ಮಂಡ್ಯದಲ್ಲಿ ಮಾತನಾಡಿದ್ದ ಉನ್ನತ ಶಿಕ್ಷಣ ಅಶ್ವತ್ಥ ನಾರಾಯಣ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು. ಅಷ್ಟು ಮಾತ್ರವಲ್ಲದೆ ಟಿಪ್ಪು ಸುಲ್ತಾನನ್ನು ಹೊಡೆದು ಹಾಕಿದ ರೀತಿಯಲ್ಲೇ ಹೊಡೆದು ಹಾಕಬೇಕು ಎಂದು ಬಹಿರಂಗ ಸಭೆಯಲ್ಲಿ ಪ್ರಚೋದನಾತ್ಮವಾಗಿ ಭಾಷಣ ಮಾಡಿದ್ದರು. ಈ ಭಾಷಣದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಅಶ್ವತ್ಥ ನಾರಾಯಣರ ಮಾತುಗಳು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಅಷ್ಟೆ ಅಲ್ಲದೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಕ್ತಸಿಕ್ತ ಅಧ್ಯಾಯದ ಪುಟಗಳು ಆರಂಭವಾಗುವ ಎಲ್ಲಾ ಲಕ್ಷಗಳು ಕರ್ನಾಟಕದಲ್ಲಿ ಕಾಣಿಸುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವ ಅಶ್ವತ್ಥ ನಾರಾಯಣ ಮಾತ್ರವಲ್ಲದೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಕೂಡ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ದೂರು ನೀಡಿದೆ.
ಕಾಂಗ್ರೆಸ್ ಅಭ್ಯರ್ಥಿಗೆ ಪ್ರಾಣಬೆದರಿಕೆ ಹಾಕಿದ್ದ ವಿಶ್ವನಾಥ್..?
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌಡರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ಸಲ್ಲಿಕೆಯಾಗಿದ್ದು, ಬಿಜೆಪಿ ಪಕ್ಷದ ಸಭೆಯಲ್ಲಿ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಮಾದನಾಯಕನಹಳ್ಳಿಯ ಪಕ್ಷದ ಕಚೇರಿ ಉಧ್ಘಾಟಣೆ ವೇಳೆ ಭಾಷಣ ಮಾಡಿರುವ ಎಸ್.ಆರ್ ವಿಶ್ವನಾಥ್, ನಾನು ಸಾಮ, ವೇದ, ದಂಡ ಎಲ್ಲಾ ಪ್ರಯೋಗ ಮಾಡಿ ರಾಜಕೀಯಕ್ಕೆ ಬಂದಿರೋದು. ನಮ್ಮವರು ಪಿಟ್ ಬುಲ್ ನಾಯಿಗಳು ಇದ್ದಂತೆ. ಬಿಟ್ಟರೆ ಸೀಳಿಹಾಕಿ ಬಿಡ್ತಾರೆ. ಆದರೆ ನಾನು ಚೈನ್ ಹಾಕಿ ಕಟ್ಟಿಹಾಕಿದ್ದೇನೆ. ಯಶವಂತಪುರದವರು ಬಂದು ಇಲ್ಲಿ ಏನೇನೋ ಮಾತಾಡ್ತಾನೆ. ಹೆಸರಘಟ್ಟದಲ್ಲಿ ಕಾರ್ಯಕರ್ತರು ಮೊನ್ನೆನೆ ಪಾಠ ಕಲಿಸುತ್ತಿದ್ರು. ನಾನೆ ತಡೆದಿದ್ದೇನೆ ಎಂದು ಉದ್ರೇಕ ಭಾಷಣ ಮಾಡಿದ್ದಾರೆ ವಿಶ್ವನಾಥ್. ಸೈಲೆಂಟ್ ಸುನಿಲಾ, ಒಂಟೆ ರೋಹಿತ, ಬೆತ್ತನಗೆರೆ ಶಂಕರ ಮುಂತಾದವರು ಶಾಸಕರ ಜೊತೆಗೆ ಗುರುತಿಸಿಕೊಂಡಿದ್ದಾರೆ. ಇದೀಗ ಶಾಸಕರೇ ಸಿಗಿದು ಹಾಕ್ತಾರೆ ಎಂದು ಭಾಷಣ ಮಾಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಐಜಿಪಿ ರವಿಕಾಂತೆಗೌಡಗೆ ದೂರು ನೀಡಿದ್ದಾರೆ.
ಬಿಜೆಪಿಗೆ ಗೂಂಡಾಗಳ ಸೇರ್ಪಡೆಗೆ ವಿರೋಧ, ಸೇಡು ಹೆಚ್ಚಳ..!
ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ನಾಯಕರು ವಾಕ್ಸಮರ ಶುರು ಮಾಡಿದ್ದಾರೆ. ವೈಯಕ್ತಿಕ ಮಾತುಗಳು, ಜಾತಿ ಹಿನ್ನೆಲೆಯ ಮಾತುಗಳು, ಧರ್ಮಾಧಾರಿತ ಮಾತುಗಳು ಮುನ್ನಲೆಗೆ ಬಂದಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾದಿಯಾಗಿ ಪ್ರತಿಯೊಂದು ಪಕ್ಷದಲ್ಲೂ ಪ್ರಚೋದನಾತ್ಮಕ ಮಾತುಗಳಿಗೆ ಬರ ಇಲ್ಲದಂತಾಗಿದೆ.ಅದರಲ್ಲೂ ಬಿಜೆಪಿ ನಾಯಕರು ಒಂದು ಹೆಜ್ಜೆ ಮುಂದಿಟ್ಟು, ಕೊಚ್ಚುವ, ಕೊಲೆ ಮಾಡುವ, ಹೊಡೆದು ಹಾಕುವ ಮಾತುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರ ಜೊತೆಗೆ ಇತ್ತೀಚಿಗೆ ಕೆಲವು ರೌಡಿಶೀಟರ್ಗಳನ್ನು ಬಿಜೆಪಿ ಅಧಿಕೃತವಾಗಿ ಪಕ್ಷಕ್ಕೆ ಸೇರಿಕೊಳ್ಳುವ ಮೂಲಕ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ವಿರೋಧ ಪಕ್ಷಗಳು ಬಲವಾಗಿ ಖಂಡಿಸಿದ್ದವು. ಇದರ ನಡುವೆ ಬಾಂಬೆ ಭೂಗತ ಲೋಕದಿಂದ ಪಿಸ್ತೂಲ್ಗಳು ಬೆಂಗಳೂರಿಗೆ ರವಾನೆ ಆಗಿದ್ದ ಘಟನೆ ಖಾಕಿ ಪಡೆಯನ್ನು ಕಂಗಾಲಾಗುವಂತೆ ಮಾಡಿದೆ.
10 ಪಿಸ್ತೂಲ್ ವಶಕ್ಕೆ ಪಡೆದ ಬೆಂಗಳೂರು ಸಿಸಿಬಿ..!
ರಾಜಕಾರಣಿಗಳ ಪ್ರಚೋದನೆ ಮಾತುಗಳ ನಡುವೆ ಮುಂಬೈನಿಂದ ಬೆಂಗಳೂರಿಗೆ ಪಿಸ್ತೂಲ್ ಬರುತ್ತಿರುವ ವಿಚಾರ ನಾಗರಿಕರು ಹಾಗು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆತಂಕ ಮೂಡುವಂತೆ ಮಾಡಿದೆ. ಕೆಲವೇ ದಿನಗಳ ಹಿಂದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 10 ಪಿಸ್ತೂಲ್‌ಗಳನ್ನು ಬೆಂಗಳೂರಿನಲ್ಲಿ ಜಪ್ತಿ ಮಾಡಲಾಗಿತ್ತು. ಓರ್ವ ಆರೋಪಿಯನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಖಾಸಗಿ ಬಸ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಪಿಸ್ತೂಲ್ಗಳ ಖಚಿತ ಮಾಹಿತಿ ಮೇರೆಗೆ ತಪಾಸಣೆ ಮಾಡಿ ಜಪ್ತಿ ಮಾಡಿದ್ದರು. ಆದರೆ ಬೇರೆ ಮಾರ್ಗಗಳಲ್ಲೂ ಕರ್ನಾಟಕಕ್ಕೆ ಅಕ್ರಮ ಪಿಸ್ತೂಲ್ಗಳು ಬರುವ ಸಾಧ್ಯತೆ ಇದ್ದು, ರಾಜಕಾರಣಿಗಳ ಪ್ರಚೂದನೆ ಮಾತು ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ.
ನಾಗ್ಪುರ ಮೂಲಕ ಬಂದಿದ್ದ ಪಿಸ್ತೂಲ್’ಗಳ ಮಾಹಿತಿ ನಿಗೂಢ..!
ಬೆಂಗಳೂರಿನಲ್ಲಿ ಬಂಧಿತನಾಗಿರುವ ಬಾಂಬೆಯ ರೋಶನ್ ಎಂಬಾತ ಮಹಾರಾಷ್ಟ್ರದ ನಾಗ್ಪುರ ಮೂಲದವನು. ಬಿಜೆಪಿ ಮಾತೃಸಂಸ್ಥೆ ಆರ್ಎಸ್ಎಸ್ ಕೇಂದ್ರ ಕಚೇರಿ ಇರುವ ನಾಗ್ಪುರದ ವಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಕೊಲೆಯತ್ನ ಹಾಗೂ ಎರಡು ಕಳ್ಳತನ ಕೇಸ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.. ಮೊದಲಿಗೆ 4 ಪಿಸ್ತೂಲ್‌ಗಳನ್ನು ಬೆಂಗಳೂರಿನ ಅಂಡರ್ ವರ್ಲ್ಡ್ ಪಾತಕಿಗಳಿಗೆ ನೀಡೋಕೆ ತಂದಿದ್ದೆ ಎಂದಿದ್ದ ಆರೋಪಿ, ಉಳಿದ 6 ಪಿಸ್ತೂಲ್‌ಗಳನ್ನು ಯಾರಿಗೆ ಕೊಡುವ ಉದ್ದೇಶ ಇತ್ತು..? ಎನ್ನುವುದನ್ನು ಬಾಯ್ಬಿಟ್ಟಿಲ್ಲ. ಸಿಸಿಬಿ ಪೊಲೀಸ್ರು ಒಟ್ಟು 10 ನಾಡ ಪಿಸ್ತೂಲು, 20 ಜೀವಂತ ಗುಂಡುಗಳು ವಶಕ್ಕೆ ಪಡೆದಿದ್ದರು.