ಮಂಡ್ಯ: ಮಂಡ್ಯ ಉಸ್ತುವಾರಿ ಬಗ್ಗೆ ಕೇಳಿದ್ರೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಸೂಕ್ತ ಎನ್ನಿಸಿದವರಿಗೆ ಕೊಡುತ್ತಾರೆ. ನನಗೆ ಉಸ್ತುವಾರಿ ನೀಡುವ ಬಗ್ಗೆ ಮಾಹಿತಿ ಇಲ್ಲ ಎಂದು ಸಚಿವ ಸಿ.ಎನ್ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಮೇಲೆ ನನಗೆ ಪ್ರೀತಿ ಬಾಂಧವ್ಯ ಇರುವುದು ಒಂದು ಭಾಗ. ಜವಾಬ್ದಾರಿ ಮತ್ತು ಆಡಳಿತ ಇನ್ನೊಂದು ಭಾಗ. ಯಾವುದೇ ಜಿಲ್ಲೆಯ ಉಸ್ತುವಾರಿ ನಿಶ್ಚಯ ಮಾಡುವುದು ಸಿಎಂ. . ಸಿಎಂ ನೀಡುವ ಜವಾಬ್ದಾರಿ ನಿರ್ವಹಿಸುವುದು ನಮ್ಮ ಕೆಲಸ ಎಂದು ಹೇಳಿದರು.

ನಾನು ಇವತ್ತು ಪಕ್ಷದ ಕಾರ್ಯಕ್ರಮ ಇರುವುದರಿಂದ ಮಂಡ್ಯಗೆ ಬಂದಿದ್ದೇನೆ. ಪಕ್ಷ ಸಂಘಟನೆ ಮಾಡಲು ಬಂದಿದ್ದೇನೆ. ಖಾಲಿ ಇರುವ ಉಸ್ತುವಾರಿಯನ್ನು ಸದ್ಯ ಸಿಎಂ ನಿರ್ವಹಣೆ ಮಾಡುತ್ತಿರುತ್ತಾರೆ. ಯಾವ ಕಾಲದಲ್ಲಿ ಏನು ಮಾಡಬೇಕು ಎಂದು ಸಿಎಂ ನಿಶ್ಚಯ ಮಾಡುತ್ತಾರೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಪಕ್ಷ ಸರ್ಕಾರ ಸಹಕಾರ ನೀಡುತ್ತದೆ. ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಇದ್ದಾರೆ. ಯಾರಿಗೆ ಮಂಡ್ಯ ಉಸ್ತುವಾರಿ ನೀಡಿದರು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದರು.












