ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕಾಂಗ್ರೆಸ್ನ 14 ಮಂದಿ ಶಾಸಕರು ಹಾಗು ಜೆಡಿಎಸ್ನ 3 ಮಂದಿ ಶಾಸಕರು. ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಶಾಸಕರು ಬಾಂಬೆ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಹೋಗಿದ್ದ ಶಾಸಕರು ಹುಡುಗಿಯರ ಜೊತೆಗೆ ಮೋಜು ಮಸ್ತಿ ಮಾಡಿದ್ದರು ಎನ್ನುವ ಸುದ್ಧಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬಳಿಕ ಬಾಂಬೆ ಟೀಂನಲ್ಲಿದ್ದ ಅಂದಿನ ಜೆಡಿಎಸ್ ಶಾಸಕ ಹೆಚ್. ವಿಶ್ವನಾಥ್, ಬಾಂಬೆಯಲ್ಲಿ ನಡೆದ ವಿಚಾರಗಳ ಸಂಪೂರ್ಣ ವಿಚಾರವನ್ನು ಪುಸ್ತಕದಲ್ಲಿ ದಾಖಲು ಮಾಡ್ತೇನೆ ಎಂದು ಘೋಷಣೆ ಮಾಡಿದ್ದರು. ಇದೀಗ ಬಾಂಬೆ ರಿಟರ್ನ್ ಪುಸ್ತಕ ಬಿಡುಗಡೆ ಆಗಿದೆ. ಬಾಂಬೆಯಲ್ಲಿ ನಡೆದ ಹಸಿಬಿಸಿ ವಿಚಾರಗಳು ಈ ಪುಸ್ತಕದಲ್ಲಿ ಉಲ್ಲೇಖ ಆಗಿದೆ.
ಬಾಂಬೆ ಹೋಟೆಲ್ನಲ್ಲಿ ಹಸಿಬಿಸಿ ಸೃಷ್ಟಿಸಿದ್ದು ಯಾರು..?
ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಲಿದೆ ಎನ್ನುವ ಖ್ಯಾತಿ ಪಡೆದಿದ್ದ ಬಾಂಬೆ ರಿಟರ್ನ್ಸ್ ಡೇಸ್ ಪುಸ್ತಕ ರಿಲೀಸ್ ಆಗಿದೆ. ಬಾಂಬೆ ಬಾಯ್ಸ್ ಟೀಂನಲ್ಲಿದ್ದ ಹಾಲಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರ ಆಪ್ತ ಮೈಸೂರಿನ ವಿ. ವೀರಭದ್ರಪ್ಪ ಬಿಸ್ಲಳ್ಳಿ ಪುಸ್ತಕ ಬರೆದಿದ್ದಾರೆ. ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಪುಸ್ತಕ ಬಿಡೆಯಾಗಿದೆ. ಪುಸ್ತಕ ಬಿಡುಗಡೆ ಬಳಿಕ ಮಾತನಾಡಿರುವ ಲೇಖಕ ವೀರಭದ್ರಪ್ಪ, ತಮ್ಮ ಬರವಣಿಗೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬಾಂಬೆ ರಿಟರ್ನ್ ಡೇಸ್ನಲ್ಲಿ ಸತ್ಯವಿದೆ, ಇಡೀ ಘಟನೆಯನ್ನ ಅಲ್ಲಗಳೆಯೋಕೆ ಆಗೋಲ್ಲ, ಡೆಮಾಕ್ರಸಿಯಲ್ಲಿ ಈ ರೀತಿಯ ಘಟನೆಗಳು ಬೇಕಾ..? ಎಂದು ಪ್ರಶ್ನಿಸಿರುವ ಬಿಸ್ಲಳ್ಳಿ, ಈ ಘಟನೆಗಳು ಯಾರಿಗೆ ಬೇಕು..? ಇದರ ಮೂಲ ಸೂತ್ರಧಾರ ಯಾರು..? ಸರ್ಕಾರದ ಪತನವಾಗಿದ್ರ ಬಗ್ಗೆ ಬರೆದಿದ್ದೇನೆ. ಸರ್ಕಾರದ ಪತನವಾಗಿ ಮತ್ತೆ ಸರ್ಕಾರ ರಚನೆ ಆಗುತ್ತೆ. ಸಂಪರ್ಕಕ್ಕೆ ಸೇಹ್ನಕ್ಕೆ ಸೂಕ್ತವಲ್ಲ ಅನ್ನೋ ಚಾಪ್ಟರ್ ಇದೆ. ಈ ಪುಸ್ತಕ ಯಾರನ್ನೂ ದ್ವೇಷಿಸೋ ಹಾಗೂ ಪ್ರಿತಿಸೋ ಉದ್ದೇಶ ಹೊಂದಿಲ್ಲ ಎಂದಿದ್ದಾರೆ.

ಯಾರಿಗಾದರೂ ಈ ಪುಸ್ತಕದಿಂದ ನೋವಾದ್ರೆ ನಾನು ಹೊಣೆಯಲ್ಲ..!
ಬಾಂಬೆ ರಿಟರ್ನ್ ಡೇಸ್ ಪುಸ್ತಕಕ್ಕೆ ಸೆನ್ಸ್ ಲೆಸ್ ಪಾಲಿಟಿಕ್ಸ್ ಅಂತಾ ಟಾಗ್ ಲೈನ್ ಕೊಡಲಾಗಿದೆ. ನಾವು ವಾರದ ಹಿಂದೆ ಪುಸ್ತಕ ಬಿಡುಗಡೆ ಮಾಡ್ಬೇಕು ಅಂತಾ ನಿಶ್ಚಯ ಮಾಡಿದ್ದೆವು. ಕರ್ನಾಟಕ ರಾಜಕಾರಣದಲ್ಲಿ 23 ತಿಂಗಳಲ್ಲಿ ನಡೆದ ರಾಜಕೀಯ ಪ್ರಹಸನ ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮ ದೇಶದ ಸಂವಿಧಾನಕ್ಕೆ ನಾವು ಕೊಟ್ಟಿರೋ ಗೌರವವೇನು..? ಈ ಪ್ರಶ್ನೆಗಳನ್ನು ಇಟ್ಕೊಂಡು ನಾನು 15 ತಿಂಗಳಿಂದ ಪುಸ್ತಕ ಬರೆಯೋಕೆ ಪ್ರಾರಂಭ ಮಾಡಿದ್ದೆ. ನಾವು ಯಾರ ಹೆಸ್ರನ್ನ ಪ್ರಸ್ತಾಪ ಮಾಡಿಲ್ಲ. ಸ್ಥಳದ ಬಗ್ಗೆ ಪ್ರಸ್ತಾಪ ಅನಿವಾರ್ಯವಾಗಿದೆ, ನಾನು ಸ್ಥಳದ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ನಾವು ಯಾರನ್ನ ಕೂಡ ಟಾರ್ಗೆಟ್ ಮಾಡಿಲ್ಲ. ನಾನು ಪರ್ಸನಲ್ ಆಗಿ ಯಾರನ್ನು ಆಟ್ಯಾಕ್ ಮಾಡಿಲ್ಲ. ಬಾಂಬೆಯಲ್ಲಿ ಏನೇನು ಘಟನೆ ನಡೆದಿದೆ ಅದನ್ನ ಬರೆದಿದ್ದೇನೆ. ಪುಸ್ತಕದಲ್ಲಿ ಯಾವುದೇ ಗೊಂದಲವಿಲ್ಲ, ಸತ್ಯ ಘಟನೆಯ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಎಲ್ಲಾ ರಾಜಕೀಯ ಪ್ರಹಸನದ ಬಗ್ಗೆ, ಪಂಚಾತಾರ ಹೋಟೆಲ್, ರೆಸಾರ್ಟ್ ಹಾಗೂ ಮಹಾರಾಷ್ಟ್ರದಲ್ಲಿ ನಡೆದಿರುವ ಘಟನೆ ಬಗ್ಗೆ ವಿವರಣೆ ನೀಡಿದ್ದೇನೆ. ಈ ಪುಸ್ತಕದಿಂದ ಯಾರಿಗಾದ್ರೂ ನೋವಾದ್ರೆ ಏನು ಮಾಡೋಕೆ ಆಗೋಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ.
ಸೆಕ್ಸ್ ಬಗ್ಗೆ ಹೇಗೆ ಬರೆದಿದ್ದಾರೆ ಲೇಖಕ ಬಿಸ್ಲಳ್ಳಿ..!
ರಾಜ್ಯ ರಾಜಕಾರಣ ಹೀಗೆ ಮುಂದುವರಿದ್ರೆ ಇನ್ಮುಂದೆ ವಿದೇಶದಲ್ಲಿ ಸರ್ಕಾರ ರಚನೆ ಆಗುತ್ತದೆ ಎಂದಿರುವ ಲೇಖಕ ವಿ ವೀರಭದ್ರ ಬಿಸ್ಲಳ್ಳಿ, ಯಾರ ಖಾಸಗಿ ವಿಚಾರವನ್ನೂ ಪ್ರಸ್ತಾಪ ಮಾಡಿಲ್ಲ. ಆಗಿದ್ರೂ ಯಾರಿಗೂ ನೋವು ಮಾಡುವ ಉದ್ದೇಶವನ್ನು ಈ ಪುಸ್ತಕ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯ ನ್ಯಾಯವಾದಿ ಸಿ ಎಚ್ ಹನುಂತರಾಯಪ್ಪ ಮಾತನಾಡಿ, ಪುಸ್ತಕದಲ್ಲಿ ಬಳಕೆಯಾಗಿರೋದು ಭಾಷೆ ಗಂಡು ಭಾಷೆ. ಈ ಪುಸ್ತಕವನ್ನು ಓದಿದಾಗ ಅಲ್ಬರ್ಟ್ ಐನ್‍ಸ್ಟಿನ್ ಘಟನೆಯ ಬಗ್ಗೆ ಪ್ರಸ್ತಾಪವಾಗಿದೆ. ಇಸ್ರೇಲ್ ದೇಶದ ಮೊದಲ ಅಧ್ಯಕ್ಷನಾಗೋ ಸಂಧರ್ಭವನ್ನ ಐಸ್ಟೀನ್ ತಿರಸ್ಕರಿಸಿದ್ದ. ನಮ್ಮ ರಾಜಕೀಯ ನಾಯಕರ ಉದ್ದಟತನ ಹಾಗೂ ಅವಿವೇಕತನ ಬಗ್ಗೆ ನೆನಪಾಗುತ್ತೆ ಎಂದಿದ್ದಾರೆ. ಇನ್ನು ಪುಸ್ತಕದಲ್ಲಿ ಜೆ ಹೆಚ್ ಪಟೇಲ್ ಅವ್ರ ಮಾತಿನ ಬಗ್ಗೆ ಉಲ್ಲೇಖವಿದೆ. ಪುಸ್ತಕದಲ್ಲಿ ನೈಜತೆ ಕಟ್ಟಿಕೊಂಡು ಬರೆಯಲಾಗಿದೆ. ಸೆಕ್ಸ್ ಬಗ್ಗೆ ಸಹಜವಾಗಿ ಬರೆದಿದ್ದಾರೆ. ಅಸಹ್ಯಕರವಾಗಿದೆ ಅಂತಾ ಅನ್ಸೋದಿಲ್ಲ. ಎಲ್ಲಾ ಗುಣ ಲಕ್ಷಣಗಳನ್ನು ಪಡೆದುಕೊಂಡು ಈ ಪುಸ್ತಕ ಹುಟ್ಟಿದೆ ಎಂದಿದ್ದಾರೆ.

