• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೊನೆಗೂ ಅಂತ್ಯಗೊಂಡ 5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ: ಅತಿದೊಡ್ಡ ಬಿಡ್‌ದಾರನಾಗಿ ಹೊರಹೊಮ್ಮಿದ ಜಿಯೋ

Shivakumar A by Shivakumar A
August 2, 2022
in ದೇಶ
0
ಕೊನೆಗೂ ಅಂತ್ಯಗೊಂಡ 5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ: ಅತಿದೊಡ್ಡ ಬಿಡ್‌ದಾರನಾಗಿ ಹೊರಹೊಮ್ಮಿದ ಜಿಯೋ
Share on WhatsAppShare on FacebookShare on Telegram

ADVERTISEMENT

ಭಾರತದ ಅತಿದೊಡ್ಡ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಕೊನೆಗೂ ಸೋಮವಾರ ಅಂತ್ಯಗೊಂಡಿದೆ. ಬರೋಬ್ಬರಿ ಏಳು ದಿನಗಳ ಕಾಲ 40 ಸುತ್ತುಗಳಲ್ಲಿ ಬಿಡ್ಡಿಂಗ್‌ ಪ್ರಕ್ರಿಯೆ ನಡೆದಿದೆ. ಹರಾಜು ಪ್ರಕ್ರಿಯೆಯು ಮೂರು ದಿನಗಳಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ಅಂದಾಜಿಸಿದ್ದರಾದರೂ, ಎಲ್ಲಾ ಆರಂಭಿಕ ನಿರೀಕ್ಷೆಗಳನ್ನು ಸುಳ್ಳು ಮಾಡಿ ಬಿಡ್ಡಿಂಗ್‌ ಪ್ರಕ್ರಿಯೆಯು ಏಳು ದಿನಗಳವರೆದೂ ನಡೆದಿದೆ.

ರಿಲಯನ್ಸ್ ಜಿಯೋ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಮಾಡುವ ಕಂಪೆನಿಯಾಗಿ ಹೊರಹೊಮ್ಮಿದೆ. ರೂ 88,000 ಕೋಟಿಗಿಂತ ಹೆಚ್ಚು ಮೊತ್ತ ತೆತ್ತು ಅರ್ಧದಷ್ಟು ಸ್ಪೆಕ್ಟ್ರಮ್‌ ಅನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೆ, ಪ್ರೀಮಿಯಂ 700 MHz ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡ ಏಕೈಕ ಒಂದು ಸಂಸ್ಥೆ ರಿಲಯನ್ಸ್‌ ಜಿಯೋ ಆಗಿದೆ.

ಒಟ್ಟು 72 GHz ನಲ್ಲಿ 51.2 GHz ಸ್ಪೆಕ್ಟ್ರಮ್ ಅನ್ನು ಮಾರಾಟ ಮಾಡಲಾಗಿದ್ದು, ಬಿಡ್‌ದಾರರಿಂದ ಸರ್ಕಾರ ಮೊದಲ ವಾರ್ಷಿಕ ಕಂತಿನಲ್ಲಿ 13,365 ಕೋಟಿ ರೂ. ಸಂಗ್ರಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಬಳಕೆದಾರರಿಗೆ ಹೆಚ್ಚಿನ ವೇಗದ ಡೇಟಾ ಸಂಪರ್ಕ ಮಾತ್ರವಲ್ಲದೆ, ಯಂತ್ರದಿಂದ ಯಂತ್ರದ ಸಂವಹನಗಳು, ಸಂಪರ್ಕಿತ ವಾಹನಗಳು ಮತ್ತು ಹೆಚ್ಚು ತಲ್ಲೀನಗೊಳಿಸುವ ವರ್ಧಿತ ರಿಯಾಲಿಟಿ ಮತ್ತು ಮೆಟಾವರ್ಸ್ ಅನುಭವಗಳಂತಹ ಹಲವಾರು ಎಂಟರ್‌ಪ್ರೈಸ್-ಮಟ್ಟದ ಪರಿಹಾರಗಳನ್ನು ಸಕ್ರಿಯಗೊಳಿಸುವ ಸಾಮರ್ಥ್ಯವನ್ನು 5G ಹೊಂದಿದೆ.

