ಸಂಸದರು, ಸಚಿವರು ಹಾಗೂ ಸರಕಾರಿ ಅಧಿಕಾರಿಗಳ ವಾಹನ ಖರೀದಿ ಮಿತಿಯನ್ನು ರಾಜ್ಯ ಸರಕಾರ ಹೆಚ್ಚಿಸುವ ಮೂಲಕ ಬಂಪರ್ ಸುದ್ದಿ ನೀಡಿದೆ.
ರಾಜ್ಯ ಸರಕಾರ ಹೊರಡಿಸಿದ ಆದೇಶದಲ್ಲಿ ಸೆಷನ್ಸ್ ನ್ಯಾಯಾಧೀಶರಿಂದ ಹಿಡಿದು ಸಚಿವರು, ಸಂಸದರು, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಕಾರು ಖರೀದಿ ಮಿತಿಯನ್ನು ಹೆಚ್ಚಿಸಲಾಗಿದೆ.
ಸಚಿವರು, ಸಂಸದರು, ಸೆಷನ್ಸ್ ನ್ಯಾಯಾಧೀಶರ ಕಾರು ಖರೀದಿ ಮಿತಿಯನ್ನು 16 ಲಕ್ಷದಿಂದ 23 ಲಕ್ಷ ರೂ. ಗೆ ಏರಿಸಲಾಗಿದೆ. ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಎಸಿಎಸ್, ಕಾರ್ಯದರ್ಶಿಯ ಇಲಾಖಾ ಅಧಿಕಾರಿಗಳ ಕಾರು ಖರೀದಿಗೆ ಆರ್ಥಿಕ ಮಿತಿಯನ್ನು 12ರಿಂದ 20 ಲಕ್ಷಕ್ಕೆ ಏರಿಸಲಾಗಿದೆ.

ಜಿಲ್ಲಾಧಿಕಾರಿ, ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಾರು ಖರೀದಿ ಮಿತಿಯನ್ನು 9ರಿಂದ 18 ಲಕ್ಷಕ್ಕೆ ಏರಿಸಲಾಗಿದೆ.
ಜಿಲ್ಲಾ ಹಂತದ ಅಧಿಕಾರಿಗಳು, ಎಸಸಿ, ಡಿವೈಎಸ್ ಪಿಗ 6.5 ಲಕ್ಷದಿಂದ 12 ಲಕ್ಷಕ್ಕೆ ಏರಿಸಲಾಗಿದೆ. ತಹಸೀಲ್ದಾರ್, ತಾಲೂಕು ಮಟ್ಟದ ಅಧಿಕಾರಿಗಳ ಆರ್ಥಿಕ ಮಿತಿಯನ್ನು 9 ಲಕ್ಷರೂ.ಗೆ ಏರಿಸಲಾಗಿದೆ.











