ನವದೆಹಲಿ :ಏ.1: ಒಂದು ವರ್ಷಗಳ ಜೈಲು ಶಿಕ್ಷೆಯಲ್ಲಿ 10 ತಿಂಗಳ ಜೈಲು ಶಿಕ್ಷೆ ಪೂರೈಸಿರುವ ಪಂಜಾಬ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇಂದು ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರಬರುತ್ತಿರುವುದಾಗಿ ನವಜೋತ್ ಸಿಂಗ್ ಸಿಧು ಅವರ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ದಾಖಲಾಗಿತ್ತು. ಶನಿವಾರ ಹೆಚ್ಚಿನ ಸಮಯ ಜೈಲಿನ ಅಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ, ಸಂಜೆಯ ವೇಳೆಗೆ ಜೈಲಿನಿಂದ ಹೊರಬಂದರು.

ಜೈಲಿನ ಒಳಗೆ ಅಧಿಕಾರಿಗಳಿಗೆ ಸಿಧು ಥ್ಯಾಂಕ್ಸ್ ಕೂಡ ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ನ ಮಾಜಿ ಮುಖ್ಯಸ್ಥ ಶಂಶೇರ್ ಸಿಂಗ್ ಡುಲ್ಲೋ ಲಾಲ್ ಸಿಂಗ್ ಮತ್ತು ಮೊಹಿಂದರ್ ಸಿಂಗ್ ಕೆಪಿ, ಅಮೃತಸರ ಸಂಸದ ಗುರ್ಜಿತ್ ಔಜ್ಲಾ, ಮಾಜಿ ಶಾಸಕರಾದ ಹರದಯಾಳ್ ಕಾಂಬೋಜ್, ಅಶ್ವಿನಿ ಸೆಖ್ರಿ ಸಹ ಪಟಿಯಾಲ ಕೇಂದ್ರ ಕಾರಾಗೃಹದ ಹೊರಗೆ ಮುಂಜಾನೆಯಿಂದಲೇ ಕಾಯುತ್ತಿದ್ದರು. ನವಜೋತ್ ಸಿಂಗ್ ಸಿಧು ಬಿಡುಗಡೆಯ ಮಾಹಿತಿಯನ್ನು ಸಿಧು ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಶುಕ್ರವಾರ ನೀಡಲಾಗಿತ್ತು. ಇದರೊಂದಿಗೆ ಅವರ ಕುಟುಂಬ ಸದಸ್ಯರೂ ಇದನ್ನು ಖಚಿತಪಡಿಸಿದ್ದರು. ಮೂಲದಲ್ಲಿ ಅವರ ಮೇ 16 ರಂದು ಜೈಲಿನಿಂದ ಬಿಡುಗಡೆಯಾಗಬೇಕಿತ್ತು. ಆದರೆ ಅವರ ಉತ್ತಮ ನಡತೆಯಿಂದಾಗಿ, ಸಿಧುಗೆ ಸುಪ್ರೀಂ ಕೋರ್ಟ್ ನೀಡಿದ ಒಂದು ವರ್ಷದ ಶಿಕ್ಷೆಯಿಂದ 45 ದಿನಗಳ ವಿನಾಯಿತಿ ನೀಡಿದೆ.