ರಿಲಯನ್ಸ್ ಜಿಯೋ 88,078 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು, 700 MHz, 800 MHz, 1800 MHz, 3300 MHz ಮತ್ತು 26 GHz ಬ್ಯಾಂಡ್‌ಗಳಲ್ಲಿ ಒಟ್ಟು 24.7 GHz ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಿದೆ. ಅದೇ ವೇಳೆ, ದೇಶದ ಎರಡನೇ ಅತಿದೊಡ್ಡ ಟೆಲಿಕಾಂ, ಭಾರ್ತಿ ಏರ್‌ಟೆಲ್, 900 MHz, 1800 MHz, 2100 MHz, 3300 MHz ಮತ್ತು 26 GHz ಬ್ಯಾಂಡ್‌ಗಳಲ್ಲಿ ಒಟ್ಟು 19.8 GHz ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಿದ್ದು 43,084 ಕೋಟಿ ರೂ. ಖರ್ಚು ಮಾಡಿದೆ. Vodafone Idea Rs 18,799 ಕೋಟಿ ಖರ್ಚು ಮಾಡಿದ್ದು, 1800 MHz, 2100 MHz, 2500 MHz, 3300 MHz ಮತ್ತು 26 GHz ಬ್ಯಾಂಡ್‌ಗಳಲ್ಲಿ ಒಟ್ಟು 6,228 MHz ಏರ್‌ವೇವ್‌ಗಳನ್ನು ಪಡೆದುಕೊಂಡಿದೆ. ನಾಲ್ಕನೇ ಅರ್ಜಿದಾರ, ಅದಾನಿ ಗ್ರೂಪ್‌ನ ಅಂಗಸಂಸ್ಥೆಯಾದ ಅದಾನಿ ಡೇಟಾ ನೆಟ್‌ವರ್ಕ್ಸ್ ಲಿಮಿಟೆಡ್, 212 ಕೋಟಿ ಖರ್ಚು ಮಾಡಿ, 26 GHz ಬ್ಯಾಂಡ್‌ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್‌ನಂತಹ ವ್ಯಾಪಾರದ ಖಾಸಗಿ ನೆಟ್‌ವರ್ಕ್‌ಗಳ ಪರಿಹಾರಗಳನ್ನು ನೀಡಲು ಮಾತ್ರ ಬಿಡ್ಡಿಂಗ್‌ ನಲ್ಲಿ ಭಾಗವಹಿಸುತ್ತಿರುವುದಾಗಿ ಎಂದು ಕಂಪನಿಯು ಈ ಹಿಂದೆ ಸ್ಪಷ್ಟಪಡಿಸಿತ್ತು. ಟೆಲಿಕಾಂ ಗ್ರಾಹಕ ಸೇವಾ ವಲಯಕ್ಕೆ ಬರುವುದಿಲ್ಲ ಎಂದು ಕಂಪೆನಿಯು ತಿಳಿಸಿತ್ತು.

ಅಂತಿಮ ಒಟ್ಟು ಬಿಡ್‌ಗಳು ನಿರೀಕ್ಷೆಗಳನ್ನು ಮೀರಿದೆ, ಸುಮಾರು 1 ಲಕ್ಷ ಕೋಟಿ ರೂಪಾಯಿಗಳ ಬಿಡ್‌ಗಳನ್ನು ಸ್ವೀಕರಿಸುವ ಸರ್ಕಾರದ ಆಂತರಿಕ ಅಂದಾಜುಗಳನ್ನು ಮೀರಿಸಿದ್ದು, 1,50,173 ಕೋಟಿಗಳ ಬಿಡ್ಡಿಂಗ್‌ ನಡೆದಿದೆ. ಮೂಲಗಳ ಪ್ರಕಾರ, 700 MHz ಬ್ಯಾಂಡ್ ಅನ್ನು ಯಾವುದೇ ಕಂಪೆನಿ ಕೊಳ್ಳಲಾರದು ಎಂದು ಸರ್ಕಾರವು ಆರಂಭದಲ್ಲಿ ನಿರೀಕ್ಷಿಸಿತ್ತು, ಅದರಲ್ಲೂ ವಿಶೇಷವಾಗಿ 2016 ಮತ್ತು 2022 ರಲ್ಲಿ ಹಿಂದಿನ ಸ್ಪೆಕ್ಟ್ರಮ್ ಹರಾಜಿನಲ್ಲಿ ಈ ಬ್ಯಾಂಡ್ ಮಾರಾಟವಾಗದೆ ಉಳಿದಿತ್ತು. ಇತರ ಬ್ಯಾಂಡ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆಯ ಕಾರಣದಿಂದಾಗಿ ಇದನ್ನು ಕೊಳ್ಳಲು ಕಂಪೆನಿಗಳು ಹಿಂದೇಟು ಹಾಕಬಹುದು ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ ಈ ಬಾರಿ, 600 MHz ಬ್ಯಾಂಡ್ ಯಾವುದೇ ಕಂಪೆನಿಯು ಖರೀದಿಸಿಲ್ಲ.

