ಪಾಕಿಸ್ತಾನದ ವಿರುದ್ದ ಕಳೆದ ವಿಶ್ವಕಪ್ ಹಾಗೂ 2022ರಲ್ಲಿ ಏಷ್ಯಾಕಪ್ T-20 ಸೋಲಿನ ಭಾನುವಾರ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ತೀರಿಸಿಕೊಂಡಿರುವ ಭಾರತ ದೀಪಾವಳಿಗೆ ಮುನಾ ದಿನವೇ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಮಾತನಾಡಿರುವ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ದ ವಿರಾಟ್ ಕೊಹ್ಲಿಯ ಶ್ರೇಷ್ಠ ಇನ್ನಿಂಗ್ಸ್ ಎಂದು ಬಣ್ಣಿಸಿದ್ದಾರೆ.
ಮುಂದುವರೆದು, ಇದು ವಿರಾಟ್ ಕೊಹ್ಲಿಯ ಅತ್ಯುತ್ತಮ ಇನಿಂಗ್ಸ್ ಎಂಬುದರಲ್ಲಿ ಅನುಮಾನವಿಲ್ಲ ಒತ್ತಡದ ಪರಿಸ್ಥಿತಿಯಲ್ಲಿ ಆಡಿ ತಂಡವನ್ನ ಗೆಲುವಿನ ದಡಕ್ಕೆ ಕೊಂಡೊಯ್ದ ರೀತಿ ನೋಡಿದರೆ ಇದು ಭಾರತದ ಇಇನ್ನಿಂಗ್ಸ್ಗಳಲ್ಲಿ ಒಂದು ಪಂದ್ಯದ ಬಳಿಕ ಹೇಳಿದ್ದಾರೆ.
ಪಂದ್ಯದ 13 ಓವರ್ವರೆಗೂ ನಮ್ಮಗೆ ಗೆಲುವಿನ ವಿಶವಾವಿರಲಿಲ್ಲ ಪ್ರತಿ ಓವರ್ ಮುಗಿದಂತೆ ರನ್ರೇಟ್ ಹೆಚ್ಚುತ್ತಲೇ ಹೋಯಿತು ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ತಂಡವನ್ನ ಗೆಲುವಿನ ದಡದತ್ತ ಕೊಂಡೊಯ್ಯುವುದು ಸುಲಭದ ಮಾತಲ್ಲ ಎಂದು ನಾಯಕ ರೋಹಿತ್ ಶರ್ಮಾ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.
ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ(82 ರನ್) ಹಾಗೂ ಹಾರ್ದಿಕ್ ಪಾಂಡ್ಯ(40) 113ರನ್ಗಳ ಬೃಹತ್ ಜೊತೆಯಾಟದ ಫಲವಾಗಿ ಭಾರತ ತನ್ನ 20 ಓವರ್ಗಳ ಕೋಟಾದಲ್ಲಿ 160 ರನ್ಗಳನ್ನು ಗಳಿಸಿ ಪಾಕಿಸ್ತಾನದ ವಿರುದ್ದ ತನ್ನ ಹಳೇ ಸೋಲಿನ ಸೇಡನ್ನು ತೀರಿಸಿಕೊಂಡಿತ್ತು.












