ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ LPG ಸಿಲಿಂಡರ್ ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆಗೊಳಿಸಿದ್ದು, ಆಗಸ್ಟ್ 1 ಅಂದರೆ ಇಂದಿನಿಂದ ಜಾರಿಗೆ ಬರಲಿದೆ.
ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ 19 ಕೆಜಿ ಎಲ್.ಪಿ.ಜಿ. ಸಿಲಿಂಡರ್ ಬೆಲೆಯಲ್ಲಿ 36 ರೂಪಾಯಿ ಇಳಿಕೆಯಾದ ನಂತರ, ಪ್ರತಿ ಸಿಲಿಂಡರ್‌ಗೆ 1976.50 ರೂ. ಆಗಿದೆ. ಈ ಹಿಂದೆ ಸಿಲಿಂಡರ್ ಗೆ 2012.50 ರೂ. ಇತ್ತು.
ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ 2141 ರೂ.ಆಗಿದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 2177.50 ರೂ. ಇತ್ತು.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.






