ಕಾವೇರಿ ನೀರು ಪೂರೈಸುವ ಕೊಳವೆ ಮಾರ್ಗಗಳ ಬದಲಾವಣೆ ಕಾಮಗಾರಿಯನ್ನು ನವೆಂಬರ್ 21ರಂದು ಹಮ್ಮಿಕೊಂಡಿರುವ ಕಾರಣ ನಗರದ ಕೆಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಲURU ಜಲಮಂಡಳಿ ತಿಳಿಸಿದೆ.
ನವೆಂಬರ್ 21ರಂದು ಬೆಳ್ಳಗ್ಗೆ 6ರಿಂದ ಸಂಜೆ 6ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮಂಡಳಿ ತಿಳಿಸಿದೆ. ನಗರದ ಜಂಬೂ ಸವಾರಿ ದಿಣ್ಣೆ, ಪುಟ್ಟೇನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಜೆ.ಪಿ.ನಗರ 4-5-6-7ನೇ ಹಂತ, ಚುಂಚಕಟ್ಟೆ ಮುಖ್ಯರಸ್ತೆ, ದೊರೆಸಾನಿಪಾಳ್ಯ, ಬನ್ನೇರುಘಟ್ಟ ಮುಖ್ಯರಸ್ತೆ, ಕೋಡಿ ಚಿಕ್ಕಹಳ್ಳಿ, ಜಯದೇವ ಆಸ್ಪತ್ರೆ, ಬಿಳೇಕಹಳ್ಳಿ, ಬೊಮ್ಮನಹಳ್ಳಿ.
ಹೊಂಗಸಂದ್ರ, ಮಂಗಮ್ಮನಪಾಳ್ಯ, ಹೊಸಪಾಳ್ಯ, ಕೋರಮಂಗಲ 3ನೇ ಬ್ಲಾಕ್, ಶ್ರೀನಿವಾಗಿಲು, ಬಿಸ್ಮಿಲಾ ನಗರ, ನಾರಾಯಣಪ್ಪ ಗಾರ್ಡನ್, ಬಾಲಾಜಿ ನಗರ ಭವಾನಿ ನಗರ, ಎನ್.ಎಸ್.ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ.







