ಕಾಲ ಕ್ರಮೇಣ ಇತ್ತೀಚಿನ ದಿನಗಳಲ್ಲಿ ನಮ್ಮ ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಸುಮಧುಋ ಹಾಡುಗಳು ಕಡಿಮೆಯಾಗುತ್ತ ಬರುತ್ತಿವೆ ಎಂಬ ಆರೋಪಗಳು ಸಿನಿರಸಿಕರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಸಿನಿ ರಸಿಕರ ಆರೋಪಗಳಿಗೆ ಪ್ರತ್ಯತ್ತರವಾಗಿ ಕಡಲತೀರದ ಭಾರ್ಗವ ಚಿತ್ರತಂಡದಿಂದ ಮಧುರ ಮಧುರ ಎಂಬ ಸುಮಧುರ ಹಾಡು ಬಿಡುಗಡೆಯಾಗಿದ್ದು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಬಹದ್ದೂರ್ ಖ್ಯಾತಿಯ ಚೇತನ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಅನಿಲ್ ಸಿ.ಜೆ ಸಂಗೀತ ಸಂಯೋಜಿಸಿದ್ದು ಅನಿಲ್ ಹಾಗೂ ವಾರಿಜಾಶ್ರೀ ಹಾಡಿಗೆ ಧ್ವನಿಯಾಗಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದಿರುವ ಚಿತ್ರವು ಶೀಘ್ರವೇ ತೆರೆ ಮೇಲೆ ಬರಲು ಯೋಜನೆ ಹಾಕಿಕೊಂಡಿದೆ.
ಇನ್ನು ಕಡಲ ತೀರದ ಭಾರ್ಗವ ಚಿತ್ರಕ್ಕೆ ಪನ್ನಗಾ ಸೋಮಶೇಖರ್ ಆಕ್ಷನ್ ಕಟ್ ಹೇಳಿದ್ದು, ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ ನಾಯಕನಾಗಿ ಭರತ್ ಗೌಡ, ನಾಯಕಿಯಾಗಿ ಶ್ರುತಿ ಪ್ರಕಾಶ್ ನಟಿಸಿದ್ದಾರೆ. ಇನ್ನುಳಿದಂತೆ ವರುಣ್ ರಾಜು, ರಾಘವ್ ನಾಗ್, ಕೆ.ಎಸ್. ಶ್ರೀಧರ್, ಅಶ್ವಿನ್ ಹಾಸನ್ ತಾರಾಗಣದಲ್ಲಿದ್ದಾರೆ.






