ವನ್ಯ ಸಂಕುಲದಲ್ಲಿ ಹುಲಿ ಮತ್ತು ಅದರ ಹೆಗ್ಗುರುತು ಎಷ್ಟು ಮುಖ್ಯವೋ ಕಾಡಿಗೂ ಸಹ ಅಷ್ಟೇ ಮುಖ್ಯ.
ಬಾರತ ಸೇರಿದಂತೆ ಪ್ರಪಂಚದಾದ್ಯಂತ ಕಂಡು ಬರುವ ಹುಲಿ ಬಿಳಿ ಪಟ್ಟೆ ಹಾಗೂ ಕೇಸರಿ ಬಣ್ಣದಲ್ಲಿ ಕಂಡು ಬರುತ್ತದೆ. ಅಪರೂಪ ಎಂಬಂತೆ ಬಿಲಿ ಹುಲಿಗಳು ಕಂಡು ಬರುತ್ತವೆ.
ಆದರೆ, ಅಪರೂಪದಲ್ಲಿ ಅಪರೂಪ ಎಂದು ಹೇಳಬಹುದಾದ ಬ್ಲ್ಯಾಕ್ ಟೈಗರ್ ಭಾರತದ ಓಡಿಶಾದ ಕಾಡೊಂದರಲ್ಲಿ ಕಂಡು ಬಂದಿದೆ. ಇದು ಸಫಾರಿಗೆ ಹೋಗುವವರ ಕಣ್ಣಿಗು ಸಹ ಕಾನೂವುದ ತೀರಾ ವಿರಳ.
ಇದೀಗ ಬ್ಯ್ಲಾಕ್ ಟೈಗರ್ ಒಂದು ಕಾಡಿನಲ್ಲಿ ಇರಿಸಿದ್ದ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈ ಕುರಿತು ಖುದ್ದು ಹಿರಿಯ IFS ಅಧಿಕಾರಿ ಸುಶಾಂತ್ ನಂದಾ ಟ್ವೀಟ್ ಮಾಡಿದ್ದು ವಿಶ್ವ ಹುಲಿ ದಿನ ಜುಲೈ 29ರಂದು ಟ್ವೀಟ್ ಮಾಡಿದ್ದರು.
ಒಡಿಶಾದ ಸಿಮ್ಲಿಪಾಲ್ ನ್ಯಾಷನಲ್ ಪಾರ್ಕಿನಲ್ಲಿ ಕಪ್ಪು ವರ್ಣದ ಹುಲಿಯ ಚಲನವಲನಗಳು ಸೆರೆಯಾಗಿದ್ದು ಶೇರ್ ಮಾಡಿದ ಅಧಿಕಾರಿಗೆ ನೆಟ್ಟಿಗರು ಶ್ಲಾಘಿಸಿದ್ದಾರೆ.
ಈ ಮೊದಲು 2007ರಲ್ಲಿ ಮೊದಲಿಗೆ ಕಪ್ಪು ಹುಲಿ ಓಡಿಶಾದಲ್ಲಿ ಪತ್ತೆಯಾಗಿತು. ಈ ಹುಲಿ ಜಾತಿಯನ್ನು ಸುಮ್ರತಾ ಎಂದು ಹೆಸರಿಸಲಾಗಿದೆ.
ಸದ್ಯ ವಿಶ್ವದಾದ್ಯಂತ 3900 ಹುಲಿಗಳಿದ್ದು ಭಾರತದಲ್ಲಿ 1900 ಹಿಲಿಗಳಿವೆ. ಕರ್ನಾಟಕ ಒಂದರಲ್ಲೇ ಸುಮಾರು 400ಕ್ಕೂ ಹೆಚ್ಚು ಹುಲಿಗಳಿರುವುದು ವಿಶೇಷ.






