• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಯೋತ್ಪಾದನೆ ಆರೋಪದಲ್ಲಿ‌ ಬಂಧನ; ಆರು ವರ್ಷಗಳ ಬಳಿಕ ನಿರಪರಾಧಿಯಾಗಿ ಹೊರಬಂದ ಖುರೇಶಿ

ಫೈಝ್ by ಫೈಝ್
October 3, 2022
in ದೇಶ, ವಿದೇಶ
0
ಭಯೋತ್ಪಾದನೆ ಆರೋಪದಲ್ಲಿ‌ ಬಂಧನ; ಆರು ವರ್ಷಗಳ ಬಳಿಕ ನಿರಪರಾಧಿಯಾಗಿ ಹೊರಬಂದ ಖುರೇಶಿ
Share on WhatsAppShare on FacebookShare on Telegram

ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಗೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದಾರೆ ಎಂದು ಆರೋಪಿಸಿ ಬಂಧಿಸಲ್ಪಟ್ಟಿದ್ದ ಅರ್ಶಿ ಖುರೇಶಿ ಅವರನ್ನು ಬರೋಬ್ಬರಿ ಆರು ವರ್ಷಗಳ ಬಳಿಕ ನಿರಪರಾಧಿ ಎಂದು ಬಿಡುಗಡೆಗೊಳಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿದ್ದ ಆರ್ಷಿ ಖುರೇಶಿ ರನ್ನು ಮುಂಬೈನ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.

ADVERTISEMENT

ವಿವಾದಾತ್ಮಕ ಭಾಷಣಗಾರ ಝಾಕಿರ್ ನಾಯಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ನಲ್ಲಿ ಕೆಲಸ ಮಾಡುತ್ತಿದ್ದ ಖುರೇಶಿ ಅವರನ್ನು 2016 ರಲ್ಲಿ ಭಯೋತ್ಪಾದನೆಗೆ ಪ್ರಚೋದನೆ ಆರೋಪದಲ್ಲಿ ಜೈಲಿಗೆ ಹಾಕಲಾಗಿತ್ತು. ಮುಂಬೈನಿಂದ ನಾಪತ್ತೆಯಾಗಿದ್ದ ಅಶ್ಫಾಕ್ ಮಜೀದ್‌ ಹಾಗೂ ಕೇರಳದಿಂದ ನಾಪತ್ತೆಯಾದ ಯುವಕರನ್ನು ಭಯೋತ್ಪಾದಕ ಸಂಘಟನೆ ಸೇರಲು ಖುರೇಶಿ ಪ್ರೇರಣೆ ನೀಡಿದ್ದ ಎಂದು ಆರೋಪವನ್ನು ಖುರೇಶಿ ವಿರುದ್ಧ ಮಾಡಲಾಗಿತ್ತು.

ಇಸ್ಲಾಮಿಕ್ ಸ್ಟೇಟ್ (ಐಎಸ್) ಸೇರಲು ತನ್ನ ಮಗ ಅಶ್ಫಾಕ್ ಸೇರಿದಂತೆ ತನ್ನ ಪತ್ನಿ ಮತ್ತು ಮಗಳನ್ನು ಪ್ರೇರೇಪಿಸಿದ್ದರು ಎಂದು ಮುಂಬೈ ನಿವಾಸಿ ಅಬ್ದುಲ್ ಎಂಬವರು ಖುರೇಶಿ ಮತ್ತು ಇತರ ಇಬ್ಬರ ವಿರುದ್ಧ ಆಗಸ್ಟ್ 2016 ರಲ್ಲಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.

ಶುಕ್ರವಾರ ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್, ಖುರೇಶಿ ವಿರುದ್ಧದ ಎನ್‌ಐಎ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳು ಪತ್ತೆಯಾಗದ ಕಾರಣ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗುತ್ತಿದೆ ಎಂದು ಆದೇಶಿಸಿದ್ದಾರೆ.

“ಕಾಣೆಯಾದ ಯುವಕರು, ಅದರಲ್ಲೂ ವಿಶೇಷವಾಗಿ ಅಶ್ಫಾಕ್, ಇತರ ಸಾರ್ವಭೌಮ ದೇಶಗಳ ಗಡಿಯನ್ನು ದಾಟಿದ್ದಾರೆ ಎಂದು ತೋರಿಸಲು ಎನ್‌ಐಎ ದಾಖಲೆಯಲ್ಲಿ ಯಾವುದೇ ಪುರಾವೆಗಳಿಲ್ಲ. ಭಾರತೀಯ ಪ್ರಜೆಗಳ ಅಕ್ರಮ ತಂಗುವಿಕೆ ಮತ್ತು ಅವರ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಯಾವುದೇ ದೇಶದಿಂದ ಯಾವುದೇ ದೂರುಗಳು ಬಂದ ದಾಖಲೆಗಳಿಲ್ಲ” ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಆರೋಪದ ಪ್ರಕಾರ, ಅಶ್ಫಾಕ್ ಐಸಿಸ್‌ಗೆ ಸೇರಿದ್ದರೆ, ಈ ಪ್ರಕರಣದಲ್ಲಿ ಅವರನ್ನು ಯಾಕೆ ಆರೋಪಿಯನ್ನಾಗಿ ಮಾಡಲಾಗಿಲ್ಲ ಎಂದು ವಿಶೇಷ ನ್ಯಾಯಾಧೀಶ ಎ ಎಂ ಪಾಟೀಲ್ ತಮ್ಮ ಆದೇಶದಲ್ಲಿ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೀಡಿರುವ ಪ್ರಮುಖ ಸಾಕ್ಷಿಗಳಲ್ಲಿ ಅಶ್ಫಾಕ್‌ ಸಹೋದರನ ಸಾಕ್ಷಿ ಹೇಳಿಕೆಗಳೂ ಸೇರಿದೆ, ಅವರು ಟೆಲಿಗ್ರಾಮ್ ಮೂಲಕ ಅಶ್ಫಾಕ್‌ ನ ವಾಯ್ಸ್‌ ಮೆಸೇಜನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದರು.

