ನಿನ್ನೆಯಿಂದ ಕಾಮನ್ ವೆಲ್ತ್ ಗೇಮ್ಸ್ ನಿಂದ ಭಾರತೀಯರು ಪದಕದ ಭೇಟೆಯ ಶುಭ ಸುದ್ದಿಯನ್ನು ನೀಡುತ್ತಿದ್ದಾರೆ. ಒಂದು ಬೆಳ್ಳಿ, ಒಂದು ಕಂಚು ಮತ್ತು ಒಂದು ಚಿನ್ನದ ಪದಕದೊಂದಿಗೆ ನಿನ್ನೆಯ ದಿನ ಅಂತ್ಯವಾದರೆ. ಇಂದು ಚಿನ್ನದ ಭೇಟೆಯ ಓಟ ಮುಂದುವರೆದಿದೆ. ಹೌದು, ಇಂದು ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನುಂಗಾ ಪುರುಷರ 67 ಕೆಜಿ ಫೈನಲ್ ನಲ್ಲಿ ಚಿನ್ನ ಗೆದ್ದಿದ್ದಾರೆ.
ಪುರುಷರ 67 ಕೆಜಿ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗೆದ್ದಿದ್ದಾರೆ. ಬರ್ಮಿಂಗ್ಹ್ಯಾಮ್ನಲ್ಲಿ ಭಾರತಕ್ಕೆ 2ನೇ ಚಿನ್ನ ಇದಾಗಿದೆ.







