ಎಡಿಜಿಪಿಯವರೇ ಯಾವ ದೇಶದಲ್ಲಿ ಇದ್ದೀವಿ ನಾವು? 75 ವರ್ಷ ಆಯ್ತು ಸ್ವಾತಂತ್ರ್ಯ ಸಿಕ್ಕಿ, ಸ್ವಾತಂತ್ರ್ಯ ನಮಗೆ ಸಿಗಬೇಕಾದ್ರೆ ತಿಲಕ್, ಸಾವರ್ಕರ್ ಕಾರಣ ಎಂಬುದು ನಿಮಗೆ ಗೊತ್ತಿಲ್ವಾ? ಎಲ್ಲದಕ್ಕೂ ಪರ್ಮಿಷನ್ ತಗೆದುಕೊಳ್ಳಬೇಕಾ? ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು ಎಂದು ಆದೇಶ ಹೊರಡಿಸಿರುವ ಬಗ್ಗೆ ಅವರು ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಸಾವರ್ಕರ್ ತಮ್ಮ ಆಯುಷ್ಯದಲ್ಲಿ ಅರ್ಧ ಆಯುಷ್ಯ ಜೈಲಿನಲ್ಲಿ ಕಳೆದ ವ್ಯಕ್ತಿ, ಸ್ವಾತಂತ್ರ್ಯದಲ್ಲಿ ಹೋರಾಟ ಮಾಡಿದ ವ್ಯಕ್ತಿಗಾಗಿ ಪರ್ಮಿಷನ್ ತಗೆದುಕೊಳ್ಳಬೇಕಾ ನಾವು? ತಾವು ಕ್ಷಮೆ ಕೇಳಬೇಕು ಅಂತ ಅಂತ ಮುತಾಲಿಕ್ ಗುಡುಗಿದರು.

ಈ ರೀತಿ ನಿಮ್ಮ ಹೇಳಿಕೆಯಿಂದ ದೇಶಭಕ್ತಿ, ಸ್ವಾತಂತ್ರ್ಯ, ಸಂವಿಧಾನ ಮೇಲೆ ಪರಿಣಾಮ ಆಗುತ್ತದೆ. ನಿಮ್ಮ ಹೇಳಿಕೆ ಸರಿಯಲ್ಲ, ದೇಶಭಕ್ತರಿಗೆ ಅವಮಾನ ಮಾಡ್ತಿದೀರಿ ನೀವು ಸಾವರ್ಕರ್ ಬಗ್ಗೆ ವಿರೋಧ ಮಾಡ್ತಾರಂದರೆ ಅರ್ಥ ಸಾವರ್ಕರ್ ದೇಶಭಕ್ತಿ ಕಡಿಮೆ ಆಗಿಲ್ಲ. ಆಗೋದೂ ಇಲ್ಲ. ಅದಕ್ಕೆ ಕಲ್ಲು ಹಾಕಕ್ಕೋಗಬೇಡಿ, ಇದನ್ನ ವಿರೋಧಿಸುತ್ತಿದ್ದೇನೆ ಎಂದು ಹೇಳಿದರು.
ಸಾವರ್ಕರ್ ಭಾವಚಿತ್ರ ಇರಿಸಿ ಗಣೇಶೋತ್ಸವ ಮಾಡಲು ಅವಕಾಶ ನೀಡದೇ ಇದ್ದಲ್ಲಿ ಗಣೇಶ ಮೂರ್ತಿಯನ್ನು ಪೊಲೀಸ್ ಠಾಣೆ ಮುಂದೆ ಇರಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.






