2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಮೂರೇ ಮುರು ದಿನಗಳಷ್ಟೇ ಬಾಕಿ ಇದೆ. ಇದೇ ಮೇ 10ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತ ಪ್ರಚಾರ ನಡೆಸಿದ್ದಾರೆ. ಈ ಬಾರಿ ರಾಜಕೀಯ ನಾಯಕರಿಗೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಸಹ ಸಾಥ್ ನೀಡಿದ್ದಾರೆ. ರಾಜ್ಯಾದ ನಾನಾ ಕಡೆ ತೆರಳಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ.
![](https://pratidhvani.com/wp-content/uploads/2023/05/darshan-sixteen_nine.webp)
ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಬಾರಿ ಹಲವೆಡೆ ಚುನಾವಣಾ ಪ್ರಚಾರ ಮಾಡಿದ್ದಾರೆ. ಪ್ರಚಾರದ ವೇಳೆ ನಟ ದರ್ಶನ್, ʻನಾನು ದರ್ಶನ್ನ ಚಿತ್ರರಂಗಕ್ಕೆ ಕರೆತಂದೆ, ದರ್ಶನ್ ನ ಸ್ಟಾರ್ ಮಾಡ್ದೆ ಅಂತ ಹೇಳೋ ಅಧಿಕಾರ, ಅರ್ಹತೆ, ಯೋಗ್ಯತೆ ಇರೋದು ಎಮ್.ಜಿ.ರಾಮಮೂರ್ತಿಯವರಿಗೆ ಮಾತ್ರ, ಇನ್ಯಾರಿಗೂ ನಾನು ಆ ಯೋಗ್ಯತೆ ಕೊಟ್ಟಿಲ್ಲ. ನಾನು ಯಾರ್ ಮನೆ ಬಾಗಿಲಿಗೂ ಹೋಗಿ ದಯವಿಟ್ಟು ಸಿನಿಮಾ ಮಾಡಿ, ಅಂತ ಕೇಳ್ಕೊಂಡಿಲ್ಲ ಅಂತ ವಿರೋಧಿಗಳ ವಿರುದ್ಧ ರೆಬಲ್ ಆದ್ರು.