಮುಖಂಡರಿಗೆ ನಾರಾಯಣಗೌಡ ಮನವಿ.






