ರಾಯಚೂರು : ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದ ಘಟನೆಯು ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಲ್ಲಿ ಸಂಭವಿಸಿದೆ. ಮಸ್ಕಿ ಶಾಸಕ ಆರ್. ಬಸವನಗೌಡ ತುರುವಿಹಾಳ ಸಹೋದರ ಸಿದ್ದನಗೌಡ ಮೇಲೆ ಹಲ್ಲೆ ನಡೆದಿದೆ.
ಗಲಾಟೆ ನಡೆಯುತ್ತಿದ್ದಂತೆಯೇ ಅಲ್ಲೇ ಹತ್ತಿರದಲ್ಲಿದ್ದ ಗಚ್ಚಿನಮಠಕ್ಕೆ ತೆರಳಿ ಶಾಸಕ ಬಸವನಗೌಡ ಸಹೋದರ ಸಿದ್ದನಗೌಡ ಅಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಮಸ್ಕಿ ಠಾಣಾ ಪೊಲೀಸರು ಜನರ ಗುಂಪನ್ನು ಚದುರಿಸಿದ್ದಾರೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.