ತಾನು ಐಎಸ್‌ಗೆ ಸೇರಿದ್ದೇನೆ ಮತ್ತು ಹಿಂತಿರುಗುವುದಿಲ್ಲ ಎಂದು ಅಶ್ಫಾಕ್ ತನ್ನ ಸಹೋದರನಿಗೆ ಧ್ವನಿ ಸಂದೇಶ ಕಳಿಸಿದ್ದ ಎಂದು ಎನ್‌ಐಎ ಹೇಳಿತ್ತು. ಆದರೆ, ಎನ್‌ಐಎ ಆ ಫೋನ್ ಅನ್ನು ವಶಪಡಿಸಿಕೊಂಡಿಲ್ಲ ಎಂದು ಅಶ್ಫಾಕ್ ಸಹೋದರ ನ್ಯಾಯಾಲಯಕ್ಕೆ ತಿಳಿಸಿದ್ದರು.‌

ಪ್ರಕರಣದ ಬಹುಮುಖ್ಯ ಸಾಕ್ಷಿ ಆಗಿರುವ ಫೋನ್‌ ಅನ್ನು ವಶಪಡಿಸದ ಎನ್‌ಐಎ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನ್ಯಾಯಾಲಯ, “ಹಾಗಾದರೆ, ವಾಯ್ಸ್‌ ಮೆಸೇಜ್‌ ಜೊತೆಗೆ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳುವ ಅಗತ್ಯವಿದೆ ಎಂದು ಎನ್ಐಎ ಏಕೆ ಭಾವಿಸಲಿಲ್ಲ ಎಂಬ ಸರಳ ಪ್ರಶ್ನೆ ಉದ್ಭವಿಸಿದೆ. ಎನ್‌ಐಎ ಏಕೆ ಉತ್ತಮ ಸಾಕ್ಷ್ಯವನ್ನು ವಶಕ್ಕೆ ತೆಗೆದುಕೊಂಡಿಲ್ಲ ”ಎಂದು ನ್ಯಾಯಾಲಯ ಕೇಳಿದೆ.

ಪ್ರಾಸಿಕ್ಯೂಷನ್ ವಾದವನ್ನು ಬೆಂಬಲಿಸದ ಅಶ್ಫಾಕ್ ಅವರ ಪೋಷಕರು ಮತ್ತು ಖುರೇಶಿ ಯ ಪಾತ್ರದ ಬಗ್ಗೆ ಏನನ್ನೂ ಹೇಳದ ಅಶ್ಫಾಕ್ ಸಹೋದರನ ಸಾಕ್ಷ್ಯ ಹೇಳಿಕೆಯು, ಎನ್ಐಎ ಪ್ರಕರಣದ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆ ವೇಳೆ ಖುರೇಶಿ ವಿರುದ್ಧ ಸಾಕ್ಷ್ಯ ನೀಡಿದ 57 ಸಾಕ್ಷಿದಾರರಲ್ಲಿ 8 ಮಂದಿ ಖುರೇಶಿ ವಿರುದ್ಧ ಹಗೆತನ ಹೊಂದಿದ್ದರು ಎಂದು ಖುರೇಶಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಖುರೇಶಿ ಯುವಕರ ಮೇಲೆ ಪ್ರಭಾವ ಬೀರಿದ್ದಾರೆ, ಮತ್ತು ಅವರು ಐಎಸ್‌ಗೆ ಸೇರಿದ್ದಾರೆ ಎಂಬುದನ್ನು ತೋರಿಸಲು ಪ್ರಾಸಿಕ್ಯೂಷನ್‌ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು.

Tags: BJPCongress PartyCovid 19ಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

7 ವಿಧಾನಸಭೆಗಳ ಉಪಚುನಾವಣೆ ದಿನಾಂಕ ಪ್ರಕಟ

Next Post

ಪರೇಶ್ ಮೇಸ್ತಾ ಹತ್ಯೆಯಲ್ಲ, ಆಕಸ್ಮಿಕ ಸಾವು: ಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಸಿದ ಸಿಬಿಐ

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
Next Post
ಪರೇಶ್ ಮೇಸ್ತಾ ಹತ್ಯೆಯಲ್ಲ, ಆಕಸ್ಮಿಕ ಸಾವು: ಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಸಿದ ಸಿಬಿಐ

ಪರೇಶ್ ಮೇಸ್ತಾ ಹತ್ಯೆಯಲ್ಲ, ಆಕಸ್ಮಿಕ ಸಾವು: ಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಸಿದ ಸಿಬಿಐ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada