ಪಾಕಿಸ್ತಾನದ ಮಧ್ಯಮ ವೇಗಿ ಶಾಹಿನ್ ಅಫ್ರಿದಿ ಗಾಯಗೊಂಡ ಕಾರಣ ಪಾಕಿಸ್ತಾನ ತಂಡದಿಂದ ಹೊರಬಿದ್ದಿದ್ದಾರೆ.
ಈ ಮೂಲಕ ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಆಘಾತಕ್ಕೆ ಒಳಗಾಗಿದೆ. ಶಾಹಿದ್ ಅಫ್ರಿದಿ ಗಾಯಗೊಂಡಿದ್ದು, ನಾಲ್ಕೈದು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ.
ಇದರಿಂದ ಏಷ್ಯಾಕಪ್ ಮಾತ್ರವಲ್ಲ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯಿಂದಲೂ ಹೊರಬಿದ್ದಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಶಾಹಿನ್ ಅಫ್ರಿದಿಗೆ ಬಲ ಮಂಡಿಯಲ್ಲಿ ನೋವು ಕಾಣಿಸಿಕೊಂಡಿದ್ದು, ಅವರನ್ನು ಸ್ಕ್ಯಾನಿಂಗ್ ಗೆ ಒಳಪಡಿಸಲಾಗಿದೆ