ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಸಿರುವ ಪಿಂಪ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೆಟ್ಟ ಅಗೆದು ಇಲ್ಲಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ.
ಪರಿಶಿಷ್ಟಜಾತಿ-ಪಂಗಡಕ್ಕೆ ಸೇರಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವೇಶ್ಯಾವಾಟಿಕೆಗೆ ದೂಡಲು ಮುಂದಾಗಿದ್ದ ರವಿ ಕಾಮಕಾಂಡವನ್ನ ಎರಡನೇ ಪತ್ನಿ ಮಾಧ್ಯಮಗಳ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡನೇ ಮದುವೆ ಮಾಡಿಸಿದ್ದ ಪೂಜಾರಿ ಹಾಗೂ ಮತ್ತು ಭರಿಸುವ ಔಷಧ ಬೆರಸಿ ಜ್ಯೂಸ್ ನೀಡಿದವನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಎರಡನೇ ಪತ್ನಿಯಿಂದ ದೂರು ದಾಖಲಾದ ಹಿನ್ನಲೆಯಲ್ಲಿ ಸ್ಯಾಂಟ್ರೋ ರವಿ ಆಪ್ತ ಸಹಾಯಕ ಮಧುಸೂದನ್ ಹಾಗೂ ಮದುವೆ ಮಾಡಿಸಿದ್ದ ಪೂಜಾರಿಯನ್ನು ಮೈಸೂರಿನ ವಿಜಯನಗರ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.