700 MHz ಬ್ಯಾಂಡ್, ಹೆಚ್ಚಿನ ಸಾಂದ್ರತೆಯ ಪ್ರದೇಶಗಳಲ್ಲಿ ಕವರೇಜ್‌ಗೆ ಸೂಕ್ತವಾಗಿರುತ್ತದೆ, ಇದು ಡೇಟಾ ನೆಟ್‌ವರ್ಕ್‌ಗಳು ಮತ್ತು ಗ್ರಾಹಕ-ನೇತೃತ್ವದ ಸೇವೆಗಳಿಗೆ ಸೂಕ್ತವಾಗಿದೆ. 39,720 ಕೋಟಿ ಮೌಲ್ಯದಲ್ಲಿ ಇದನ್ನು ಕೊಳ್ಳಲಾಗಿದೆ. ಇದು ಒಟ್ಟು ಬಿಡ್‌ಗಳಲ್ಲಿ ಎರಡನೇ ಅತಿ ಹೆಚ್ಚು ಮೊತ್ತವನ್ನು ಪಡೆದುಕೊಂಡಿದೆ. ಜಿಯೋ ಕಂಪೆನಿಯು ಈ ಬ್ಯಾಂಡ್‌ ಅನ್ನು ಕೊಂಡಿದ್ದು, ಇದು 5ಜಿ ಸೇವೆಯಲ್ಲಿ ಜಿಯೋವನ್ನು ಅಗ್ರ ಸ್ಥಾನದಲ್ಲಿ ಇರಿಸಲು ಸಹಾಯಕವಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.

3,300 MHz ಬ್ಯಾಂಡ್ 80,590 ಕೋಟಿ ರೂ.ಗಳಲ್ಲಿ ಅತಿ ಹೆಚ್ಚು ಮೊತ್ತದ ಬಿಡ್‌ಗಳನ್ನು ಕಂಡಿತು. 26 Ghz ಮಿಲಿಮೀಟರ್ ಬ್ಯಾಂಡ್ – ಇದು ಖಾಸಗಿ 5G ನೆಟ್‌ವರ್ಕ್‌ಗಳನ್ನು ಹೊಂದಿಸುವುದು ಸೇರಿದಂತೆ ಎಂಟರ್‌ಪ್ರೈಸ್ ಮಟ್ಟದ 5G ಅಪ್ಲಿಕೇಶನ್‌ಗಳಿಗೆ ಸೂಕ್ತವಾಗಿದೆ – ರೂ 14,709 ಕೋಟಿಗಳಲ್ಲಿ ಮೂರನೇ ಅತಿ ಹೆಚ್ಚು ಮೊತ್ತದ ಬಿಡ್‌ಗಳನ್ನು ಸ್ವೀಕರಿಸಿದೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

India v/s West Indies 2nd T20 : ಗೆಲ್ಲುವ ಪಂದ್ಯದಲ್ಲಿ ಸೋತ ಭಾರತ!

Next Post

ವಿಶ್ವದ ಮೋಸ್ಟ್‌ ವಾಂಟೆಡ್‌ ಅಲ್‌ ಖೈದಾ ಉಗ್ರ ಅಲ್‌ ಜವಾಹಿರಿ ಹತ್ಯೆ

Related Posts

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?
Top Story

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

by ಪ್ರತಿಧ್ವನಿ
May 17, 2026
0

ಬೆಂಗಳೂರು : ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ 3 ರೂಪಾಯಿ ಬೆಲೆ ಏರಿಕೆಯಾಗಿರುವುದಕ್ಕೆ ಕೇಂದ್ರದ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಅಲ್ಲದೆ ಇದರಿಂದ ಜನಸಾಮಾನ್ಯರ ಜೀವನದ ಮೇಲೆ...

Read moreDetails
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
Next Post
ವಿಶ್ವದ ಮೋಸ್ಟ್‌ ವಾಂಟೆಡ್‌ ಅಲ್‌ ಖೈದಾ ಉಗ್ರ ಅಲ್‌ ಜವಾಹಿರಿ ಹತ್ಯೆ

ವಿಶ್ವದ ಮೋಸ್ಟ್‌ ವಾಂಟೆಡ್‌ ಅಲ್‌ ಖೈದಾ ಉಗ್ರ ಅಲ್‌ ಜವಾಹಿರಿ ಹತ್ಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada