• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶೀಘ್ರವೇ ಬಿಬಿಎಂಪಿ ಚುನಾವಣೆ..? ; ಮಹತ್ವದ ಸಭೆ ಕರೆದ ರಾಜ್ಯ ಚುನಾವಣಾ ಆಯೋಗ

ಕರ್ಣ by ಕರ್ಣ
August 18, 2022
in ಕರ್ನಾಟಕ, ರಾಜಕೀಯ
0
ಬಿಬಿಎಂಪಿ ಡಿ ಲಿಮಿಟೇಷನ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ : ನಾಲ್ಕೇ ದಿನಕ್ಕೆ 2 ಸಾವಿರ Objection Letter.!
Share on WhatsAppShare on FacebookShare on Telegram

ಬಿಬಿಎಂಪಿ‌ ಚುನಾವಣೆ ಯಾವಾಗ ನಡೆಯುತ್ತೆ.? ರಾಜಕೀಯ ಪಕ್ಷಗಳಿಗೆ ಇದು ಬಹುವಾಗಿ ಕಾಡಿದೆ ಪ್ರಶ್ನೆ. ಈ ಪ್ರಶ್ನೆಗೆ ಇಂದಿನ ರಾಜ್ಯ ಚುನಾವಣಾ ಆಯೋಗ ಪತ್ರ ಉತ್ತರ ನೀಡಿದೆ. ಬೆಂಗಳೂರು ಪಾಲಿಕೆ ಚುನಾವಣೆಗೆ ಶೀಘ್ರವೇ ಮುಹೂರ್ತ ಫಿಕ್ಸ್ ಸಾಧ್ಯತೆಯಿದೆ. ಈ ಸಂಬಂಧ ನಾಡಿದ್ದು ಮಹತ್ವದ ಸಭೆಯನ್ನು ರಾಜ್ಯ ಚುನಾವಣಾ ಅಯೋಗ ಕರೆದಿದೆ.

ADVERTISEMENT

ಬಿಬಿಎಂಪಿ ಚುನಾವಣೆಗೆ ಕೊನೆಗೂ ಕಾಲ‌ ಕೂಡಿಬರುತ್ತಿದೆ. ಚುನಾವಣೆ ಆಗುತ್ತೋ ಇಲ್ಲವೊ ಎಂಬ ಗೊಂದಲ ತುಂಬ ಕಾಡ್ತಿತ್ತು. ಆಳುವ ಬಿಜೆಪಿ ಪಕ್ಷಕ್ಕೆ ಚುನಾವಣೆ ಬೇಡವಾದ್ರೆ ವಿಪಕ್ಷ ಕಾಂಗ್ರೆಸ್ ಕೂಡಲೇ ಚುನಾವಣೆ ಮಾಡಿ ಎಂದು‌ ಒತ್ತಾಯಿಸುತ್ತಿತ್ತು. ಸುಪ್ರಿಂಕೋರ್ಟ್ ಸೂಚನೆ ಹಿನ್ನೆಲೆ ವಾರ್ಡ್ ವಾರು, ಮೀಸಲಾತಿಯ ಪಟ್ಟಿ ಪ್ರಕಟಿಸಿದೆ. ಇದೀಗ ಬಿಬಿಎಂಪಿ ಚುನಾವಣೆಗೆ ಶೀಘ್ರವೇ ಮುಹೂರ್ತ ಫಿಕ್ಸ್ ಆಗಲಿದೆ. ಯಾಕೆಂದರೆ ಆಗಸ್ಟ್ 20ರಂದು ಚುನಾವಣಾ ಆಯೋಗದ ಜತೆ ಪೂರ್ವಭಾವಿ ಸಭೆ ಕರೆದಿದೆ. ಪೂರ್ವಭಾವಿ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ವಾರ್ಡ್ ಮರುವಿಂಗಡಣೆ, ಮೀಸಲಾತಿ ಕುರಿತಂತೆ ಚರ್ಚೆ ಜರುಗಲಿದೆ. ಚುನಾವಣೆ ನಡೆಸೋಕೆ ಅಗತ್ಯವಿರೋ ಕ್ರಮಗಳ ಬಗ್ಗೆಯೂ ಸದಾಶಿವನಗರದಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆಯಲ್ಲಿ ಚರ್ಚೆಯಾಗಲಿದೆ.

ಈಗಾಗಲೇ ಸುಪ್ರಿಂಕೋರ್ಟ್ ಸೂಚನೆ ಹಿನ್ನೆಲೆ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ಅಂತಿಮ‌ ಪಟ್ಟಿ ಪ್ರಕಟಿಸಿದೆ. ಕಳೆದ 15 ದಿನಗಳ ಹಿಂದೆ ವಾರ್ಡ್ ವಾರು ಮೀಸಲಾತಿ ಕರುಡು ಪಟ್ಟಿ ಪ್ರಕಟಿಸಿದ್ದ ಸರ್ಕಾರ, 10 ದಿನಗಳ ಕಾಲ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು. ಈ ಮಧ್ಯೆ ಹೈ ಕೋರ್ಟ್ ಆಗಸ್ಟ್ 16 ರವರೆಗೆ ಅಂತಿಮ ಪಟ್ಟಿ ಪ್ರಕಟಿಸದಂತೆ ಸೂಚಿಸಿತ್ತು. 2000ಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಸಿಕೆಯಾಗಿತ್ತು. ಸಾರ್ವಜನಿಕ ಆಕ್ಷೇಪಣೆ ಪರಿಶೀಲನೆ ನಂತರ ಸರ್ಕಾರ ಅಂತಿಮ‌ ಪಟ್ಟಿ ಪ್ರಟಿಸಿತು. 2011ರ ಜನಗಣತಿಯಂತೆ ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿತ್ತು.

ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್ ಗಳಿಗೆ ಮೀಸಲಾತಿಯಲ್ಲಿ ಮೇಲ್ನೋಟಕ್ಕೆ ಅಂತಹ ದೊಡ್ಡ ಬದಲಾವಣೆ ಕಾಣುತ್ತಿಲ್ಲ. ಎರಡು ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಹಾಗೂ ಮನವಿಗಳು ಸಲ್ಲಿಕೆಯಾಗಿದ್ದರೂ ಹೆಚ್ಚಿನ ಬದಲಾವಣೆಗಳನ್ನು ಸರಕಾರ ಮಾಡಿದಂತೆ ತೋರುತ್ತಿಲ್ಲ.‌ ಕಾಂಗ್ರೆಸ್ ಜೆಡಿಎಸ್ ಕ್ಷೇತ್ರಗಳಲ್ಲಿ ಈ ಹಿಂದಿನಂತೆಯೆ ಮಹಿಳೆಯರಿಗೆ ಹೆಚ್ಚು ಮೀಸಲಾತಿ ನೀಡಲಾಗಿದೆ. ಹೆಚ್ಚಿನ ಸಾಮಾನ್ಯ ಮೀಸಲಾತಿಗಳು ಬಿಜೆಪಿ ಪ್ರಭಾವವಿರುವ ವಾರ್ಡ್ ಗಳಲ್ಲಿ ನಿಗಧಿ ಮಾಡಲಾಗಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದೆಹಲಿ; ಬಿಎಸ್‌ಪಿ ಸಂಸದ ಅನ್ಸಾರಿ ಮನೆ ಮೇಲೆ ಇಡಿ ದಾಳಿ

Next Post

ವಸತಿ ಶಿಕ್ಷಣ ಸಂಘದ ಅಧ್ಯಕ್ಷರಾಗಿ ಶಂಕರಗೌಡ ಆಯ್ಕೆ

Related Posts

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?
ರಾಜಕೀಯ

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?

by ಪ್ರತಿಧ್ವನಿ
May 22, 2026
0

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಆತ್ಮೀಯ ಬಾಂಧವ್ಯ ಇದೀಗ ಜಾಗತಿಕ ರಾಜತಾಂತ್ರಿಕ ವಲಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
Next Post
ವಸತಿ ಶಿಕ್ಷಣ ಸಂಘದ ಅಧ್ಯಕ್ಷರಾಗಿ ಶಂಕರಗೌಡ ಆಯ್ಕೆ

ವಸತಿ ಶಿಕ್ಷಣ ಸಂಘದ ಅಧ್ಯಕ್ಷರಾಗಿ ಶಂಕರಗೌಡ ಆಯ್ಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada