• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಗುಂಡಿ ಮುಚ್ಚಿ, ಇಲ್ಲಾ ಮನೆಗೆ ನಡೀರಿ; ಬಿಬಿಎಂಪಿ ಇಂಜಿನಿಯರ್‌ಗಳಿಗೆ ಕಮಿಷನರ್ ತಾಕೀತು

ಕರ್ಣ by ಕರ್ಣ
October 30, 2022
in ಕರ್ನಾಟಕ
0
ಗುಂಡಿ ಮುಚ್ಚಿ, ಇಲ್ಲಾ ಮನೆಗೆ ನಡೀರಿ; ಬಿಬಿಎಂಪಿ ಇಂಜಿನಿಯರ್‌ಗಳಿಗೆ ಕಮಿಷನರ್ ತಾಕೀತು
Share on WhatsAppShare on FacebookShare on Telegram

ಸಾಲು ಸಾಲು ದುರಂತಗಳ ಬಳಿಕ ಕೊನೆಗೂ ಬಿಬಿಎಂಪಿ ಚೀಫ್ ಕಮಿಷನರ್ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ನವೆಂಬರ್ 15ರೊಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್ ಗಳ ಕಿವಿ ಹಿಂಡುವ ಕೆಲಸಕ್ಕೆ ಚೀಫ್ ಕಮಿಷನರ್ ಮುಂದಾಗಿದ್ದಾರೆ.

ADVERTISEMENT

ಶೀಘ್ರವೇ ವಾಹನ ಸವಾರರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್

ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳು ಬಾರಿ ಸದ್ದು ಮಾಡಿತ್ತು. ಸಾಲು ಸಾಲು ಸಾವುಗಳ ಸಂಭವಿಸಿದ್ದರೂ ಕೂಡ ತಮಗೂ ಅದಕ್ಕೆ ಸಂಬಂಧವೇ ಇಲ್ಲ ಎಂಬಂತೆ ಬಿಬಿಎಂಪಿ ಇಂಜಿನಿಯರ್ ಗಳು ನಡೆದುಕೊಂಡಿದ್ದರು. ರಸ್ತೆಗುಂಡಿಯಿಂದ ಸಾವಾದರೆ ಪರಿಹಾರ ಕೊಟ್ಟು ಪ್ರತಿ ಸಲ ಪಾಲಿಕೆ ಕೈತೊಳೆದು ಕೊಳ್ಳುತ್ತಿತ್ತು. ಇದೀಗ ಬೆಂಗಳೂರಿನ ರಸ್ತೆ ಗುಂಡಿ ವಿಚಾರವಾಗಿ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಗುಂಡಿ ಮುಚ್ಚುವ ವಿಚಾರದಲ್ಲಿ ಅಧಿಕಾರಿಗಳಿಗೆ ಚೀಫ್ ಕಮಿಷನರ್ ಡೆಡ್ ಲೈನ್ ಕೊಟ್ಟಿದ್ದಾರೆ.

ನವೆಂಬರ್ 15 ರೊಳಗೆ ಬೆಂಗಳೂರು ರಸ್ತೆಗಳು ಪಾಟ್ ಹೋಲ್ ಫ್ರಿ

ಹೌದು, ನವೆಂಬರ್ 15ರೊಳಗೆ ಎಲ್ಲಾ ಗುಂಡಿಗಳನ್ನೂ ಮುಚ್ಚಬೇಕು, ಅಕಸ್ಮಾತ್ ಗುಂಡಿ ಮುಚ್ಚದಿದ್ರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ಪಾಲಿಕೆ ಇಂಜಿನಿಯರ್ ಗಳಿಗೆ ತುಷಾರ್ ಗಿರಿನಾಥ್ ಕೊಟ್ಟಿದ್ದಾರೆ. ಸಾರ್ವಜನಿಕರಿಂದ ಮತ್ತೆ ಗುಂಡಿ ದೂರು ಬಂದ್ರೆ, ಆಯಾ ವಲಯದ ಇಂಜಿನಿಯರ್‌ಗಳೇ ಹೊಣೆ ಮಾಡಲಾಗುತ್ತೆ‌. ಯುದ್ದೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಬೇಕು. ಡೆಡ್ ಲೈನ್ ಮೀರಿದ್ರೆ ಸೀದ ಮನೆಗೆ ಅಂತ ಇಂಜಿನಿಯರ್ ಗಳಿಗೆ ಸಸ್ಪೆಂಡ್ ಎಚ್ಚರಿಕೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯದ AE, AEE, EE, CEಗಳಿಗೆ ಈ ಮೂಲಕ ತ್ವರಿತಗತಿಯಲ್ಲಿ ಗುಂಡಿಗೆ ಅಸ್ಫಾಲ್ಟ್ ಮಾಡೋದಕ್ಕೆ ಸೂಚಿಸಲಾಗಿದೆ. ಈಗಾಗಲೇ ಪ್ರತಿ‌ ವರ್ಷ ನೂರಾರು ಕೋಟಿ ಬೆಂಗಳೂರಿನ ರಸ್ತೆ ಮೇಲೆ‌ ಪಾಲಿಕೆ ಚೆಲ್ಲುತ್ತಿದೆ.‌ ಆದರೂ ನಗರದ ರಸ್ತೆಗಳು ಅದ್ವಾನವಾಗಿ ಬಿದ್ದಿದೆ. ಇದರಿಂದ ಆಗಾಗ್ಗೆ ಅಪಘಾತಗಳು ನಡೆದು ಜನರು ಪ್ರಾಣವನ್ನೇ ಚೆಲ್ಲುತ್ತಿದ್ದಾರೆ. ಇದೀಗ ಈ ಬಗ್ಗೆ ಇಂಜಿನಿಯರ್ ಗಳಿಗೆ ಬಿಬಿಎಂಪಿ ಚೀಫ್ ಕಮಿಷನರ್ ಖಡಕ್ ಸೂಚನೆ ಕೊಟ್ಟಿದ್ದು, ಗುಂಡಿ ಮುಚ್ಚದಿದ್ದರೆ ಸಸ್ಪೆಂಡ್ ಅಂತ ತಾಕೀತು ಮಾಡಿದ್ದಾರೆ. ಹೀಗಾಗಿ ಈಗಲಾದರೂ ಇಂಜಿನಿಯರ್ ಗಳು ಎಚ್ಚೆತ್ತುಕೊಂಡು ಕೆಲಸ ಮಾಡ್ತಾರಾ..? ಅಥವಾ ಅದೇ ಹಳೆಯ ರಾಗ ಮತ್ತೆ ಮುಂದುವರೆಸ್ತಾರ..? ಕಾದು ನೋಡಬೇಕಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದೀಪಾವಳಿಯಲ್ಲಿ ಗರಿಷ್ಠ ಮಟ್ಟ ತಲುಪಿದ ಬೆಂಗಳೂರು ವಾಯು ಮಾಲಿನ್ಯ

Next Post

ಮನೆಗಳಲ್ಲಿ ಪಾಠ ಹೇಳಿಕೊಡೋರಿಗೆ ಶಿಕ್ಷಣ ಇಲಾಖೆಯಿಂದ ಶಾಕ್; ಅನಧಿಕೃತ ಟ್ಯೂಷನ್‌ ಕ್ಲಾಸ್‌ಗಳಿಗೆ ಬ್ರೇಕ್

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ಮನೆಗಳಲ್ಲಿ ಪಾಠ ಹೇಳಿಕೊಡೋರಿಗೆ ಶಿಕ್ಷಣ ಇಲಾಖೆಯಿಂದ ಶಾಕ್; ಅನಧಿಕೃತ ಟ್ಯೂಷನ್‌ ಕ್ಲಾಸ್‌ಗಳಿಗೆ ಬ್ರೇಕ್

ಮನೆಗಳಲ್ಲಿ ಪಾಠ ಹೇಳಿಕೊಡೋರಿಗೆ ಶಿಕ್ಷಣ ಇಲಾಖೆಯಿಂದ ಶಾಕ್; ಅನಧಿಕೃತ ಟ್ಯೂಷನ್‌ ಕ್ಲಾಸ್‌ಗಳಿಗೆ ಬ್ರೇಕ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!