• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗುಜರಾತ್‌, ಹಿಮಾಚಲದಲ್ಲಿ ಬಿಜೆಪಿ ಮತ್ತೆ ಜಯಭೇರಿ, ಕಾಂಗ್ರೆಸ್‌ ನೀರಸ, ಎಎಪಿ ಕಳಪೆ: ಚುನಾವಣೋತ್ತರ ಸಮೀಕ್ಷೆ

Any Mind by Any Mind
December 5, 2022
in Top Story, ಇದೀಗ, ದೇಶ
0
ಗುಜರಾತ್‌, ಹಿಮಾಚಲದಲ್ಲಿ ಬಿಜೆಪಿ ಮತ್ತೆ ಜಯಭೇರಿ, ಕಾಂಗ್ರೆಸ್‌ ನೀರಸ, ಎಎಪಿ ಕಳಪೆ: ಚುನಾವಣೋತ್ತರ ಸಮೀಕ್ಷೆ
Share on WhatsAppShare on FacebookShare on Telegram

    ಗುಜರಾತ್ ವಿಧಾನಸಭೆಗೆ 14 ಜಿಲ್ಲೆಗಳ 93 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಅದರೊಂದಿಗೆ ನವೆಂಬರ್ 12 ರಂದು ಚುನಾವಣೆ ನಡೆದ ಹಿಮಾಚಲ ಪ್ರದೇಶದ ಚುನಾವಣೋತ್ತರ ಸಮೀಕ್ಷೆಯು ಹೊರಬಿದ್ದಿದ್ದು ಎರಡೂ ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

ADVERTISEMENT

ಗುಜರಾತ್ ರಾಜ್ಯದಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂದು TV9 Gujarati/Republic TV ,  P-MARQ ಹಾಗೂ TimesNow-ETG ಸಮೀಕ್ಷಾ ವರದಿ ಹೇಳಿವೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಬಹುಮತದ ಸನಿಹಕ್ಕೆ ಬಂದು ನಿಲ್ಲುತ್ತದೆ ಎಂದೂ ಸಮೀಕ್ಷಾ ವರದಿ ಹೇಳಿವೆ.

Jan Ki Baat ಸಮೀಕ್ಷೆ ಗುಜರಾತಿನಲ್ಲಿ ಪ್ರಕಾರ ಬಿಜೆಪಿ 117-140 ಸೀಟುಗಳನ್ನು ಗೆದ್ದರೆ, ಕಾಂಗ್ರೆಸ್‌ 34-51 ಸ್ಥಾನಗಳನ್ನು ಗೆಲ್ಲಲಿದೆ. ಆದರೆ, ಭಾರೀ ನಿರೀಕ್ಷೆ ಹುಟ್ಟಿಸಿದ್ದ ಎಎಪಿ 6-13 ಸ್ಥಾನಗಳನ್ನಷ್ಟೇ ಗೆಲ್ಲಬಹುದು, 1-2 ಸ್ಥಾನಗಳು ಇತರೆ ಪಾಲಾಗಬಹುದು ಎಂದು ಜನ್‌ ಕಿ ಬಾತ್‌ ವರದಿ ಹೇಳಿದೆ.

This was 2017 Exit Poll of all poll agency.
So hold your horses .#GujaratAssemblyPolls #ExitPolls pic.twitter.com/oG16r5nnrJ

— Thunderbird (@Sky9_8) December 5, 2022

P-MARQ ಪ್ರಕಾರ ಗುಜರಾತಿನಲ್ಲಿ BJP 128-148 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 30-42 ಸ್ಥಾನಗಳನ್ನು ಗೆಲ್ಲಲಿದೆ, ಇಲ್ಲೂ ಎಎಪಿ 2-10 ಸ್ಥಾನದೊಳಗೆ ತೃಪ್ತಿ ಪಡಲಿದೆ ಎಂದು ವರದಿಯಾಗಿದೆ.  0-3 ಸ್ಥಾನಗಳು ಇತರರ ಪಾಲಾಗಲಿವೆ.

182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತಿನಲ್ಲಿ ಬಹುಮತ ಸಾಧಿಸಲು 92 ಸ್ಥಾನಗಳು ಬೇಕಿರುವುದರಿಂದ ಸದ್ಯ ಹೊರಬಂದಿರುವ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ.

68 ಕ್ಷೇತ್ರಗಳಿರುವ ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿದ್ದು ಇಲ್ಲೂ ಬಿಜೆಪಿ ಬಹುಮತದ ಸನಿಹಕ್ಕೆ ಬಂದು ನಿಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 32-40 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ 27-34  ಸ್ಥಾನ ಗೆದ್ದರೆ ಎಎಪಿ 0 ಹಾಗೂ 1-2 ಸ್ಥಾನಗಳು ಇತರೆ ಪಾಲಾಗಬಹುದು ಎಂದು Jan Ki Baat ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಹೆಚ್ಚಿದೆ. ಹಿಮಾಚಲ ಪ್ರದೇಶದ ವಿಷಯದಲ್ಲಿ P-MARQ ಸಮೀಕ್ಷೆ ಕೂಡಾ ಇಂತಹದ್ದೇ ಫಲಿತಾಂಶವನ್ನು ಹೇಳಿದ್ದು, ಬಿಜೆಪಿ 34-39 ಸ್ಥಾನಗಳು ಹಾಗೂ ಕಾಂಗ್ರೆಸ್ 28-33 ಸ್ಥಾನಗಳು ಗೆದ್ದರೆ ಎಎಪಿ 0-1 ಹಾಗೂ ಇತರೆ 1-4 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.

TimesNow-ETG ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 38, ಕಾಂಗ್ರೆಸ್ 28 ಎಎಪಿ 0 ಹಾಗೂ ಇತರೆ 2 ಸ್ಥಾನಗಳನ್ನು ಗೆಲ್ಲಲಿದೆ. ‌

Previous Post

ZEE5 OTTಯಲ್ಲಿ ಮಾನ್ಸೂನ್‌ ರಾಗ

Next Post

ಚುನಾವಣೋತ್ತರ ಸಮೀಕ್ಷೆ: 15 ವರ್ಷಗಳ ಬಳಿಕ ಬಿಜೆಪಿ ಕೈತಪ್ಪಲಿರುವ ದಿಲ್ಲಿ ಪಾಲಿಕೆ, ಎಎಪಿ ಸ್ಪಷ್ಟ ಬಹುಮತ.!

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಚುನಾವಣೋತ್ತರ ಸಮೀಕ್ಷೆ: 15 ವರ್ಷಗಳ ಬಳಿಕ ಬಿಜೆಪಿ ಕೈತಪ್ಪಲಿರುವ ದಿಲ್ಲಿ ಪಾಲಿಕೆ, ಎಎಪಿ ಸ್ಪಷ್ಟ ಬಹುಮತ.!

ಚುನಾವಣೋತ್ತರ ಸಮೀಕ್ಷೆ: 15 ವರ್ಷಗಳ ಬಳಿಕ ಬಿಜೆಪಿ ಕೈತಪ್ಪಲಿರುವ ದಿಲ್ಲಿ ಪಾಲಿಕೆ, ಎಎಪಿ ಸ್ಪಷ್ಟ ಬಹುಮತ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada