ತುಮಕೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ದೇವರ ಮೇಲಿರುವ ಭಕ್ತಿ ಬಗ್ಗೆ ಮಾತನಾಡುವಂತೆಯೇ ಇಲ್ಲ. ಪ್ರತಿ ಬಾರಿ ಕಷ್ಟ ಬಂದಾಗಲೂ ಸಹ ಡಿಕೆಶಿ ಟೆಂಪಲ್ ರನ್ ಮಾಡಿದ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಮೊನ್ನೆ ಮೊನ್ನೆಯಷ್ಟೇ ಕನಕಪುರದಲ್ಲಿ ನಾಮಪತ್ರ ತಿರಸ್ಕೃತಗೊಳ್ಳುವ ಭಯದಲ್ಲಿದ್ದ ಡಿಕೆಶಿ ಈ ಸಮಸ್ಯೆಯಿಂದ ಪಾರಾಗುತ್ತಿದ್ದಂತೆಯೇ ದೇಗುಲಗಳ ದರ್ಶನ ಮಾಡಿದ್ದರು.
ಇದೀಗ ಹೆಲಿಕಾಪ್ಟರ್ ಅಪಘಾತದಿಂದ ಪಾರಾಗುತ್ತಿದ್ದಂತೆಯೇ ಡಿಕೆಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ಮೊರೆ ಹೋಗಿದ್ದಾರೆ. ಹೆಲಿಕಾಪ್ಟರ್ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಮುಂಭಾಗದ ಗಾಜು ಪುಡಿ ಪುಡಿಯಾಗಿತ್ತು. ನಿನ್ನೆ ಡಿಕೆಶಿ ಜಕ್ಕೂರಿನಿಂದ ಮುಳಬಾಗಿಲುಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು.
ಈ ಘಟನೆ ಬಳಿಕ ಡಿಕೆಶಿ ಇಂದು ತುಮಕೂರು ಜಿಲ್ಲೆಯ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದು ಅಜ್ಜಯ್ಯನ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ಅಲ್ಲದೇ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕಾನಾಥ್ ಬಳಿಯೂ ಸಮಾಲೋಚನೆ ನಡೆಸಿದ್ದಾರೆ.