ರಾಷ್ಟ್ರ ರಾಜಕಾರನದಲ್ಲಿ ತೀವ್ರ ಸದ್ದು ಮಾಡಿದ ದೆಹಲಿ ದಂಗಲ್ ಅಂತಿಮ ಹಂತ ತಲುಪಿದ್ದು ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸಮತ ಸಾಬೀತು ಪಡಿಸುವ ಮೂಲಕ ಎಎಪಿಯ ಯಾವೊಬ್ಬ ಶಾಸಕ ಪಕ್ಷಾಂತರ ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಈ ಮೂಲಕ ಬದ್ದವೈರಿ ಬಿಜೆಪಿಗೆ ಆಪರೇಷನ್ ಕಮಲ ಪ್ರಯತ್ನವನ್ನ ವಿಫಲಗೊಳಿಸಿದ ಸ್ಪಷ್ಟ ಸಂದೇಶವನ್ನ ಕೇಜ್ರಿವಾಲ್ ರಾಷ್ಟ್ರ ರಾಜಕೀಯಕ್ಕೆ ಸಾರಿದ್ದಾರೆ.

ಧ್ವನಿ ಮತದ ಮೂಲಕ ನಡೆದ ವಿಶ್ವಾಸಮತ ಪ್ರಕ್ರಿಯೆ ನಡೆಯಿತ್ತು. ವಿಶ್ವಾಸಮತ ಪ್ರಕ್ರಿಯೆ ವೇಳೆ ಹಾಜರಿದ್ದ ಆಮ್ ಆದ್ಮಿ ಪಕ್ಷದ ಶಾಸಕರು ಗೊತ್ತುವಳಿ ಪತ್ರದ ಪರ ಮತ ಚಲಾಯಿಸಿದ್ದರು. ಉಪಸಭಾಪತಿ ರಾಖಿ ಬಿರ್ಲಾ ಜೊತೆ ವಾಗ್ವಾದ ನಡೆಸಿದ ಕಾರಣಕ್ಕೆ ಬಿಜೆಪಿ ಶಾಸಕರನ್ನು ಹೊರಗೆ ಕಳುಹಿಸಲಾಯಿತ್ತು.
ಈ ಮೂಲಕ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಕಾರನದಲ್ಲಿ ಬಿಜೆಪಿಗೆ ಪರ್ಯಾಯ ಪಕ್ಷ ಎಎಪಿ ಎಂಬ ಸ್ಪಷ್ಟ ಸಂದೇಶವನ್ನ ವಿರೋಧಿಗಳಿಗೆ ನೀಡಿದ್ದಾರೆ.






