• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಮಹಿಳಾ ದಿನದ ವಿಶೇಷ ಈ ನಮ್ಮ ಹೆಮ್ಮೆಯ ಕನ್ನಡತಿ..! ಲಕ್ಷಕ್ಕೆ ಒಬ್ಬಳು..

ಕೃಷ್ಣ ಮಣಿ by ಕೃಷ್ಣ ಮಣಿ
March 8, 2023
in ಅಂಕಣ
0
ಮಹಿಳಾ ದಿನದ ವಿಶೇಷ ಈ ನಮ್ಮ ಹೆಮ್ಮೆಯ ಕನ್ನಡತಿ..! ಲಕ್ಷಕ್ಕೆ ಒಬ್ಬಳು..
Share on WhatsAppShare on FacebookShare on Telegram

ADVERTISEMENT

‘ಸ್ತ್ರೀ ಎನ್ನುವ ಶಕ್ತಿ’ ಪ್ರಕೃತಿಗೆ ಸಮಾನಳು. ಮಾನವ ಏನನ್ನೇ ಸಾಧಿಸಿದರೂ ಪ್ರಕೃತಿ ಎದುರು ಮಾನವನ ಶಕ್ತಿ ನಗಣಗ್ಯ. ಅದೇ ರೀತಿ ಪುರುಷ ಅದೆಷ್ಟೇ ಬಲಾಢ್ಯನಾದರೂ ಸ್ತ್ರೀ ಶಕ್ತಿ ಎದುರು ತುಸು ಕಡಿಮೆಯೇ ಎನಿಸುತ್ತದೆ. ಇದಕ್ಕೆ ಕಾರಣ ಭಾರತದಲ್ಲಿ ದೇಶ ರಕ್ಷಣೆ ಕೆಲಸಕ್ಕೆ ಮಹಿಳಾ ಮಣಿಗಳ ಸೇನೆ ಸದ್ದಿಲ್ಲದೆ ಸಜ್ಜಾಗುತ್ತಿದೆ. ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ತರಬೇತಿ ನಡೆಯುತ್ತಿದೆ ಎನ್ನುವುದು ನಮ್ಮ ಕರ್ನಾಟಕದ ಹೆಮ್ಮೆ. ಬೆಂಗಳೂರಿನ ನೀಲಸಂದ್ರದಲ್ಲಿರುವ ಮಿಲಿಟರಿ ಕ್ಯಾಂಪಸ್​ನಲ್ಲಿ ಮಾರ್ಚ್​ 1 ರಿಂದ ತರಬೇತಿ ಶುರುವಾಗಿದ್ದು ಬರೋಬ್ಬರಿ 31 ವಾರಗಳ ತರಬೇತಿ ನಡೆಯಲಿದೆ ಎನ್ನಲಾಗಿದೆ. ಸೇನಾ ಪ-ಡೆಗೆ ಹೇಗೆ ಕಠಿಣ ತರಬೇತಿ ನೀಡಲಾಗುತ್ತದೆ ಅದೇ ರೀತಿಯಲ್ಲಿ 4 ವರ್ಷದ ಅಗ್ನಿವೀರ್​ ಪಡೆಗೂ ಕಠಿಣ ತರಬೇತಿ ನೀಡಲಾಗ್ತಿದೆ.

ಎರಡೂವರೆ ಲಕ್ಷ ಜನರಲ್ಲಿ ಆಯ್ಕೆಯಾದ ಕನ್ನಡತಿ..!