ಕೆಲವು ಸಂಧರ್ಭಕ್ಕೆ, ಘಟನೆಗಳಿಗೆ ಪುಸ್ತಕದಲ್ಲಿ ವಂಚನೆಯಾಗಿಲ್ಲ, ಎಲ್ಲಾದ್ರ ಬಗ್ಗೆ ನೈಜವಾಗಿ ಬರೆಯಲಾಗಿದೆ. ಕರ್ಸರ್ ರೀಡಿಂಗ್ನಿಂದ ನನ್ನ ಮೇಲೆ ಇಂಪಾಕ್ಟ್ ಆಗಿದೆ. ದರಿದ್ರ ರಾಜಕಾರಣದಲ್ಲಿ, ದರಿದ್ರ ರಾಜಕಾರಣಿಗಳು ಎಂತಾ ಮಟ್ಟಕ್ಕೆ ಇಳಿಯಬಲ್ಲರು ಅನ್ನೋ ಬಗ್ಗೆ ವರ್ಣನೆ ಮಾಡಲಾಗಿದೆ. ಜನರ ಹಣದಿಂದ ಎಲ್ಲಿಯವರೆಗೆ ಕೀಳುಮಟ್ಟಕ್ಕೆ ರಾಜಕಾರಣಿಗಳು ಇಳಿತಾರೆ ಅನ್ನೋದನ್ನ ಬರೆದಿದ್ದಾರೆ. ಈ ಪುಸ್ತಕ ಚರ್ಚಾ ವಿಷಯ ಆಗಿದೆ. ಯಾರಾದ್ರೂ ಪುಸ್ತಕ ಓದಿದ್ರೆ ಹತ್ತು ಜನ ಸೇರಿ ಮಾತಾನಾಡುವಂತಿದೆ ಎಂದಿದ್ದಾರೆ. ಇನ್ನು ಪ್ರೋ .ಜಯಪ್ರಕಾಶ್ ಮಾತನಾಡಿ, ವೀರಭದ್ರ ಬಿಸ್ಲಳ್ಳಿ ಅವ್ರು ಇದ್ರ ಬಗ್ಗೆ ಮಾತನಾಡಿದಾಗ ನಾನು ಕಾರ್ಯಕ್ರಮಕ್ಕೆ ಬರುವುದಕ್ಕೆ ಒಪ್ಕೊಂಡೆ, ಕಾರಣ ನನ್ನ ಅವ್ರ ಗೆಳೆತನವಾಗಿದೆ. ಇಂದ್ರಾಣಿ ಮುಖರ್ಜಿ ಅವ್ರ ಬಗ್ಗೆ ಪುಸ್ತಕ ಬರೆದಿದ್ರು ಅದು ಕೂಡ ಸಂಚಲನ ಮೂಡಿಸಿತ್ತು. ಎಸ್ ಎಲ್ ಬೈರಪ್ಪ ನವ್ರ ಪುಸ್ತಕ ತಂತು ಮಹಾರಾಷ್ಟ್ರದಲ್ಲಿ ಚರ್ಚೆ ಆಗಿದೆ. ಕೆಲವು ಲೇಖಕರು ಹಲವು ಲೇಖನ ಬರೆದಿದ್ದಾರೆ. ವೀರಭದ್ರ ಅವ್ರ ಕೃತಿಯು ‘ದಿ ಇನ್ ಸೈಡರ್’ ಕೃತಿಗೆ ಸಾಮಿಪ್ಯವಿದೆ. ಕರ್ನಾಟಕ ರಾಜಕಾರಣಿದ ಎಲ್ಲಾ ಘಟನಾವಳಿಗಳು ಪುಸ್ತಕದಲ್ಲಿವೆ ಎಂದಿದ್ದಾರೆ.






