ಬೆಳಗಾವಿ : ನಾಮಪತ್ರ ಸಲ್ಲಿಕೆ ಮಾಡಲು ಉತ್ತಮ ಮುಹೂರ್ತವನ್ನು ಹುಡುಕಿ, ದೇವರ ಆಶೀರ್ವಾದ ಪಡೆಯುವ ಅಭ್ಯರ್ಥಿಗಳ ನಡುವೆ ಯಮಕನಮರಡಿ ಕ್ಷೇತ್ರದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪ್ರತಿಬಾರಿಯಂತೆ ಈ ಬಾರಿಯೂ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಸದಾ ಮೂಢನಂಬಿಕೆಗಳ ವಿರುದ್ಧ ಕೆಲಸ ಮಾಡುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ರಾಹುಕಾಲ ಶುರುವಾದ ಬಳಿಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರತಿ ಬಾರಿಯೂ ಸತೀಶ್ ಜಾರಕಿಹೊಳಿ ಇದೇ ರೀತಿ ಮಾಡುತ್ತಾ ಬಂದಿದ್ದಾರೆ.
ಹುಕ್ಕೇರಿ ತಹಶೀಲ್ಡಾರ್ ಕಚೇರಿಗೆ ತೆರಳಿದ ಸತೀಶ್ ಜಾರಕಿಹೊಳಿ ರಾಹುಕಾಲ ಆರಂಭವಾಗುವವರೆಗೆ ಕಾದು ಬಳಿಕ ಉಮೇದುವಾರಿಕೆ ಸಲ್ಲಿಸಿದ್ದಾರೆ.