ಭಾರತದ ಅತಿದೊಡ್ಡ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಕೊನೆಗೂ ಸೋಮವಾರ ಅಂತ್ಯಗೊಂಡಿದೆ. ಬರೋಬ್ಬರಿ ಏಳು ದಿನಗಳ ಕಾಲ 40 ಸುತ್ತುಗಳಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದೆ. ಹರಾಜು ಪ್ರಕ್ರಿಯೆಯು ಮೂರು ದಿನಗಳಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ಅಂದಾಜಿಸಿದ್ದರಾದರೂ, ಎಲ್ಲಾ ಆರಂಭಿಕ ನಿರೀಕ್ಷೆಗಳನ್ನು ಸುಳ್ಳು ಮಾಡಿ ಬಿಡ್ಡಿಂಗ್ ಪ್ರಕ್ರಿಯೆಯು ಏಳು ದಿನಗಳವರೆದೂ ನಡೆದಿದೆ.
ರಿಲಯನ್ಸ್ ಜಿಯೋ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಮಾಡುವ ಕಂಪೆನಿಯಾಗಿ ಹೊರಹೊಮ್ಮಿದೆ. ರೂ 88,000 ಕೋಟಿಗಿಂತ ಹೆಚ್ಚು ಮೊತ್ತ ತೆತ್ತು ಅರ್ಧದಷ್ಟು ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೆ, ಪ್ರೀಮಿಯಂ 700 MHz ಬ್ಯಾಂಡ್ನಲ್ಲಿ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡ ಏಕೈಕ ಒಂದು ಸಂಸ್ಥೆ ರಿಲಯನ್ಸ್ ಜಿಯೋ ಆಗಿದೆ.
ಒಟ್ಟು 72 GHz ನಲ್ಲಿ 51.2 GHz ಸ್ಪೆಕ್ಟ್ರಮ್ ಅನ್ನು ಮಾರಾಟ ಮಾಡಲಾಗಿದ್ದು, ಬಿಡ್ದಾರರಿಂದ ಸರ್ಕಾರ ಮೊದಲ ವಾರ್ಷಿಕ ಕಂತಿನಲ್ಲಿ 13,365 ಕೋಟಿ ರೂ. ಸಂಗ್ರಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಬಳಕೆದಾರರಿಗೆ ಹೆಚ್ಚಿನ ವೇಗದ ಡೇಟಾ ಸಂಪರ್ಕ ಮಾತ್ರವಲ್ಲದೆ, ಯಂತ್ರದಿಂದ ಯಂತ್ರದ ಸಂವಹನಗಳು, ಸಂಪರ್ಕಿತ ವಾಹನಗಳು ಮತ್ತು ಹೆಚ್ಚು ತಲ್ಲೀನಗೊಳಿಸುವ ವರ್ಧಿತ ರಿಯಾಲಿಟಿ ಮತ್ತು ಮೆಟಾವರ್ಸ್ ಅನುಭವಗಳಂತಹ ಹಲವಾರು ಎಂಟರ್ಪ್ರೈಸ್-ಮಟ್ಟದ ಪರಿಹಾರಗಳನ್ನು ಸಕ್ರಿಯಗೊಳಿಸುವ ಸಾಮರ್ಥ್ಯವನ್ನು 5G ಹೊಂದಿದೆ.
ರಿಲಯನ್ಸ್ ಜಿಯೋ 88,078 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು, 700 MHz, 800 MHz, 1800 MHz, 3300 MHz ಮತ್ತು 26 GHz ಬ್ಯಾಂಡ್ಗಳಲ್ಲಿ ಒಟ್ಟು 24.7 GHz ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಿದೆ. ಅದೇ ವೇಳೆ, ದೇಶದ ಎರಡನೇ ಅತಿದೊಡ್ಡ ಟೆಲಿಕಾಂ, ಭಾರ್ತಿ ಏರ್ಟೆಲ್, 900 MHz, 1800 MHz, 2100 MHz, 3300 MHz ಮತ್ತು 26 GHz ಬ್ಯಾಂಡ್ಗಳಲ್ಲಿ ಒಟ್ಟು 19.8 GHz ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಿದ್ದು 43,084 ಕೋಟಿ ರೂ. ಖರ್ಚು ಮಾಡಿದೆ. Vodafone Idea Rs 18,799 ಕೋಟಿ ಖರ್ಚು ಮಾಡಿದ್ದು, 1800 MHz, 2100 MHz, 2500 MHz, 3300 MHz ಮತ್ತು 26 GHz ಬ್ಯಾಂಡ್ಗಳಲ್ಲಿ ಒಟ್ಟು 6,228 MHz ಏರ್ವೇವ್ಗಳನ್ನು ಪಡೆದುಕೊಂಡಿದೆ. ನಾಲ್ಕನೇ ಅರ್ಜಿದಾರ, ಅದಾನಿ ಗ್ರೂಪ್ನ ಅಂಗಸಂಸ್ಥೆಯಾದ ಅದಾನಿ ಡೇಟಾ ನೆಟ್ವರ್ಕ್ಸ್ ಲಿಮಿಟೆಡ್, 212 ಕೋಟಿ ಖರ್ಚು ಮಾಡಿ, 26 GHz ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ನಂತಹ ವ್ಯಾಪಾರದ ಖಾಸಗಿ ನೆಟ್ವರ್ಕ್ಗಳ ಪರಿಹಾರಗಳನ್ನು ನೀಡಲು ಮಾತ್ರ ಬಿಡ್ಡಿಂಗ್ ನಲ್ಲಿ ಭಾಗವಹಿಸುತ್ತಿರುವುದಾಗಿ ಎಂದು ಕಂಪನಿಯು ಈ ಹಿಂದೆ ಸ್ಪಷ್ಟಪಡಿಸಿತ್ತು. ಟೆಲಿಕಾಂ ಗ್ರಾಹಕ ಸೇವಾ ವಲಯಕ್ಕೆ ಬರುವುದಿಲ್ಲ ಎಂದು ಕಂಪೆನಿಯು ತಿಳಿಸಿತ್ತು.
ಅಂತಿಮ ಒಟ್ಟು ಬಿಡ್ಗಳು ನಿರೀಕ್ಷೆಗಳನ್ನು ಮೀರಿದೆ, ಸುಮಾರು 1 ಲಕ್ಷ ಕೋಟಿ ರೂಪಾಯಿಗಳ ಬಿಡ್ಗಳನ್ನು ಸ್ವೀಕರಿಸುವ ಸರ್ಕಾರದ ಆಂತರಿಕ ಅಂದಾಜುಗಳನ್ನು ಮೀರಿಸಿದ್ದು, 1,50,173 ಕೋಟಿಗಳ ಬಿಡ್ಡಿಂಗ್ ನಡೆದಿದೆ. ಮೂಲಗಳ ಪ್ರಕಾರ, 700 MHz ಬ್ಯಾಂಡ್ ಅನ್ನು ಯಾವುದೇ ಕಂಪೆನಿ ಕೊಳ್ಳಲಾರದು ಎಂದು ಸರ್ಕಾರವು ಆರಂಭದಲ್ಲಿ ನಿರೀಕ್ಷಿಸಿತ್ತು, ಅದರಲ್ಲೂ ವಿಶೇಷವಾಗಿ 2016 ಮತ್ತು 2022 ರಲ್ಲಿ ಹಿಂದಿನ ಸ್ಪೆಕ್ಟ್ರಮ್ ಹರಾಜಿನಲ್ಲಿ ಈ ಬ್ಯಾಂಡ್ ಮಾರಾಟವಾಗದೆ ಉಳಿದಿತ್ತು. ಇತರ ಬ್ಯಾಂಡ್ಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆಯ ಕಾರಣದಿಂದಾಗಿ ಇದನ್ನು ಕೊಳ್ಳಲು ಕಂಪೆನಿಗಳು ಹಿಂದೇಟು ಹಾಕಬಹುದು ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ ಈ ಬಾರಿ, 600 MHz ಬ್ಯಾಂಡ್ ಯಾವುದೇ ಕಂಪೆನಿಯು ಖರೀದಿಸಿಲ್ಲ.

700 MHz ಬ್ಯಾಂಡ್, ಹೆಚ್ಚಿನ ಸಾಂದ್ರತೆಯ ಪ್ರದೇಶಗಳಲ್ಲಿ ಕವರೇಜ್ಗೆ ಸೂಕ್ತವಾಗಿರುತ್ತದೆ, ಇದು ಡೇಟಾ ನೆಟ್ವರ್ಕ್ಗಳು ಮತ್ತು ಗ್ರಾಹಕ-ನೇತೃತ್ವದ ಸೇವೆಗಳಿಗೆ ಸೂಕ್ತವಾಗಿದೆ. 39,720 ಕೋಟಿ ಮೌಲ್ಯದಲ್ಲಿ ಇದನ್ನು ಕೊಳ್ಳಲಾಗಿದೆ. ಇದು ಒಟ್ಟು ಬಿಡ್ಗಳಲ್ಲಿ ಎರಡನೇ ಅತಿ ಹೆಚ್ಚು ಮೊತ್ತವನ್ನು ಪಡೆದುಕೊಂಡಿದೆ. ಜಿಯೋ ಕಂಪೆನಿಯು ಈ ಬ್ಯಾಂಡ್ ಅನ್ನು ಕೊಂಡಿದ್ದು, ಇದು 5ಜಿ ಸೇವೆಯಲ್ಲಿ ಜಿಯೋವನ್ನು ಅಗ್ರ ಸ್ಥಾನದಲ್ಲಿ ಇರಿಸಲು ಸಹಾಯಕವಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.
3,300 MHz ಬ್ಯಾಂಡ್ 80,590 ಕೋಟಿ ರೂ.ಗಳಲ್ಲಿ ಅತಿ ಹೆಚ್ಚು ಮೊತ್ತದ ಬಿಡ್ಗಳನ್ನು ಕಂಡಿತು. 26 Ghz ಮಿಲಿಮೀಟರ್ ಬ್ಯಾಂಡ್ – ಇದು ಖಾಸಗಿ 5G ನೆಟ್ವರ್ಕ್ಗಳನ್ನು ಹೊಂದಿಸುವುದು ಸೇರಿದಂತೆ ಎಂಟರ್ಪ್ರೈಸ್ ಮಟ್ಟದ 5G ಅಪ್ಲಿಕೇಶನ್ಗಳಿಗೆ ಸೂಕ್ತವಾಗಿದೆ – ರೂ 14,709 ಕೋಟಿಗಳಲ್ಲಿ ಮೂರನೇ ಅತಿ ಹೆಚ್ಚು ಮೊತ್ತದ ಬಿಡ್ಗಳನ್ನು ಸ್ವೀಕರಿಸಿದೆ.