ಮಿಲಿಟರಿ ಪೊಲೀಸ್​ ಪಡೆಗೆ ಮಹಿಳಾ ಪಡೆಯನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿದ್ದು, ದೇಶಾದ್ಯಂತ ಎರಡೂವರೆ ಲಕ್ಷ ಮಂದಿ ಸೇನೆಗೆ ಸೇರುವುದಕ್ಕೆ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 100 ಜನರ ತಂಡವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಆ ನೂರು ಜನ ಮಹಿಳಾ ಸೇನಾಪಡೆಯಲ್ಲಿ ಕರ್ನಾಟಕದಿಂದ ಒಬ್ಬಳೇ ಒಬ್ಬಳು ಯುವತಿ ಆಯ್ಕೆಯಾಗಿದ್ದಾಳೆ ಎನ್ನುವುದು ಸದ್ಯಕ್ಕೆ ಹೆಮ್ಮೆ ಪಡುವ ಸಂಗತಿಯಾಗಿದೆ. ಉಡುಪಿ ಜಿಲ್ಲೆ ಕುಂದಾಪುರದ ಶ್ರೀದೇವಿ ಮೊದಲ ಮಹಿಳಾ ಸೇನಾಪಡೆಯಲ್ಲಿ ಸ್ಥಾನ ಪಡೆದುಕೊಂಡಿದ್ದು, ದೇಶ ಸೇವೆ ಮಾಡುವುದು ನನ್ನ ಕನಸಾಗಿತ್ತು. ಆ ಕನಸು ನನಸಾಗುವ ಕಾಲ ಬಂದಿದೆ. ನಾನು ನಾಲ್ಕು ವರ್ಷ ಮಾತ್ರವಲ್ಲ, ಒಟ್ಟು 35 ವರ್ಷ ಸೇವೆ ಮಾಡ್ತೇನೆ ಎನ್ನುವ ಮೂಲಕ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕ್ರೀಡಾಪಟುಗಳು, ಎನ್’​ಸಿಸಿ ಕೆಡೆಟ್​ಗಳಿಗೆ ಅವಕಾಶ..!

ಕೇಂದ್ರ ಸರ್ಕಾರ 4 ವರ್ಷಗಳಿಗೆ ಮಾತ್ರ ಅಗ್ನಿವೀರ್​ ಎನ್ನುವ ಸೇನಾಪಡೆಯನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ. 4 ವರ್ಷಗಳ ಬಳಿಕ ಎಲ್ಲರಿಗೂ ಒಂದು ನಿವೃತ್ತ ಪ್ಯಾಕೇಜ್​ ಕೊಟ್ಟು ವಾಪಸ್​ ಕಳಿಸಲಾಗುತ್ತದೆ. ಪ್ರತಿವರ್ಷ ನೇಮಕಾತಿ ಹಾಗು ನಿವೃತ್ತಿ ನಡೆಯುತ್ತಿರುತ್ತದೆ. ಒಂದು ವೇಳೆ ಸೇನಾ ತರಬೇತಿ ಹಾಗು ಮುಂದಿನ ನಾಲ್ಕು ವರ್ಷಗಳ ಕಾಲ ಉತ್ತಮ ಪ್ರದರ್ಶನ, ಚಾಕಚಕ್ಯತೆ, ವೃತ್ತಿಯಲ್ಲಿ ಗುರುತಿಸಬಹುದಾದ ಕಾರ್ಯಗಳನ್ನು ಮಾಡಿದ ಶೇಕಡ 25 ರಷ್ಟು ಜನರನ್ನು ಮುಖ್ಯ ಸೇನಾಪಡೆಗೆ ಮುಂದುವರಿಸಲಾಗುತ್ತದೆ.

ಇದೇ ಕನಸನ್ನು ಹೊತ್ತು ಭಾರತಾಂಬೆಯ ಸೇವೆಗೆ ನಾ ಮುಡಿಪು ಎಂದಿದ್ದಾಳೆ ಕುಂದಾಪುರದ ಹೆಣ್ಣು ಮಗಳು, ಹೆಮ್ಮಯ ಕನ್ನಡತಿ ಶ್ರೀದೇವಿ. ಎರಡೂವರೆ ಲಕ್ಷ ಜನರಲ್ಲಿ ಕೇವಲ 100 ಜನರನ್ನು ಆಯ್ಕೆ ಮಾಡಿರುವ ಕೇಂದ್ರ ಸರ್ಕಾರ ಕ್ರೀಡಾಪಟುಗಳು, ಎನ್​ಸಿಸಿ ಕೆಡೆಟ್​ಗಳಿಗೆ ಅವಕಾಶ ಕಲ್ಪಿಸಿದೆ. ಶ್ರೀದೇವಿ ಕೂಡ ಕ್ರೀಡಾಪಟು.

ಸರ್ಕಾರಿ ಶಾಲೆಯಲ್ಲೇ ಓದಿದ ಗಟ್ಟಿಗಿತ್ತಿ ಶ್ರೀವಿದ್ಯ..!

ಉಡುಪಿ ಜಿಲ್ಲೆ ಕುಂದಾಪುರದ ಶ್ರೀದೇವಿ, ಕೃಷಿಕರಾದ ತಂದೆ, ತಾಯಿಗೆ ಒಬ್ಬಳೇ ಮಗಳು. ಪ್ರಾಥಮಿಕ ಹಾಗು ಪ್ರೌಢಶಾಲೆಯನ್ನು ಸರ್ಕಾರಿ ಶಾಲೆಯಲ್ಲಿ ಓದಿದ ಶ್ರೀದೇವಿ, ಕ್ರೀಡಾ ಕೋಟಾದಲ್ಲಿ ಆಳ್ವಾಸ್​ನಲ್ಲಿ ಪಿಯು ಮುಗಿಸಿದ್ರು. ಆ ಬಳಿಕ ಬಿಕಾಂ ವಿದ್ಯಾಭ್ಯಾಸವನ್ನು ಬಂಡರ್ಕರ್​ ಕಾಲೇಜಿನಲ್ಲಿ ಓದಿ, ಕೆಎಎಸ್​​ ಹುದ್ದೆಯ ಕನಸು ಕಾಣ್ತಿದ್ದವರು. ಇದೀಗ ದೇಶಸೇವೆ ಮಾಡಲು ಸಿಕ್ಕ ಅವಕಾಶವನ್ನು ಕೆಚ್ಚೆದೆಯಿಂದ ಸ್ವೀಕಾರ ಮಾಡಿ, ಕಠಿಣ ತರಬೇತಿಯಲ್ಲಿ ತಲ್ಲೀನರಾಗಿದ್ದಾರೆ. ನುರಿತ ಹಾಗು ಹಿರಿಯ ಸೇನ ಅಧಿಕಾರಿಗಳು ಯುವತಿಯರ ಪಡೆಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಫಿಸಿಕಲ್ ಫಿಟ್ನೆಸ್, ಆರ್ಮ್ ಟ್ರೈನಿಂಗ್, ಡಿಸಿಪ್ಲಿನ್ ಬಗ್ಗೆ ತರಬೇತಿ ನೀಡಲಾಗ್ತಿದೆ. ಮುಂದಿನ ಏಳೂವರೆ ತಿಂಗಳ ತರಬೇತಿ ಬಳಿಕ ಸೇನಾಪಡೆಗೆ ಸೇರ್ಪಡೆ ಆಗಲಿದ್ದಾರೆ. ಕಂದನನ್ನು ಎತ್ತಿ ಆಡಿಸುವ ಹೆಣ್ಣು ಇದೀಗ ಭಾರತಾಂಬೆಯ ರಕ್ಷಣೆಗೂ ಟೊಂಕಕಟ್ಟಿ ನಿಂತಿದ್ದು ಸಾಧನೆಯೇ ಸರಿ.

Tags: ಮಹಿಳಾ ದಿನಾಚರಣೆ
Previous Post

ಮೋದಿಯವರ ದೇಶಭಕ್ತಿಯ ಅನಾವರಣ

Next Post

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತೆಲಂಗಾಣ ಸಿಎಂ ಪುತ್ರಿ ಕೆ. ಕವಿತಾಗೆ ಇಡಿ ಸಮನ್ಸ್

Related Posts

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ
ಅಂಕಣ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

by ಪ್ರತಿಧ್ವನಿ
May 23, 2026
0

ನಾ ದಿವಾಕರ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳುವ ವರ್ಗಗಳು ಜನಸಾಮಾನ್ಯರಿಗೆ ಮಿತವ್ಯಯದ ಉಪದೇಶ ಮಾಡುವುದು ಈ ಜನರ ಸಂಕಟಗಳು ಹೆಚ್ಚಾದಾಗ ಅಲ್ಲ, ಮಾರುಕಟ್ಟೆಗೆ ಬಲವಾದ ಹೊಡೆತ ಬಿದ್ದು ಬುಡ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
Next Post
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತೆಲಂಗಾಣ ಸಿಎಂ ಪುತ್ರಿ ಕೆ. ಕವಿತಾಗೆ ಇಡಿ ಸಮನ್ಸ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತೆಲಂಗಾಣ ಸಿಎಂ ಪುತ್ರಿ ಕೆ. ಕವಿತಾಗೆ ಇಡಿ ಸಮನ್ಸ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada