ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವು ಬಿಡುಗಡೆಗೂ ಮುನ್ನ ಹಾಗೂ ನಂತರ ತನ್ನ ವಿಶೇಷತೆಗಳಿಂದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ.
ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷವನ್ನ ಅದ್ಭುತವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ರಿಷಭ್ ಶೆಟ್ಟಿ ಯಶ ಕಂಡಿದ್ದಾರೆ. ಚಿತ್ರ ಬಿಡುಗಡೆಯಾಗಿ ತಿಂಗಳಾಗುತ್ತ ಬಂದರೂ ಸಹ ಚಿತ್ರದ ಬಗೆಗಿನ ಕ್ರೇಜ್ ಮಾತ್ರ ಇನ್ನು ಕಡಿಮೆಯಾಗಿಲ್ಲ.
ಇತ್ತ ಚಿತ್ರ ಬಿ ಟೌನ್ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ಅಕ್ಷಯ್ ಕುಮಾರ್ ನಟನೆಯ ರಾಮ್ಸೇತು ಹಾಗೂ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರದ ಕಲೆಕ್ಷನ್ಗಳು ಕಾಂತಾರ ಕಲೆಕ್ಷನ್ ಮುಂದೆ ಸೊರಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿನಿಮಾ ವಿಶ್ಲೇಷಕ ತರುಣ್ ಆದರ್ಶ್ ಬಿಡುಗಡೆಯಾದ ಎರಡರನೇ ವಾರಕ್ಕೆ ಕಾಂತಾರ ಚಿತ್ರವು KGF Chapter – 1 ದಾಖಲೆಯನ್ನು ಮುರಿದಿದ್ದು ಇಲ್ಲಿಯವರೆಗೂ 47.55 ಕೋಟಿ ರೂಪಾಯಿ ಕಮಾಯಿ ಮೂರನೇ ವಾರಕ್ಕೆ 50 ಕೋಟಿ ರೂಪಾಯಿ ದಾಟುವ ನಿರೀಕ್ಷೆಯಿದೆ ಎಂದು ಬರೆದುಕೊಂಡಿದ್ದಾರೆ.
ಇಲ್ಲಿಯವರೆಗೂ ಕಾಂತಾರ ವಿಶ್ವದಾದ್ಯಂತ ಎಲ್ಲಾ ಭಾಷೆಗಳು ಸೇರಿದಂತೆ 280 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಮತ್ತು ಇಲ್ಲಿಯವರೆಗೂ ಒಟ್ಟು 100 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ಗಳು ಮಾರಾಟವಾಗಿವೆ ಎಂದು ಬಾಕ್ಸ್ ಅಫೀಸ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.
ಇತ್ತ ಕಾಂತಾರ ಕಾಲಿವುಡ್ನಲ್ಲು ಕಮಾಲ್ ಮಾಡಿದ್ದು ಚಿತ್ರವು 150ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು ಇತ್ತೀಚಿಗೆ ಚಿತ್ರ ವೀಕ್ಷಿಸಿದ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ರಿಷಭ್ ನಿರ್ದೇಶನವನ್ನ ಕೊಂಡಾಡಿದ್ದರು.