ಮೈಸೂರು : ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಸಮೇತ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಮೈಸೂರಿನ ಶ್ರೀಕಾಂತ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಮತ ಚಲಾವಣೆ ಮಾಡಿದ್ದಾರೆ.
![](https://pratidhvani.com/wp-content/uploads/2023/05/2023-05-10.jpg)
ಮತಚಲಾವಣೆ ಮಾಡಿದ ಬಳಿಕ ಮಾತನಾಡಿದ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮತದಾನ ಎಲ್ಲರ ಹಕ್ಕು . ಎಲ್ಲರೂ ತಪ್ಪದೇ ಬಂದು ಮತ ಚಲಾಯಿಸಿ. ಯುವಕರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಿ ಎಂದು ಹೇಳಿದರು.
ಮತದಾನ ಸೂಕ್ತ ರೀತಿಯಿಂದ ಚುನಾವಣಾ ಆಯೋಗ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಿದೆ. ಸಂಜೆಯವರೆಗೂ ಸಾಕಷ್ಟು ಸಮಯ ಇದೆ. ಎಲ್ಲರೂ ಬಂದು ತಪ್ಪದೇ ಮತಚಲಾಯಿಸಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.