ದೆಹಲಿಯ ಚಾಂಸ್ನಿ ಚೌಕ್‌ನ ಭಾಗೀರಥ್ ಪ್ರದೇಶದಲ್ಲಿರುವ ಪ್ರಸಿದ್ದ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಗುರುವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ.
ಕ್ಷಣಾರ್ಧದಲ್ಲೇ ಅಗ್ನಿ ಕಿಡಿ ಇಡೀ ಪ್ರದೇಶವನ್ನ ಆವರಿಸಿದ್ದು ಬೆಂಕಿಯನ್ನು ನಂದಿಸಲು 30ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ತಿಳಿದು ಬಂದಿದೆ.
ಇಲ್ಲಿಯವರೆಗೂ ಬೆಂಕಿ ಹತ್ತೋಟಿಗೆ ಬಂದಿಲ್ಲ ಮತ್ತು ಅಗ್ನಿ ಅವಘಡದ ಹಿಂದಿನ ನಿಖರ ಕಾರಣವನ್ನ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.