ಮೈಸೂರು: ಜನರಲ್ಲಿ ಮತ(Vote) ಹಾಕಿ ಎಂದು ಮನವಿ ಮಾಡಬೇಕಿಲ್ಲ. ವಿಜಯ ಸಂಕಲ್ಪ ಯಾತ್ರೆಯ ಮೂಲಕ ನಮ್ಮ ಯೋಜನೆಗಳನ್ನ ತಿಳಿಸಿದ್ರೆ ಸಾಕು ಮತ ಹಾಕುತ್ತಾರೆ ಎಂದು ಸಂಸದ(MP) ಪ್ರತಾಪ್ ಸಿಂಹ(Prathap Simha) ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಕೆ ಆರ್, ಚಾಮರಾಜ ಕ್ಷೇತ್ರದಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಕಮಲ ಅರಳಬೇಕು ಎಂದರು.

ಅಮೃತ್ ಯೋಜನೆ ಮೂಲಕ ಮೈಸೂರು ನಗರಕ್ಕೆ ಕುಡಿಯುವ ನೀರು ದೊರೆಯುತ್ತಿದೆ. ಮಾರ್ಚ್ 12ರಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಬಾರಿ ಮಂಡ್ಯದಲ್ಲೂ ಕಮಲ ಅರಳಿಸಬೇಕು. ಅದಕ್ಕಾಗಿ ಮಂಡ್ಯಕ್ಕೆ ಮೋದಿ ಅವರನ್ನು ಕರೆದುಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಮೈಸೂರು ಅಭಿವೃದ್ಧಿಗೆ ಯಡಿಯೂರಪ್ಪ, ಬೊಮ್ಮಾಯಿ ಅವರು ಸಾಕಷ್ಟು ಅನುದಾನ ನೀಡಿದ್ದೇವೆ. ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯೇ ಹರಿದಿದೆ.
ನಂಜನಗೂಡಿನಲ್ಲಿ ಮತ್ತೆ ಬಿ. ಹರ್ಷವರ್ಧನ್ ಗೆದ್ದು ಬರಬೇಕು. ಹಾಗೂ ಮೈಸೂರು ಜಿಲ್ಲೆಯಲ್ಲಿ ಪಕ್ಷ ಮತ್ತಷ್ಟು ಸ್ಥಾನ ಗೆಲ್ಲಲು ನೀವೆಲ್ಲ ಸಹಕರಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.






