ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದ ವಿರುದ್ಧ ಜನರಲ್ಲಿದ್ದ ಆಕ್ರೋಶದ ಅಲೆಯಲ್ಲಿ ಜಯಭೇರಿ ಬಾರಿಸಿದ್ದರು. 2004 ಹಾಗೂ 2009 ರಲ್ಲಿ ಸತತವಾಗಿ ಗೆಲುವು ಕಂಡಿದ್ದ ಕಾಂಗ್ರೆಸ್ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿ ಆಡಳಿತ ನಡೆಸಿದ್ದರು. ಕಾಂಗ್ರೆಸ್ ಆಡಳಿತದ ಎರಡನೇ ಅವಧಿಯಲ್ಲಿ ಕೇಳಿಬಂದಿದ್ದ 2G, ಕಾಮನ್ವೆಲ್ತ್ ಸೇರಿದಂತೆ ಹಲವಾರು ಹಗರಣಗಳು ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಅಷ್ಟು ಹೊತ್ತಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯುವುದಕ್ಕೆ ಶುರುವಾಗಿತ್ತು. ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿದ್ದ GST, AAdhar ಯೋಜನೆ ವಿರುದ್ಧ ಅಬ್ಬರಿಸಿದ್ದ ನರೇಂದ್ರ ಮೋದಿ ಗೆಲುವು ಸಾಧಿಸಿ, ಪ್ರಧಾನಿಯಾಗಿ ಆಯ್ಕೆ ಆಗಿದ್ದರು. ಆದರೆ ಇದೀಗ ಎರಡನೇ ಬಾರಿಗೆ ಆಯ್ಕೆಯಾಗಿರುವ ಮೋದಿ ಸಾಧನೆ ಏನು ಎಂದರೆ ಯಾರ ಬಳಿಯೂ ಉತ್ತರ ಇಲ್ಲ.
‘ಮಾಧ್ಯಮಗಳ ಮ್ಯಾನೇಜ್ಮೆಂಟ್ ಬಿಡಿ’ ಎಲ್ಲವೂ ಸರಿಯಾಗುತ್ತೆ !
ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಮಾಧ್ಯಮಗಳ ಎದುರು ಎಂದೂ ಸಂವಾದ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೇವಲ ಭಾಷಣಗಳಿಗೆ ಸೀಮಿತ ಆಗಿದ್ದಾರೆ ಅನ್ನೋ ಆರೋಪ ಇದೆ. ಇನ್ನೂ ದೃಶ್ಯ ಮಾಧ್ಯಮಗಳಲ್ಲಿ ಪ್ರತಿಯೊಂದು ವಿಚಾರಕ್ಕೂ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುವ ನರೇಂದ್ರ ಮೋದಿ ಅವರಿಗೆ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್, ಒಂದು ಮಾತನ್ನು ಹೇಳಿದ್ದರು. ಅದೇನಂದರೆ, ಮೊದಲು ಮಾಧ್ಯಮಗಳನ್ನು ಮ್ಯಾನೇಜ್ ಮಾಡುವುದು ಬಿಡಿ, ಆಗ ಎಲ್ಲಾ ಸಮಸ್ಯೆಗಳೂ ಸರಿಯಾಗುತ್ತವೆ ಎಂದಿದ್ದರು. ಅಂದರೆ ಮಾಧ್ಯಮಗಳನ್ನು ಪ್ರಧಾನಿ ನರೇಂದ್ರ ಮೋದಿ ತನಗೆ ಬೇಕಾದ ಹಾಗೆ ಬಳಸಿಕೊಳ್ತಾರೆ ಎನ್ನುವುದು ಅರ್ಥ.
ಪ್ರಧಾನಿ ಮೋದಿ ಮಾಧ್ಯಮಗಳನ್ನು ಮ್ಯಾನೇಜ್ ಮಾಡ್ತಾರಾ ?
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ ಮಾತಿನ ಬಗ್ಗೆ ಸಾಕಷ್ಟು ಚರ್ಚೆ ಆಗಲಿಲ್ಲ. ಆದರೆ ಇತ್ತೀಚಿಗೆ ಕೇಂದ್ರ ಸರ್ಕಾರವೇ ಕೊಟ್ಟಿರುವ ಮಾಹಿತಿ ಎಲ್ಲವನ್ನೂ ಬಹಿರಂಗ ಮಾಡಿದೆ. RTI ಕಾಯ್ದೆ ಅಡಿಯಲ್ಲಿ ಪಂಜಾಬ್ನ ರಂಜನ್ ದೀಪ್ ಸಿಂಗ್ ಮಾಹಿತಿ ಪಡೆದಿದ್ದಾರೆ. ಅದರಲ್ಲಿ ಜೂನ್ 1, 2015ರಿಂದ 30 ಸೆಪ್ಟೆಂಬರ್ 30, 2022ರ ತನಕ ಬರೋಬ್ಬರಿ 4,777.27 ಕೋಟಿ ರೂಪಾಯಿ ಹಣವನ್ನು ಜಾಹಿರಾತು ನೀಡಿದ್ದಾರೆ. ನ್ಯೂಸ್ ಪೇಪರ್, ಟಿವಿ ಚಾನೆಲ್, ವೆಬ್ ಚಾನೆಲ್ಗಳಿಗೆ ಜಾಹಿರಾತು ನೀಡಿದ್ದಾರೆ. ನವೆಂಬರ್ 21ರಂದು ರೂಪಾ ವೇದಿ ನೀಡಿರುವ ಮಾಹಿತಿಯಲ್ಲಿ ಮಾಧ್ಯಮಗಳಿಗೆ ಹೆಚ್ಚು ಕಡಿಮೆ 5 ಸಾವಿರ ಕೋಟಿ ವೆಚ್ಚ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ.
ಬೇರೆ ರೀತಿಯಲ್ಲೂ ಮಾಧ್ಯಮಗಳ ಮೇಲೆ ಬೆದರಿಕೆ..?
ದೃಶ್ಯ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜಗಮಗಿಸುತ್ತಾರೆ. ಒಂದು ಕಾರ್ಯಕ್ರಮ ಮಾಡುತ್ತಿದ್ದರೆ, ಪ್ರತಿಯೊಂದು ಚಾನೆಲ್ನಲ್ಲೂ ಅದನ್ನು ಪ್ರಸಾರ ಮಾಡಲಾಗುತ್ತೆ. ಎಲ್ಲಾ ಪತ್ರಕರ್ತರೂ ಪ್ರಧಾನಿ ನರೇಂದ್ರ ಮೋದಿಗೆ ಉಘೇ ಉಘೇ ಎನ್ನುತ್ತಾರಾ..? ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಆದರೆ ಮಾಧ್ಯಮಗಳಿಗೆ ಸಂವಿಧಾನದಲ್ಲಿ ಬೇರೆ ಯಾವುದೇ ಸ್ಥಾನಮಾನಗಳಿಲ್ಲ, ಕಾನೂನು ಮಾನ್ಯತೆಯೂ ಇಲ್ಲ. ಸಾಮಾನ್ಯ ಜನರಿಗೆ ಇರುವಷ್ಟು ಮಾತ್ರವೇ ಕಾನೂನು ಮಾನ್ಯತೆ ಇದೆ. ಹಾಗಿದ್ದಾಗ ಮಾಧ್ಯಮಗಳು ಏನೂ ಮಾಡಿದರೂ ತಪ್ಪನ್ನು ಹುಡುಕಬಹುದು. ಸರ್ಕಾರ ಬೇಕಿದ್ದಾಗ ಮಾಧ್ಯಮಗಳನ್ನು ನಿಷೇಧ ಮಾಡಬಹುದು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕೇರಳದಲ್ಲಿ ಕೆಲವು ಮಾಧ್ಯಮಗಳನ್ನು ನಿಷೇಧ ಮಾಡಲಾಗಿತ್ತು. ಕರ್ನಾಟಕದ ಮಾಧ್ಯಮಗಳಿಗೂ ನೋಟಿಸ್ ಬಂದಿತ್ತು. ಈ ಭಯದಿಂದಲೂ ಮಾಧ್ಯಮಗಳು ಮೋದಿ ಅವರನ್ನು ಹಿಂಬಾಲಿಸುತ್ತಿವೆ ಎನ್ನಬಹುದು.
ಕೃಷ್ಣಮಣಿ