ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತಗಟ್ಟೆಗಳತ್ತ ಮುಖ ಮಾಡುತ್ತಿರುವ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಬರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ಕೂಡ ಇಂದು ಮತಚಲಾವಣೆ ಮಾಡಿದರು.

ಮತದಾನ ಮಾಡಿ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ನಾನು ನನ್ನ ಕೆಲಸ ಮಾಡಿದ್ದೇನೆ, ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿದರು. ಅಲ್ಲದೇ ಪುನೀತ್ ರಾಜ್ಕುಮಾರ್ ಇರಬೇಕಿತ್ತು ಎಂದು ನೆನೆದರು.
ಈ ಬಾರಿ ಜನರಿಗೆ ಸಮಸ್ಯೆ ಆಗಬಾರದೆಂದು ಹೆಚ್ಚಿನ ಬೂತ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮತಚಲಾಯಿಸುವ ವೇಳೆ ಯಾವುದೇ ಅಡಚಣೆ ಉಂಟಾಗುತ್ತಿಲ್ಲ ಎಂದು ಹೇಳಿದರು.