ಭಾರತದ ಎಲ್ಡೋಸ್ ಪಾಲ್ ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ ಟ್ರಿಪಲ್ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಬರ್ಮಿಂಗ್ ಹ್ಯಾಂನಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಎಲ್ಡೋಸ್ ಪಾಲ್ ಜೀವನಶ್ರೇಷ್ಠ ಸಾಧನೆ ಮಾಡುವ ಮೂಲಕ 17.03ಮೀ. ಜಿಗಿದು ಚಿನ್ನದ ಪದಕ ಗೆದ್ದರೆ, ಅಬ್ದುಲ್ಲಾ ಅಬೂಬಕರ್ 17.02ಮೀ. ಬೆಳ್ಳಿ ಪದಕ ಗೆದ್ದರು.

ಭಾರತ ಒಂದೇ ವಿಭಾಗದಲ್ಲಿ 2 ಪದಕ ಗೆದ್ದ ಸಾಧನೆ ಮಾಡಿತು. ಪ್ರವೀಣ್ ಚಿತ್ರವಾಲ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರಿಂದ ಕ್ಲೀನ್ ಸ್ವೀಪ್ ಮಾಡುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡಿತು.
ಎಲ್ಡೋಸ್ ಪಾಲ್ 6 ಪ್ರಯತ್ನಗಳಲ್ಲಿ ಒಂದು ಬಾರಿ ಮಾತ್ರ 17 ಮೀ. ದಾಟಿದರು. ಅದರಲ್ಲೂ ಮೂರನೇ ಜಂಪ್ ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಬೂಬಕರ್ 5ನೇ ಪ್ರಯತ್ನದಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದರು.