ಬಿಜೆಪಿ ಕೇವಲ ಉತ್ತರ ಭಾರತೀಯರ ಪಕ್ಷ ಎನ್ನುವ ಮಾತೊಂದು ರಾಜಕೀಯದಲ್ಲಿ ಇದೆ. ಉತ್ತರ ಭಾರತದ ನಾಯಕರಿಗೆ ಮಾತ್ರ ಪ್ರಮುಖ ಸ್ಥಾನಗಳನ್ನು ನೀಡುವ ಬಿಜೆಪಿ(BJP) ದಕ್ಷಿಣ ಭಾರತದ ಕಡೆಗೆ ತಿರುಗಿಯೂ ನೋಡಲ್ಲ ಎನ್ನುವುದು ಈ ಮಾತಿನ ತಾತ್ಪರ್ಯ. ಕಳೆದೊಂದು ದಶಕದಿಂದ ಕರ್ನಾಟಕದಲ್ಲಿ(karnataka) ಅಧಿಕಾರದ ರುಚಿ ಕಂಡಿರುವ ಕೇಸರಿ ಪಾಳಯ, ಒಮ್ಮೆಯೂ ಬಹುಮತದ ಸರ್ಕಾರ(government) ರಚನೆ ಮಾಡಲು ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎನ್ನುವುದು ಎದುರಾಳಿಗಳ ಆರೋಪ. ಕಳೆದ ಬಾರಿ ಕೂಡ ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರನ್ನು ಸೆಳೆದು ಅಧಿಕಾರ ಹಿಡಿದಿತ್ತು. ಆ ಬಳಿಕ ಶೇಕಡ 40 ರಷ್ಟು ಕಮಿಷನ್, ಪಿಎಸ್ಐ(PSI) ನೇಮಕಾತಿ ಹಗರಣ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ಬಿಜೆಪಿ ಹೆಸರು ಕೆಡಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಿದ್ದು, ನರೇಂದ್ರ ಮೋದಿ(narendra modi) ಸೇರಿದಂತೆ ಉತ್ತರ ಭಾರತದ ನಾಯಕರ ಪ್ರಚಾರ ಕರುನಾಡಿನಲ್ಲಿ ಮೊಳಗುತ್ತಿದೆ.


ವರುಣಾದಲ್ಲಿ ಅಮಿತ್ ಷಾ ಅಬ್ಬರ, ಕ್ಷೇತ್ರದತ್ತ ಸಿದ್ದು ನೋಟ..!
ಮೈಸೂರಿನ(mysore) ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ(amith shah) ಇತ್ತೀಚಿಗೆ ಅಬ್ಬರದ ಪ್ರಚಾರ ನಡೆಸಿದ್ದರು. ಇದರ ಬೆನ್ನಲ್ಲೇ ಅಲರ್ಟ್ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕ್ಷೇತ್ರದಲ್ಲೇ ಉಳಿದು ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಇಂದಿನಿಂದ ಮೈಸೂರಿನಲ್ಲೇ ಉಳಿದುಕೊಳ್ಳಲು ನಿರ್ಧಾರ ಮಾಡಿರುವ ಸಿದ್ದರಾಮಯ್ಯ, ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತ, ವರುಣಾ ವಿಧಾನಸಭೆ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡಿದ್ದಾರೆ. ಮೇ 4 ಹಾಗೂ 5ರಂದು ಮೈಸೂರಿನಲ್ಲೇ ಪ್ರಚಾರ ಸಭೆಗಳಲ್ಲಿ ಭಾಗಿಯಾಗಲಿದ್ದು, ವರುಣಾ ಕ್ಷೇತ್ರದಲ್ಲೂ(varuna) ಪ್ರಚಾರ ನಡೆಸಲಿದ್ದಾರೆ. ಎರಡು ದಿನಗಳ ಕಾಲ ವರುಣಾದಲ್ಲಿ ಮತಬೇಟೆ ಮಾಡಲು ನಿರ್ಧಾರ ಮಾಡಿದ್ದು, ಚುನಾವಣೆ ಮುಗಿದ ಮೇಲೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಷ್ಟ್ರೀಯ ನಾಯಕರು ಬಂದು ಚುನಾವಣಾ(election) ತಂತ್ರಗಾರಿಕೆ ಮಾಡಿದ ಬಳಿಕ ಸಿದ್ದರಾಮಯ್ಯ(siddaramaiah) ರಣತಂತ್ರ ಕೂಡ ಅದಲು ಬದಲಾಗಿದೆ. ಈ ಮೊದಲು ಒಂದೇ ದಿನ ಬಂದು ನಾಮಪತ್ರ ಸಲ್ಲಿಕೆ ಮಾಡ್ತೇನೆ. ಒಂದು ದಿನ ಮತ ಬಂದು ಮತ ಕೇಳ್ತೇನೆ ಎಂದಿದ್ದರು.

ಕುಮಾರಸ್ವಾಮಿ ಕ್ಷೇತ್ರದಲ್ಲಿ ಮೋದಿ ಅಬ್ಬರ.. ಪುತ್ರನಿಗೆ ಗೌಡರ ಶಕ್ತಿ..
ಅಮಿತ್ ಷಾ ಅಬ್ಬರಿದಿಂದ ಸಿದ್ದರಾಮಯ್ಯ ತಮ್ಮ ಕಾರ್ಯತಂತ್ರ ಬದಲು ಮಾಡಿಕೊಂಡಿದ್ದಾರೆ. ಆದರೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಪರವಾನಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದ್ದರು. ಆದರೂ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹಠಕ್ಕೆ ಬಿದ್ದಿದ್ದು, ಚನ್ನಪಟ್ಟಣದಲ್ಲಿ ಪ್ರಚಾರ ಮಾಡುವುದಕ್ಕೆ ಸಮಯ ಕೊಟ್ಟಿಲ್ಲ. ಇದೀಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ ಕೊಡ್ತೇನೆ ಎಂದು ಹೇಳುವ ವ್ಯಕ್ತಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ನುಡಿದಂತೆ ನಡೆಯುವ ರಾಜಕಾರಣಿ ಯಾವನಾದ್ರು ಇದ್ರೆ ಅದೂ ಕೂಡ ಕುಮಾರಸ್ವಾಮಿ ಎಂದು ಮಗನ ಬಗ್ಗೆ ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡಿದ್ದಾರೆ.

ಕುಮಾರಸ್ವಾಮಿ ಸಿಎಂ ಮಾಡಿದ ಶ್ರೇಯ ನಿಮಗೆ ಸಲ್ಲಲಿದೆ..
ಕಾಂಗ್ರೆಸ್ ಪಕ್ಷದ ವ್ಯಂಗ್ಯದ ನಡುವೆ ರೈತರ ಸಾಲ ಮನ್ನಾ ಮಾಡಿದ್ರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗಿದ್ರು. ಹಿಂದೂಸ್ಥಾನದಲ್ಲಿ ಕಾಂಗ್ರೆಸ್‌ನ(congress) ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ರೆ ಕುಮಾರಸ್ವಾಮಿ(HD kumaraswamy) ಮಾತ್ರ. ಸಿದ್ದರಾಮಯ್ಯ ಐವತ್ತು ಸಾವಿರ ಸಾಲ ಮನ್ನಾ ಮಾಡಿದ್ದರೂ 3,500 ಕೋಟಿ ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ. ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತಹ ಮತ್ತೊಬ್ಬ ಸಿಎಂ ಇಲ್ಲ. ಕಾಂಗ್ರೆಸ್, ಬಿಜೆಪಿಯವ್ರು(BJP) ನನ್ನ ಮುಂದೆ ನಿಂತು ಹೇಳಲಿ ಬೇಕಿದ್ದರೆ, ಇದು ನನ್ನ ಸವಾಲು ಎಂದಿದ್ದಾರೆ. ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತ ನಿರಾಕರಿಸಿದ್ರು ಎಂದಿರುವ ಗೌಡರು, ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ದ. ಮುಖ್ಯಮಂತ್ರಿ ಕೊಡುವ ಹೆಗ್ಗಳಿಕೆ ಚನ್ನಪಟ್ಟಣಕ್ಕೆ ಸಲ್ಲಬೇಕು. ಯುವಕರು ದೇಶದ ಮುಂದಿನ ಪ್ರಜೆಗಳು ಈ ಪಕ್ಷವನ್ನ ಉಳಿಸಿ. ನಾವು ತಾಯಿ ಭುವನೇಶ್ವರಿ ಮಕ್ಕಳು ನಾಡಿಗಾಗಿ ತಮ್ಮ ಶಕ್ತಿ ತೋರಿಸಿ ಎಂದು ಕನ್ನಡತನ ಉಳಿಸಿ ಎಂದಿದ್ದಾರೆ.














