ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಪುತ್ರ ಜೈದ್ ಖಾನ್ ನಾಯಕನಾಗಿ ಅಬೀನಯಿಸಿದ್ದ ಚೊಚ್ಚಲ ಚಿತ್ರ ಬನಾರಸ್ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ಹೆಚ್ಚು ಸದ್ದು ಮಾಡಿತ್ತು.
ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಸಿನಿರಸಿಕರ ಗಮನ ಸೆಳೆಯುವಲ್ಲಿ ಜೈದ್ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.
ಇನ್ನು ಜೈದ್ಗೆ ಬಾಲಿವುಡ್ನಿಂದ ದೊಡ್ಡ ಆಫರ್ ಒಂದು ಹುಡುಕಿಕೊಂಡು ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೊಬ್ಬರು ಒಂದೊಳ್ಳೆ ಕಥೆಯನ್ನು ಹಿಡಿದು ಬಿಗ್ ಬಜೆಟ್ ಮೂವಿ ಮಾಡುವುದಾಗಿ ಜೈದ್ರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಕಥೆ ಕೇಳಿದ ಜೈದ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ ನಂತರ ಚಿತ್ರದ ನಿರ್ದೇಶಕರು ಇದು ಬರಿ ಹಿಂದಿಗೆ ಮಾತ್ರ ಸೀಮಿತ ಎಂದು ಹೇಳಿದ ಕೂಡಲೇ ಚಿತ್ರದ ನಿರ್ಮಾಕರನ್ನು ಸಂಪರ್ಕಿಸಿ ಕನ್ನಡದಲ್ಲೂ ಮಾಡುವಂತೆ ಕೇಳಿದ್ದಾರೆ. ಆದರೆ,ಅ ದಕ್ಕೊಪ್ಪದ ನಿರ್ಮಾಪಕರ ಕಥೆಯನ್ನ ಜೈದ್ ನಿರಾಕರಿಸಿ ತಮ್ಮಲ್ಲಿರುವ ಕನ್ನಡ ಪ್ರೇಮವನ್ನ ತೋರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೈದ್ ಅವರು ನನ್ನನ್ನು ಅಪ್ರೋಚ್ ಮಾಡಲು ಕಾರಣವಾಗಿರೋದು ಬನಾರಸ್ ಚಿತ್ರ ಅದು ಪ್ರಧಾನವಾಗಿ ತಯಾರಾಗಿರೋದು, ಗೆದ್ದಿರೋದು ಕನ್ನಡಿಗರಿಂದಲೇ. ನಾನು ಯಾವ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ.