ಸರ್ಕಾರವನ್ನು ಪ್ರಶ್ನಿಸಿದವರನ್ನು ಮೌನವಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ಬಳಸುತ್ತಿದೆ. “ಭಾರತದ ಪ್ರತಿ ಸ್ವತಂತ್ರ ಸಂಸ್ಥೆಯೂ ಬಿಜೆಪಿ- ಆರ್ಎಸ್ಎಸ್ ನಿಯಂತ್ರಣದಲ್ಲಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಆರೋಪಿಸಿದರು.
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನ ಬೃಹತ್ ಪ್ರತಿಭಟನೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಪ್ರಶ್ನಿಸಿದವರನ್ನು ಮೌನವಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ಬಳಸುತ್ತಿದೆ. “ಭಾರತದ ಪ್ರತಿ ಸ್ವತಂತ್ರ ಸಂಸ್ಥೆಯೂ ಬಿಜೆಪಿ- ಆರ್ಎಸ್ಎಸ್ ನಿಯಂತ್ರಣದಲ್ಲಿದೆ ಎಂದು ರಾಹುಲ್ ಆರೋಪಿಸಿದ ಅವರು, ಆರ್ಎಸ್ಎಸ್ನ ಆಲೋಚನೆಗಳಿಗೆ ಪ್ರತಿರೋಧ ತೋರಿಸುವುದು ನನ್ನ ಕೆಲಸ. ನಾನು ಅದನ್ನು ಮಾಡುತ್ತಿದ್ದೇನೆ. ನಾನದನ್ನು ಮಾಡಿದ್ದಷ್ಟೂ, ಹೆಚ್ಚೆಚ್ಚು ಮತ್ತು ಬಲವಾಗಿ ದಾಳಿಗೆ ಒಳಗಾಗುತ್ತೇನೆ. ಆದರೆ ನನಗೆ ಸಂತೋಷ. ನನ್ನ ಮೇಲೆ ದಾಳಿ ಮಾಡಿ” ಎಂದು ಹೇಳಿದರು.
“ನಾವು ಪ್ರಜಾಪ್ರಭುತ್ವದ ಸಾವಿಗೆ ಸಾಕ್ಷಿಯಾಗುತ್ತಿದ್ದೇವೆ. ಪ್ರಜಾಪ್ರಭುತ್ವದ ಒಂದೊಂದೇ ಇಟ್ಟಿಗೆಯಿಂದ ಭಾರತವನ್ನು ಕಟ್ಟುವ ಕೆಲಸ ಶತಮಾನದ ಹಿಂದೆ ಆರಂಭವಾಗಿತ್ತು. ಅದನ್ನು ನಿಮ್ಮ ಕಣ್ಣೆದುರೇ ಕೆಡವುತಿದ್ದಾರೆ. ಸರ್ವಾಧಿಕಾರವನ್ನು ಸ್ಥಾಪಿಸುವ ಅವರ ಆಲೋಚನೆಯ ವಿರುದ್ಧ ಯಾರಾದರೂ ಪ್ರತಿಭಟಿಸಿದರೆ, ಅವರ ಮೇಲೆ ನಿಷ್ಕಾರುಣವಾಗಿ ದಾಳಿ ನಡೆಸುವುದು, ಜೈಲಿಗೆ ಹಾಕುವುದು, ಬಂಧಿಸುವುದು ಮತ್ತು ಥಳಿಸುವುದು ನಡೆಯುತ್ತಿದೆ” ಎಂದು ಆರೋಪಿಸಿದರು.
ಬೆಲೆ ಏರಿಕೆ, ನಿರುದ್ಯೋಗ ಮತ್ತು ಸಮಾಜದಲ್ಲಿನ ಹಿಂಸಾಚಾರದಂತಹ ವಿಷಯಗಳ ಬಗ್ಗೆ ಧ್ವನಿ ಎತ್ತಿದರೆ ಸರ್ಕಾರ ತಡೆಯುತ್ತದೆ. ಇದಾಗಬಾರದು ನಾವೆಲ್ಲರೂ ಈ ಕುರಿತು ಧ್ವನಿ ಎತ್ತಬೇಕು. ಇಬ್ಬರು ವ್ಯಕ್ತಿಗಳು ನಡೆಸುತ್ತಿರುವ 2- 3 ಬೃಹತ್ ಉದ್ಯಮಗಳ ಹಿತಾಸಕ್ತಿಗಾಗಿ ಈ ಸರ್ವಾಧಿಕಾರ ನಡೆಯುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.