ಬೆಳಕಿನ ಹಬ್ಬ, ದೀಪಗಳ ಹಬ್ಬ ದೀಪಾವಳಿಯನ್ನು ʼದಿವಾಳಿʼ ಎಂದು ಕರೆಯುವುದಕ್ಕೆ ಸಾಕಷ್ಟು ಆಕ್ಷೇಪಗಳು ಇರುವಂತೆಯೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಾಮಾಜಿಕ ಮಾಧ್ಯಮದಲ್ಲಿ ಅವರು ʼದಿವಾಳಿʼಗೆ ಶುಭಾಶಯ ಕೋರಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕನ್ನಡದಲ್ಲಿ ದಿವಾಳಿ ಎಂದರೆ ನಿರ್ಗತಿಕ ಎಂಬ ಅರ್ಥವಿದೆ. ಹಾಗಾಗಿ, ದೀಪಗಳ ಹಬ್ಬಕ್ಕೆ ದೀಪಾವಳಿ ಎಂದೇ ಕರೆಯಬೇಕು, ದಿವಾಳಿ ಎಂದು ಪರಭಾಷೆ ಪದ ಬಳಸಿ ಶುಭಾಶಯ ಕೋರಬಾರದೆಂಬ ಚರ್ಚೆಗಳು ಕೆಲವು ವರ್ಷಗಳಿಂದ ನಡೆಯುತ್ತಿದೆ. ಇದನ್ನೇ ನೆಟ್ಟಿಗರು ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹನ್ನೆರಡನೇ ಕಂತು ಬಿಡುಗಡೆ ಆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಸಿಎಂ ಬೊಮ್ಮಾಯಿ ʼದಿವಾಳಿʼ ಪದವನ್ನು ಬಳಸಿದ್ದಾರೆ.
“ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12 ನೇ ಕಂತನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡುವುದಕ್ಕಿಂತ ಉತ್ತಮವಾದ ದೀಪಾವಳಿ ಉಡುಗೊರೆ ಏನಿದೆ? ಕರ್ನಾಟಕದ 50.36 ಲಕ್ಷ ರೈತರು ರೂ. 1007.26 ಕೋಟಿ ಅನುದಾನದ ಫಲಾನುಭವಿಗಳಾಗಿದ್ದಾರೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು.” ಎಂದು ಸಿಎಂ ಬೊಮ್ಮಾಯಿ ಬರೆದಿದ್ದಾರೆ.
ಇದಕ್ಕೆ ಕನ್ನಡಿಗರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, “ಕನ್ನಡದಲ್ಲಿ ದಿವಾಳಿ ಪದದ ಅರ್ಥ ಗೊತ್ತೇ ಮುಕ್ಯ ಮಂತ್ರಿಗಳೇ?” ಎಂದು ಪ್ರಶ್ನಿಸಿದ್ದಾರೆ.
“ದಿವಾಳಿ, ಜೀ” ಇವೆರಡು ಬಳಕೆಗಳೇ ಸಾಕು ನೀವು ರಾಜಕಾರಣಿಗಳಲ್ಲಿ ಕನ್ನಡತನ ಎಷ್ಟು ಉಳಿದಿದೆ ಎಂದು ತೋರ್ಪಡಿಸಲು…!! ನಮ್ಮತನ ಉಳಿಸಿಕೊಳ್ಳಿ ಸ್ವಾಮಿ ಮುಖ್ಯಮಂತ್ರಿಗಳೇ… ಎಂದು ಮಂಜು ಎಂಬವರು ಪ್ರತಿಕ್ರಿಯಿಸಿದ್ದಾರೆ.
ಡಾ. ಹರಿದಾಸ್ ಎಂಬವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ಅದು ದಿವಾಳಿ ಅಲ್ಲ, ದೀಪಾವಳಿ.. ನೀವು ಮೋದಿಗಾಗಿ ಕೆಲಸ ಮಾಡುತ್ತೀರೋ? ಕನ್ನಡಕ್ಕಾಗಿ ಕೆಲಸ ಮಾಡುತ್ತೀರೋ” ಎಂದು ಪ್ರಶ್ನಿಸಿದ್ದಾರೆ.
“ನಿಮ್ಮಂತ ದೊರೆಗಳಿದ್ದರೆ ದಿವಾಳಿ ಆಗೋದು ಕಂಡಿತ. ದೆಹಲಿಗೆ ಕಪ್ಪ ಕೊಡುವುದನ್ನು ನಿಲ್ಲಿಸಿ. ನಮ್ಮ ಪಟಾಕಿ ದೀಪಾವಳಿ ಮಾಡೋದು ದೆಹಲಿ ದೀವನರು. ದೀಪಾವಳಿ ದಿವಾಳಿ ಅಲ್ಲ.” ಎಂದು ಹೇಮಂತ್ ಎಂಬವರು ಟೀಕಿಸಿದ್ದಾರೆ.
ಸಿಎಂ ಬೊಮ್ಮಾಯಿಗೆ ತಪರಾಕಿ ನೀಡಿದ ಕೆಲವು ನೆಟ್ಟಿಗರ ಪ್ರತಿಕ್ರಿಯೆಗಳು ಇಲ್ಲಿವೆ.
https://twitter.com/KrishKrushik/status/1581928274648698881
https://twitter.com/ArunGalagali/status/1582049535811256322