ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಪೋಟಿಸಿದ ಆಕರ್ಷಕ ಶತಕದ ಫಲವಾಗಿ ಭಾರತ ತಂಡವು ಶ್ರೀಲಂಕಾ ವಿರುದ್ದ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರನ್ಗಳ ಜಯಗಳಿಸಿದೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಾಜಿ ನಾಯಕ ವಿರಾಟ್ ಕೊಹ್ಲಿ (113 ರನ್, 87 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿದ ಸ್ಪೋಟಕ ಶತಕ, ನಾಯಕ ರೋಹಿತ್ ಶರ್ಮಾ (83 ರನ್, 67 ಎಸೆತ, 9 ಬೌಂಡರಿ, 3 ಸಿಕ್ಸರ್), ಶುಭಮಾನ್ ಗಿಲ್ (70 ರನ್, 60 ಎಸೆತ, 11 ಬೌಂಡರಿ) ಅರ್ಧ ಶತಕಗಳ ಫಲವಾಗಿ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373ರನ್ಗಳನ್ನ ಕೆಲಹಾಕಿತ್ತು.
ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡವು ನಾಯಕ ದಸುನ್ ಶನಕ (108 ರನ್, 88 ಎಸೆತ, 12 ಬೌಂಡರಿ, 3 ಸಿಕ್ಸರ್), ಆರಂಭಿಕ ಪತುಂ ನಿಸ್ಸಂಕ (72 ರನ್, 80 ಎಸೆತ, 11 ಬೌಂಡರಿ), ಧನಂಜಯ್ ಡಿ ಸಿಲ್ವಾ ( 47 ರನ್, 40ಎಸೆತ, 9 ಬೌಂಡರಿ) ದಿಟ್ಟ ಪ್ರತಿರೋಧದ ಫಲವಾಗಿ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತದ ಪರ ಮೊಹಮ್ಮದ್ ಶಮಿ (9-0-67-1), ಮೊಹಮ್ಮದ್ ಸಿರಾಜ್ (7-1-30-2), ಹಾರ್ದಿಕ್ ಪಾಂಡ್ಯ (6-0-33-1), ಉಮ್ರಾನ್ ಮಲಿಕ್ (8-0-57-3), ಯಜುವೇಂದ್ರ ಚಹಲ್ (10-0-58-1), ಅಕ್ಷರ್ ಪಟೇಲ್ ( 10-0-58-0) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.