ಬೆಂಗಳೂರು: ಮಾ.20: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ (ಮಂಗಳವಾರ) 87ನೇ ದಿನದ ಪಂಚರತ್ನ ರಥಯಾತ್ರೆ ನಡೆಯಲಿದೆ.
ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿಕೆ ನೇತೃತ್ವದ ರಥಯಾತ್ರೆಯನ್ನು ಮೆಕ್ರಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಯ್ಯದ್ ಮೋಹಿದ್ ಅಲ್ತಾಫ್ ತಿಳಿಸಿದ್ದಾರೆ. ಅಲ್ಲಿಂದ ರಥೆಯಾತ್ರೆಯು ಸಂಜಯ ನಗರದ ಶ್ರೀ ರಾಧಾಕೃಷ್ಣ ದೇವಸ್ಥಾನದಿಂದ ಆರಂಭಗೊಂಡು, ನಾಗಶೆಟ್ಟಿಹಳ್ಳಿಯ ಬಸ್ ನಿಲ್ದಾಣದ ಮೂಲಕ ಭೂಪಸಂದ್ರ ಮುಖ್ಯರಸ್ತೆಯಿಂದ ಹಾದು ಹೋಗಿ ಹೆಬ್ಬಾಳ ಫ್ಲೈ ಓವರ್ ಮೂಲಕ ಸುಮಂಗಲಿ ಸೇವಾಶ್ರಮ ಬಳಿ ಸಾಗಲಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಅವರು ಅನೇಕ ಕಡೆ ರೋಡ್ ಶೋ ಗಳನ್ನ ನಡೆಸಲಿದ್ದು, ಕನಕನಗರ ರಸ್ತೆಯ ಮೂಲಕ ದೇವೇಗೌಡ ರಸ್ತೆಯಲ್ಲಿ ತೆರಳಿದ ನಂತರ ಹೆಚ್. ಎಂ.ಟಿ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆಯೊಂದಿಗೆ ಮುಕ್ತಾಯವಾಗಲಿದೆ.
ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪಕ್ಷದ ರಾಷ್ಟ್ರೀಯ ನಾಯಕರಾದ ಉಬೈದುಲ್ಲ ಖಾನ್ ಅಜ್ಮೀ , ಬಿ ಎಂ ಫಾರೂಕ್, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ್, ರಾಷ್ಟ್ರೀಯ ನಾಯಕರಾದ ಝಫರುಲ್ಲಾ ಖಾನ್ ಹಾಗೂ ಬೆಂಗಳೂರು ನಗರಾಧ್ಯಕ್ಷರಾದ ಆರ್. ಪ್ರಕಾಶ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.